ರಿಪ್ಪನ್‌ಪೇಟೆ: ಸಮೀಪದ ಮಳಲಿಕೊಪ್ಪ ಸಿದ್ದಮ್ಮ ನಾಗಪ್ಪಗೌಡ (93) ತಮ್ಮ ಸ್ವಗೃಹದಲ್ಲಿ ಶನಿವಾರ ಸಂಜೆ ನಿಧನ ಹೊಂದಿದರು.
ಓರ್ವ ಪುತ್ರಿ, ಏಳು ಪುತ್ರರನ್ನು ಅಗಲಿದ ಇವರು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ, ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಎನ್.ವರ್ತೇಶ್ ಹಾಗೂ ಅಮೃತ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾಗಿದ್ದ ದಿ.ದಾನೇಶ್ ಹಾಗೂ ಗ್ರಾ.ಪಂ. ಸದಸ್ಯ ಬಸವರಾಜರವರ ಮಾತೃಶ್ರೀ. ಸಿದ್ದಮ್ಮ ನಾಗಪ್ಪಗೌಡ ಇವರು ಮಳಲಿಕೊಪ್ಪದಲ್ಲಿ ಎಳ್ಳಷ್ಟಮಿ ಪೂಜೆಯೊಂದಿಗೆ ಹುಂಚ ಸೀಮೆ ಮತ್ತು ಮಲೆನಾಡು ಸೀಮೆಯಲ್ಲಿ ಜನಮಾನಸದಲ್ಲಿ ಚಿರಪರಿಚಿತರಾಗಿ ಎಲೆಮರೆಯ ಕಾಯಿಯಂತೆ ತಮ್ಮ ಸೇವಾ ಮನೋಭಾವನೆಯೊಂದಿಗೆ ಜನಪ್ರಿಯತೆ ಗಳಿಸಿದ್ದರು.
ಇವರ ನಿಧನಕ್ಕೆ ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ, ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತರಾಧ್ಯ ಮಹಾಸ್ವಾಮಿಜಿ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿ ವೀರಶೈವ ಸಮಾಜದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.