Hosanagara | ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿ ವಶಕ್ಕೆ

0 1,094

ಹೊಸನಗರ: ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ (Illegal Sand) ಸಂಪೂರ್ಣವಾಗಿ ಹಿಡಿತದಲಿಲ್ಲ ಎಂಬುದಕ್ಕೆ ಹೊಸನಗರದ (Hosanagara) ಪೊಲೀಸ್ ಇಲಾಖೆ (Police department) ಶುಕ್ರವಾರ ರಾತ್ರಿ ಮರಳು ತುಂಬಿದ ಎರಡು ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡಿರುವುದೇ ಸಾಕ್ಷಿಯಾಗಿದೆ.

ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಆದೇಶದ ಮೇರೆಗೆ ಹೊಸನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ವೈ.ಕೆ ಹಾಗೂ ಸಿಬ್ಬಂದಿಗಳು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಒಂದು ಲಾರಿಯನ್ನು ಬಿಳ್ಳೋಡಿ ಗ್ರಾಮದಲ್ಲಿ ಹಾಗೂ ಮತ್ತೊಂದು ಲಾರಿಯನ್ನು ಸುತ್ತ ಗ್ರಾಮದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!