Ripponpet | ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಪೊಲೀಸ್ ಬಿಗಿ ಬಂದೋಬಸ್ತ್

0 508

ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾದವರು ಪ್ರತಿಷ್ಟಾಪಿಸಲಾಗಿರುವ 56ನೇ ವರ್ಷದ ಗಣಪತಿಯ ವಿಸರ್ಜನಾ ಮೆರವಣಿಗೆ ಸೆ.28 ರಂದು ನಡೆಯಲಿದ್ದು ಶಾಂತಿ ಸುವ್ಯವಸ್ಥೆಗಾಗಿ ತೀರ್ಥಹಳ್ಳಿ ಡಿ.ವೈ.ಎಸ್.ಪಿ.ನೇತೃತ್ವದಲ್ಲಿ ಈ ಕೆಳಕಂಡಂತೆ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿವರ್ಗವನ್ನು ನಿಯೋಜಿಸಲಾಗಿದೆ ಎಂದು ಡಿವೈಎಸ್‌ಪಿ ಗಜಾನನ ವಾಮನಸುತಾರ ತಿಳಿಸಿದರು.

ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಎಲ್ಲಾ ಮದ್ಯದಂಗಡಿಗಳನ್ನು ಇಂದು ರಾತ್ರಿ 12 ಗಂಟೆಯಿಂದ ಸೆ.29ರ ಸಂಜೆ 7 ಗಂಟೆ ವರೆಗೆ ಬಂದ್ ಮಾಡುವಂತೆ ಪೊಲೀಸ್ ಇಲಾಖೆ ಆದೇಶಿಸಿದೆ.

ಇಬ್ಬರು ವೃತ್ತ ನಿರೀಕ್ಷಕರು, 9 ಜನ ಪಿಎಸ್‌ಐ, 12 ಜನ ಎಎಸ್‌ಐ ಸೇರಿದಂತೆ 23 ಜನರು ಹೆಚ್.ಸಿ ಮತ್ತು ಪಿಸಿಗಳು 72 ಹಾಗೂ ಗೃಹ ರಕ್ಷಕ ದಳ 100 ಸ್ವಯಂ ಸೇವಕರು 11 ಜನರು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ವಿವರಿಸಿದರು.

ದೇಶಿಯ ಆಯುರ್ವೇದ ಚಿಕಿತ್ಸಾ ಪದ್ದತಿಯಿಂದ ಸದೃಡ ಅರೋಗ್ಯ ಸಾಧ್ಯ ಹೊಂಬುಜ ಶ್ರೀಗಳು

ರಿಪ್ಪನ್‌ಪೇಟೆ: ಹಿಂದಿನ ಕಾಲದಲ್ಲಿಯೂ ನಮ್ಮ ಪೂರ್ವಿಕರು ಆಹಾರದ ಕ್ರಮದ ಮೂಲಕ ರೋಗವನ್ನು ಹತೋಟಿಗೆ ತಂದು ಅದನ್ನು ಗುಣಪಡಿಸುವ ವ್ಯವಸ್ಥೆಯಿತು ನಂತರ ಆಯುರ್ವೇದ ಚಿಕಿತ್ಸಾ ಪದ್ದತಿಯನ್ನಾದರಿಸಿ ಮನೆಮದ್ದು ಸಿದ್ದಪಡಿಸಿ ರೋಗಿಗಳಿಗೆ ನೀಡುವುದರೊಂದಿಗೆ ಮಾರಕ ರೋಗವನ್ನು ಗುಣಪಡಿಸುವ ಪದ್ದತಿ ಇತ್ತು ಈಗ ಕಾಲ ಬದಲಾದಂತೆ ಜನರು ತಾವು ಸೇವಿಸುವ ಆಹಾರ ಕ್ರಮ ಮತ್ತು ಐಷಾರಾಮಿ ಬದುಕಿನಿಂದಾಗಿ ಎಡಬಿಡದೇ ದುಡಿಮೆಯನ್ನೇ ಅವಲಂಬಿಸಿ ಹಣ ಮಾಡುವುದನ್ನೆ ಗುರಿಯನ್ನಾಗಿಸಿಕೊಂಡು ತಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ತಂದು ಕೊಂಡಿದ್ದಾರೆಂದು ಹೊಂಬುಜ ಜೈನ ಮಠದ ಡಾ.ದೇವೇಂದ್ರಕಿರ್ತಿ ಭಟ್ಟಾರಕ ಮಹಾಸ್ವಾಮಿಜಿ ಹೇಳಿದರು.


ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ಆಯೋಜಿಸಲಾದ ಆಯುರ್ವೇದ ಶಿಬಿರ ‘ಆಪ್ತ’ ಸಮಾರಂಭದಲ್ಲಿ ಗಿಡಮೂಲಿಕೆ ಗಳ ವಸ್ತು ಪ್ರದರ್ಶನ ಉದ್ಘಾಟಿಸಿ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ “ಸಾತ್ವಿಕ ಆಹಾರ ಸೇವಿಸಿ, ಉತ್ತಮ ವಿಹಾರ ಕೈಗೊಳ್ಳುವುದನ್ನು ವೈದ್ಯರಾಗುವ ಆಯುರ್ವೇದ ವಿದ್ಯಾರ್ಥಿಗಳು ಆಯುರ್ವೇದ ತಜ್ಞರಿಂದ ಮಾಹಿತಿ ಪಡೆದು ದೇಶದ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ವಿಶಿಷ್ಟ ಸ್ಥಾನ-ಮಾನ-ಗೌರವ ದೊರೆಕಿಸುವಂತಾಗಲಿ” ಎಂದು ಶುಭ ಹಾರೈಸಿದರು.


ಜೈನ ಆಯುರ್ವೇದ ಪದ್ಧತಿ, ಔಷಧ ತಯಾರಿಕೆ, ಕುಂದಾದ್ರಿ ಬೆಟ್ಟದ ಅಮೂಲ್ಯ ಗಿಡಮೂಲಿಕೆಗಳ ಕುರಿತು ಶ್ರೀಗಳು ಉಲ್ಲೇಖಿಸುತ್ತಾ ಪೂಜ್ಯಪಾದ ಮುನಿಶ್ರೀಗಳ ಚಿಕಿತ್ಸಾ ಪದ್ಧತಿ ಸಂಶೋಧನೆಗೆ ಯೋಗ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹೊಂಬುಜ ಅತಿಶಯ ಶ್ರೀಕ್ಷೇತ್ರವು ಮಾನಸಿಕ, ಶಾರೀರಿಕ, ಸ್ವಾಸ್ಥ್ಯ ರಕ್ಷಣೆಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತಲಿದೆಯೆಂದರು.


ವೈದ್ಯರಾದ ಡಾ. ಜೀವಂಧರ ಜೈನ್ ಉಪಸ್ಥಿತರಿದ್ದು ಮಾತನಾಡಿದರು. ಡಾ. ಅರ್ಹಂತ್ ಕುಮಾರ್ ಎ. ಡಾ. ಆನಂದ ಕಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!