ಪಾಶ್ಚಿಮಾತ್ಯ ದೇಶದಲ್ಲಿ ಭಾರತೀಯ ಧರ್ಮ ಸಂಸ್ಕೃತಿಯ ಅನುಕರಣೆ ; ಹೊಂಬುಜ ಶ್ರೀಗಳು

0 7

ರಿಪ್ಪನ್‌ಪೇಟೆ: ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಧರ್ಮ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿದ್ದರೇ ನಮ್ಮ ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ಸಂಸ್ಕೃತಿ ಸಂಸ್ಕಾರದಿಂದ ದೂರವಾಗುತ್ತಿದ್ದಾರೆಂದು ಹೊಂಬುಜ ಜೈನ ಮಠದ ಡಾ.ಶ್ರೀಮದ್ದ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಜೈನರ ದಕ್ಷಿಣ ಕಾಶಿಯೆಂದೆ ಪ್ರಖ್ಯಾತಿ ಹೊಂದಿರುವ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಆಯೋಜಿಸಲಾದ ಭಗವಾನ್ ಪಾರ್ಶ್ವನಾಥ ಸ್ವಾಮಿ ಮತ್ತು ಮಾತೆ ಪದ್ಮಾವತಿ ಅಮ್ಮನವರ ವಾರ್ಷಿಕ ರಥೋತ್ಸವ ಮತ್ತು ಸಿದ್ದಾಂತ ಕೀರ್ತಿ ಪ್ರಶಸ್ತಿ ಪ್ರದಾನ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಐತಿಹಾಸಿಕವಾಗಿ ಪೌರಾಣಿಕವಾಗಿ ಸ್ಥಳ ಪುರಾಣಗಳ ಆಧಾರಗಳ ಮೇಲೆ ಅವಲೋಕಸಿದಾಗ ಇಲ್ಲಿನ ಗುರುಪೀಠವು ಪುರಾತನವಾಗಿರುವುದೆಂದು ತಿಳಿಯುತ್ತಾ ಆಚಾರ್ಯ ಶ್ರೀ ಕುಂದ ಕುಂದರ ಪರಂಪರೆಯ ಇಲ್ಲಿನ ಪೂಜ್ಯರು ಈ ನಾಡಿಗೆ ಧಾರ್ಮಿಕ, ನೈತಿಕ ಮಾನವೀಯ ಮೌಲ್ಯಗಳ ಜೊತೆಗೆ ಉತ್ತಮ ಸುಸಂಸ್ಕಾರಗಳನ್ನು ನೀಡುತ್ತಾ ಅಹಿಂಸಾ ತತ್ವಪರಿಪಾಲನೆಯನ್ನು ಭೋದಿಸುತ್ತಾ ಬಂದಿದ್ದು ಪೀಠವು ನಿರಂತರ ಧರ್ಮಪ್ರಭಾವನೆಯ ಮೂಲಕ ಆತ್ಮಕಲ್ಯಾಣದೊಂದಿಗೆ ಸಮಾಜದ ಕಲ್ಯಾಣ ಮಾಡುತ್ತಾ ಸಮಾಜದಲ್ಲಿ ಸಾಮರಸ್ಯ ಬೆಳಸುವುದರೊಂದಿಗೆ ಭಾರತ ದೇಶದ ಹೃದಯ ವೈಶಾಲತೆ ಹಳೇಯ ಜೀವನ ಪದ್ದತಿಯೊಂದಿಗೆ ದೇಶ ಬೆಳಸುವಲ್ಲಿ ಅಚರಣೆಗಳು ಎಲ್ಲರಿಗೂ ದೊರಕುವಂತಾಲಿ ಎಂದು ಆಶಿಸಿದರು.


ಇದೇ ಸಂದರ್ಭದಲ್ಲಿ ಮೈಸೂರಿನ ಸಾಹಿತಿಗಳು ಹಾಗೂ ಸಂಶೋಧಕರು ಮತ್ತು ಉಪನ್ಯಾಸಕರಾದ ಪ್ರೋ.ಶುಭಚಂದ್ರರಿಗೆ ಮಠದಿಂದ ಕೊಡ ಮಾಡುವ “ಸಿದ್ದಾಂತ ಕೀರ್ತಿ’’ ಪ್ರಶಸ್ತಿ ಫಲಕ ಮತ್ತು ನಗದಯನ್ನು ಹೊಂಬುಜ ಜೈನಮಠಾಧ್ಯಕ್ಷ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ ನೀಡಿ ಸನ್ಮಾನಿಸಿ ಆಶೀರ್ವದಿಸಿದರು.

ಸಿದ್ದಾಂತ ಕೀರ್ತಿ ಪ್ರಶಸ್ತಿ ಪರಸ್ಕೃತ ಪ್ರೋ.ಶುಭಚಂದ್ರರು ಮಾತನಾಡಿ ಪ್ರಶಸ್ತಿಗಾಗಿ ನಾನು ಎಂದು ಅರ್ಜಿ ಹಾಕಿದವನಲ್ಲ ಆ ಪ್ರಶಸ್ತಿ ಪುರಸ್ಕಾರಗಳು ನಮ್ಮ ವ್ಯಕ್ತಿತ್ವವನ್ನು ಗುರುತಿಸಿ ಹುಡುಕಿಕೊಂಡು ಬರುವಂತಾಗಬೇಕು ಎಂಬುದಕ್ಕೆ ಶ್ರೀಮಠದಿಂದ ನೀಡುತ್ತಿರುವ ಸಿದ್ದಾಂತ ಕೀರ್ತಿ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸಿದೆ ಎಂದು ಹೇಳಿ ಧರ್ಮ ಎಂಬುದು ಹೊಸಲಿನ ಮೇಲಿನ ದೀಪ ಅದು ಹೊರಗೂ ಮತ್ತು ಒಳಗಿನ ಕತ್ತಲೆ ದೂರಮಾಡಿ ಅತ್ಮ ಮತ್ತು ಸಮಾಜವನ್ನು ಬೆಳಗುವ ದೀಪಾವಾಗಲಿ ಎಂದರು.
ಸಮಾರಂಭದಲ್ಲಿ ವಿಜಯಪಾಟ್ನಿ, ಪವನ್‌ಕುಮರ್, ಚೂಡಾಮಣಿ ಜೈನ್, ರವಿಕಿರಣ್, ಮನೋಜ್‌ಕುಮಾರ್ ಪಾಟೀಲ್, ನವೀನ್‌ಜೈನ್, ನಕುಲ್‌ಜೈನ್ ಇನ್ನಿತರ ಜೈನ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

ಶಾಲಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಧರ್ಮರಾಜ ಇಂದ್ರ ಮಂಗಲಾಚರಣೆ ಮಾಡಿದರು. ಮಠದ ಅಡಳಿತಾಧಿಕಾರಿ ಪ್ರಕಾಶ ಮಗದಮ್ ಸ್ವಾಗತಿಸಿದರು.

Leave A Reply

Your email address will not be published.

error: Content is protected !!