ಅಕ್ರಮವಾಗಿ ಸಾಗಿಸುತ್ತಿದ್ದ ಗೋವು ರಕ್ಷಣೆ ; ವಾಹನ ಬಿಟ್ಟು ಆರೋಪಿಗಳು ಪರಾರಿ !

0 45

ರಿಪ್ಪನ್‌ಪೇಟೆ : ಪಟ್ಟಣದ ಸಮೀಪದ ಗವಟೂರು ಗ್ರಾಮದ ಬೆಳಕೋಡಿನಲ್ಲಿ ಶನಿವಾರ ತಡರಾತ್ರಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವು ಒಂದನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.


ಶನಿವಾರ ತಡರಾತ್ರಿ ಒಂದು ಗಂಟೆಯ ಸಮಯದಲ್ಲಿ ಗವಟೂರು ಗ್ರಾಮದ ಬೆಳಕೋಡಿನಲ್ಲಿ ಒಂದು ಬೈಕ್ ಹಾಗು ಒಂದು ಲಗೇಜ್ ಗೂಡ್ಸ್ ಆಟೋ (KA15-9389) ಅನುಮಾಸ್ಪದವಾಗಿ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಅನುಮಾನ ಬಂದು ಬೈಕಿನಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದಾಗ ಬೈಕಿನಲ್ಲಿ (KA14EY4148) ಸವಾರಿ ಮಾಡುತ್ತಿದ್ದ ವ್ಯಕ್ತಿ ಹಾಗೂ ಗೂಡ್ಸ್ ಆಟವನ್ನು ಚಾಲನೆ ಮಾಡುತ್ತಿದ್ದ ಚಾಲಕ ಬೈಕ್ ಹಾಗೂ ಗೂಡ್ಸ್ ಆಟೋವನ್ನು ಬಿಟ್ಟು ಪರಾರಿಯಾದಾಗ ಗ್ರಾಮಸ್ಥರು ಗೂಡ್ಸ್ ಆಟೋವನ್ನು ಪರಿಶೀಲಿಸಿದಾಗ ಹೋರಿ ಕರು ಒಂದನ್ನು ಹಿಂಸಾತ್ಮಕವಾಗಿ ಕಾಲುಗಳನ್ನು ಹಾಗು ಕುತ್ತಿಗೆಯನ್ನು ಹಗ್ಗದಿಂದ ಕಟ್ಟಿ ಹಾಕಿದ್ದರು.

ಗ್ರಾಮಸ್ಥರು ತಕ್ಷಣ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪಿಎಸ್ಐ ಪ್ರವೀಣ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆರೋಪಿಗಳು ಬಿಟ್ಟು ಹೋದ ವಾಹನಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!