ಹೊಸನಗರ ತುಂಗಾ ಅಡಿಕೆ ಮಾರಾಟ ಸೌಹಾರ್ದ ಸಹಕಾರಿ ಸಂಘಕ್ಕೆ ₹ 29.71 ಲಕ್ಷ ನಿವ್ವಳ ಲಾಭ | ಸಹಕಾರಿ ಸಂಘ ನಷ್ಟವಾಗಿದೆ ಎಂದು ಎದೆಗುಂದಬಾರದು ; ವಿನಯ್ ಕುಮಾರ್ ದುಮ್ಮ

0 218


ಹೊಸನಗರ: ಯಾವುದೇ ಸಹಕಾರಿ ಸಂಘಗಳು ಒಂದೆರಡು ವರ್ಷ ನಷ್ಟವಾಯಿತು ಎಂದು ಎದೆಗುಂದದೆ ನಿಷ್ಠೆಯಿಂದ ಕೆಲಸ ಮಾಡಿದಾಗ ಮುಂದಿನ ದಿನದಲ್ಲಿ ಲಾಭಾಂಶ ಕಾಣಬಹುದು ಎಂದು ತುಂಗಾ ಅಡಿಕೆ ಮಂಡಿಯ ಅಧ್ಯಕ್ಷ ವಿನಯ್ ಕುಮಾರ್ ದುಮ್ಮರವರು ಹೇಳಿದರು.


ಹೊಸನಗರ ಎಪಿಎಂಸಿ ಯಾರ್ಡ್ ಆವರಣದಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ತುಂಗಾ ಅಡಿಕೆ ಮಂಡಿಯನ್ನು ಪ್ರಾರಂಭಿಸಿದಾಗ ನಾಲ್ಕು ವರ್ಷಗಳ ಕಾಲ ನಷ್ಟದಲ್ಲಿ ನಡೆಸಿಕೊಂಡು ಬಂದಿದ್ದೇವೆ ಅಂದು ನಷ್ಟವಾಯಿತು ಎಂದು ಮುಚ್ಚಿದ್ದರೆ ಈಗ ಈ ಲಾಭಾಂಶ ಬರುತ್ತಿರಲಿಲ್ಲ ನಾವು ಎರಡು ವರ್ಷಗಳಿಂದ ಲಾಭಾಂಶಗಳಿಸುತ್ತಾ ಬರುತ್ತಿದ್ದು ಈ ವರ್ಷ 29,71,611ರೂಪಾಯಿಗಳಷ್ಟು ಲಾಭಗಳಿಸಿದ್ದೇವೆ ನಮ್ಮ ಸಂಸ್ಥೆ ಉಳಿಸಲು ಬೆಳೆಸಲು ಸಹಕಾರಿ ಧುರೀಣ ಆರ್.ಎಂ. ಮಂಜುನಾಥ್ ಗೌಡ ಹಾಗೂ ಸಂಘದ ಸದಸ್ಯರ ಪಾತ್ರ ಹಿರಿದಾಗಿದೆ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಲಾಭಾಂಶಗಳಿಸುವುದರ ಜೊತೆಗೆ ನಮ್ಮದೇ ಆದಾ ಸ್ವಂತ ಬಿಲ್ಡಿಂಗ್ ಕಟ್ಟುವ ಯೋಜನೆ ಹಾಗೂ ಸದಸ್ಯರಿಗೆ ಡಿವಿಡೆಂಟ್ ನೀಡುವ ಯೋಜನೆ ಹೊಂದಿದ್ದು ಸದಸ್ಯರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.


ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ಸಹಕಾರಿ ದುರೀಣರಾದ ಆರ್.ಎ. ಮಂಜುನಾಥ ಗೌಡರವರು ಉದ್ಘಾಟಿಸಿ ಮಾತನಾಡಿ ಯಾವುದೇ ಸಹಕಾರಿ ಸಂಸ್ಥೆ ಬೆಳೆಯಬೇಕಾದರೆ ಹಸಿವು ಇರಬೇಕು ಮಾಡುವ ಛಲವಿರಬೇಕು ಅದು ತುಂಗಾ ಅಡಿಕೆ ಮಂಡಿಯ ಅಧ್ಯಕ್ಷ ವಿನಯ್ ಕುಮಾರ್‌ರವರಲ್ಲಿತ್ತು ಇವರ ಛಲದಿಂದ ಈ ಸಂಸ್ಥೆ ಲಾಭಾಂಶಗಳಿಸುವುದರಲ್ಲಿ ಯಶಸ್ವಿಯಾಗಿದೆ ಎಂದರು.


ಹೊಸನಗರ ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ ಭೂಮಿ ತಾಯಿಗೆ ಹಾಕಿದ ಬಂಡವಾಳ ಎಲ್ಲಿಗೂ ಹೋಗುವುದಿಲ್ಲ ನಮ್ಮ ರೈತರು ಭೂಮಿಯನ್ನು ನಂಬಿ ಬದುಕುತ್ತಿದ್ದೂ ಅವರಿಗೆ ಇನ್ನೂ ಹೆಚ್ಚಿನ ಫಸಲು ನೀಡಲೀ ಎಂದು ಹಾರೈಸಿದರು.


ಈ ಸಭೆಯಲ್ಲಿ ತುಂಗಾ ಅಡಿಕೆ ಮಂಡಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರಸ್ವಾಮಿ, ಉಪಾಧ್ಯಕ್ಷರಾದ ಮಾಲತೀಶ್, ದಿನೇಶ್, ನಾಗೇಶ್, ಜಿ.ಎಸ್ ರವಿ, ಜಯದೇವಪ್ಪ, ನವೀನ್‌ಕುಮಾರ್, ಮಹೇಶ್, ಸುಧೀರ್ ಕುಮಾರ್, ಬಷೀರ್ ಅಹಮ್ಮದ್, ಲೇಖನಮೂರ್ತಿ, ವಿನಾಯಕ, ವೀರಮ್ಮ, ಹೇಮಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!