ಮೂಲಭೂತ ಸೌಲಭ್ಯದಿಂದ ವಂಚಿತರಾದ ಹೊಸನಗರದ ಅಗ್ನಿಶಾಮಕ ದಳ ಸಿಬ್ಬಂದಿಗಳು !

0 39

ಹೊಸನಗರ : ಪಟ್ಟಣದ ಅಗ್ನಿಶಾಮಕ ದಳ ಘಟಕ ಪ್ರಾರಂಭವಾಗಿ ದಶಕ ಕಳೆದರೂ ಇಲ್ಲಿರುವ 24 ಸಿಬ್ಬಂದಿಗಳಿಗೆ ಕೇವಲ ಎರಡು ವಸತಿಗೃಹ ಮಾತ್ರವಿದ್ದು ಉಳಿದ ಸಿಬ್ಬಂದಿಗಳಿಗೆ ಅಪಾರ್ಟ್‌ಮೆಂಟ್ ಕಟ್ಟಲು ಜಾಗದ ಸೌಲಭ್ಯವಿದ್ದರೂ ವಸತಿಗೃಹಗಳ ಕೊರತೆ ಇದೆ.

ಹೊಸನಗರ ಮಲೆನಾಡಿನ ಹೃದಯ ಭಾಗದಲ್ಲಿದ್ದು ರಾಜ್ಯದಲ್ಲಿ ಅತಿ ವಿಸ್ತಿರ್ಣ ಹೊಂದಿರುವ ತಾಲೂಕು ಆಗಿದ್ದು ಜಾನುವಾರು ಕೊಟ್ಟಿಗೆ, ತೋಟ, ಮನೆಗಳಿಗೆ ಪದೇ ಪದೇ ಅಗ್ನಿ ಅನಾಹುತಗಳು ಸಂಭವಿಸುತ್ತಿದ್ದು ಇಲ್ಲಿನ ಸಿಬ್ಬಂದಿಗಳ ತಂಡ ತಕ್ಷಣ ಸ್ಪಂದಿಸಿ ಹೆಚ್ಚಿಗೆ ಅನುಭವಿಸಬಹುದಾದ ದುರಂತಗಳನ್ನು ತಪ್ಪಿಸಿರುವುದು ದಾಖಲಾಗಿದೆ.

ಅಗ್ನಿಶಾಮಕ ದಳದ ಘಟಕಕ್ಕೆ ನೀರಿನ ಸೌಲಭ್ಯ ಅತೀ ಮುಖ್ಯವಾಗಿದ್ದ ನೀರಿನ ಸಂಗ್ರಹಕ್ಕೆ ಬೋರ್ವೆಲ್ ನ ಅಗತ್ಯತೆ ಇದ್ದು ಶಾಸಕರು ಈ ನಿಟ್ಟಿನಲ್ಲಿ ತತಕ್ಷಣ ಸ್ಪಂದಿಸಿ ತುರ್ತು ಪರಿಹಾರ ಕಲ್ಪಿಸುವಂತೆ ನಾಗರಿಕರು ಆಗ್ರಪಡಿಸಿದ್ದಾರೆ.

ಹೊಸನಗರ ಘಟಕಕ್ಕೆ ಕೇವಲ ಒಂದು ವಾಹನ ಮಾತ್ರವಿದ್ದು ಇನ್ನೊಂದು ವಾಹನದ ಅಗತ್ಯವಿದ್ದು ಶಾಸಕರು ಅಗ್ನಿಶಾಮಕ ದಳದ ಘಟಕಕ್ಕೆ ಭೇಟಿ ನೀಡಿ ಘಟಕಕ್ಕೆ ಅವಶ್ಯಕತೆ ಇರುವ ಬೋರ್ವೆಲ್, ರಸ್ತೆ, ಆವರಣ ಗೋಡೆ, ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಶಿಸಿದ್ದಾರೆ.

ಮುಖ್ಯ ರಸ್ತೆಯಿಂದ ಅಗ್ನಿಶಾಮಕ ದಳದ ಕಚೇರಿಗೆ ತೆರಳುವ ದಾರಿಗೆ ರಸ್ತೆ ಇಲ್ಲವಾಗಿದ್ದು ಮಳೆಗಾಲವಾಗಿದ್ದರಿಂದ ಕೆಸರಿನಿಂದ ಕೂಡಿದ ದಾರಿಯಲ್ಲಿ ಕಚೇರಿಗೆ ತೆರಳಬೇಕಾದ ಪ್ರಸಂಗ ಅನಿವಾರ್ಯವಾಗಿದ್ದು ತುರ್ತಾಗಿ ರಸ್ತೆ ನಿರ್ಮಾಣವು ಅತ್ಯಗತ್ಯವಾಗಿದೆ.

Leave A Reply

Your email address will not be published.

error: Content is protected !!