ಅರಣ್ಯ ರಕ್ಷಕರ ಸಾವಿಗೆ ಪ್ರಾಣಿಗಳು ಮಾತ್ರವಲ್ಲ ಮನುಷ್ಯನೂ ಕಾರಣನಾಗಿರುವುದು ವಿಷಾದದ ಸಂಗತಿ

0 55

ಹೊಸನಗರ: ದೇಶ ರಕ್ಷಣೆಗಾಗಿ ಶ್ರಮಿಸುವ ಪ್ರತಿಯೊಬ್ಬರ ಜೀವವೂ ಅಮೂಲ್ಯ. ಅವರು ಸಮಾಜದಲ್ಲಿ ಮೌಲ್ಯಯುತ ಜೀವನ ನಡೆಸುವಂತಾಗಬೇಕು ಎಂದು ಹೊಸನಗರದ ಪ್ರಧಾನ ವ್ಯವಹಾರ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ರವಿ ಕುಮಾರ್ ಕೆ. ಹೇಳಿದರು.

ಐತಿಹಾಸಿಕ ತವರು ಬಿದನೂರು ನಗರದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮೃತ ಅರಣ್ಯ ಸಿಬ್ಬಂದಿಗಳ ಸ್ಮರಣಾರ್ಥ ನೂತನ ಸ್ಮಾರಕ ಲೋಕಾರ್ಪಣೆ ಮಾಡಿ ನಂತರ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಅರಣ್ಯ ರಕ್ಷಕರ ಸಾವಿಗೆ ಪ್ರಾಣಿಗಳು ಮಾತ್ರವಲ್ಲ ಮನುಷ್ಯನೂ ಕಾರಣನಾಗಿರುವುದು ವಿಷಾದದ ಸಂಗತಿ. ದೇಶ ರಕ್ಷಣೆಗಾಗಿ ಹೋರಾಡಿ ಪ್ರಾಣಾರ್ಪಣೆ ಮಾಡುವ ಸೈನಿಕನಿಗೆ ದೊರೆಯುವ ಗೌರವ. ದೇಶದ ಅಮೂಲ್ಯ ವನ್ಯ ಸಂಪತ್ತನ್ನು ರಕ್ಷಿಸುವ ಅರಣ್ಯ ಸಿಬ್ಬಂಧಿ ಕರ್ತವ್ಯ ನಿರತರಾದಾಗ ಮೃತರಾದಾಗಲೂ ಅದೇ ರೀತಿಯ ಗೌರವ ಸೌಲಭ್ಯಗಳು ದೊರೆಯುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾ.ಅ..ಸೇ ಉಪ ಅರಣ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಸಂತೋಷ್ ಕುಮಾರ್ ಕೆಂಚಪ್ಪನವರ್ ಮಾತನಾಡಿ, ಅರಣ್ಯವನ್ನು ರಾಷ್ಟ್ರೀಯ ಸಂಪತ್ತು ಎಂದೇ ಭಾವಿಸಿ ಅದರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಅರಣ್ಯದ ಮಹತ್ವದ ಕುರಿತು ಎಲ್ಲರಲ್ಲೂ ಅರಿವು ಮೂಡಬೇಕು ಎಂದ ಅವರು, ಅರಣ್ಯ ರಕ್ಷಕರು ಬಹುತೇಕ ಸಂದರ್ಭಗಳಲ್ಲಿ ತಮ್ಮ ಜೀವದ ಹಂಗನ್ನು ಕಾರ್ಯನಿರ್ವಹಿಸುತ್ತಿದ್ದಾರೆ. ಅರಣ್ಯ ರಕ್ಷಣೆಗೆ ಕಾರಣರಾಗಿರುವ ಮನುಷ್ಯ ತನ್ನ ದುರಾಸೆಯನ್ನು ಬಿಟ್ಟು, ಇಲಾಖೆಯೊಂದಿಗೆ ಸಹಕರಿಸಬೇಕೆಂದು ನುಡಿದರು.

ಭಾರೀ ಪ್ರಮಾಣದಲ್ಲಿ ಕಾಡನ್ನು ನಾಶಗೊಳಿಸಿ, ಕೃತಕವಾಗಿ ಮರಗಳನ್ನು ನೆಡುವುದರಿಂದ ಪರಿಸರ ಮತ್ತು ಅರಣ್ಯ ಸಂರಕ್ಷಿಸಿದಂತಾಗಲಿದೆ ಎಂದು ಅನೇಕ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಇದು ಸಲ್ಲದು. ಇರುವ ಅರಣ್ಯವನ್ನು ಅದು ಇರುವಂತಹ ರೀತಿಯಲ್ಲಿಯೇ ಉಳಿಸಿ, ಬೆಳೆಸಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ ಎಂದರು.


ಪ್ರಾಸ್ತವಿಕವಾಗಿ ಮಾತನಾಡಿದ ನಗರ ವಲಯ ಅರಣ್ಯಧಿಕಾರಿ ಸಂಜೆಯ್ ಇವರು 1730ರಲ್ಲಿ ಕುಖ್ಯಾತ ಖೇಜರ್ಲಿ ಹತ್ಯಾಕಾಂಡ ನಡೆದ ಈ ದಿನದಂದು, ಅಂದ್ರೆ ಸೆಪ್ಟೆಂಬರ್ 11 ಅನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನಾಗಿ ಆಚರಿಸಲು ಆಯ್ಕೆ ಮಾಡಲಾಯಿತು. 350ಕ್ಕೂ ಹೆಚ್ಚು ಜನರ ಹತ್ಯೆ ರಾಜಸ್ಥಾನದ ಮಹಾರಾಜ ಅಭಯ್ ಸಿಂಗ್ ಕಾಡಿನಲ್ಲಿರುವ ಖೇಜರ್ಲಿ ಮರಗಳನ್ನು ಕಡಿಯಲು ಆದೇಶ ನೀಡಿದರು. ಬಿಷ್ಣೋಯ್ ಸಮುದಾಯದ ಜನರು ಖೇಜರ್ಲಿ ಮರಗಳನ್ನು ಪವಿತ್ರವೆಂದು ಪರಿಗಣಿಸಿ ಆದೇಶದ ವಿರುದ್ಧ ಪ್ರತಿಭಟಿಸಿದರು. ಪ್ರತಿಭಟನೆಯ ಸಂಕೇತವಾಗಿ, ಅಮೃತಾ ದೇವಿ ಎಂಬ ಮಹಿಳೆ ಖೇಜರ್ಲಿ ಮರಗಳನ್ನು ಕಡಿಯದಂತೆ ರಕ್ಷಿಸಲು ತನ್ನ ತಲೆಯನ್ನು ಅರ್ಪಿಸಿದಳು. ಆದರೂ ಏನೂ ಯೋಚಿಸದೇ, ಅಮೃತಾ ದೇವಿಯ ಶಿರಚ್ಛೇದ ಮಾಡಿದರು. ಆ ದಿನ ಅವರು ಅಮೃತಾ ದೇವಿಯ ಚಿಕ್ಕ ಮಕ್ಕಳು ಸೇರಿದಂತೆ 350ಕ್ಕೂ ಹೆಚ್ಚು ಜನರನ್ನು ಕೊಂದರು. ಹತ್ಯಾಕಾಂಡದ ಸುದ್ದಿ ಮಹಾರಾಜರಿಗೆ ತಲುಪಿದಾಗ, ಅವರು ಘಟನೆಯಿಂದ ನಡುಗಿದರು. ತಮ್ಮ ಆದೇಶವನ್ನು ಹಿಂತೆಗೆದುಕೊಂಡರು. ಅವರು ಜನರಲ್ಲಿ ಕ್ಷಮೆಯಾಚಿಸಿ ಅರಣ್ಯಗಳನ್ನು ರಕ್ಷಿಸುವ ಉದ್ದೇಶಕ್ಕಾಗಿ ಅವರ ಸಮರ್ಪಣೆಯನ್ನು ಶ್ಲಾಘಿಸಿದರು. ಮಹಾರಾಜ ಅಭಯ್ ಸಿಂಗ್ ಒಂದು ಹೆಜ್ಜೆ ಮುಂದೆ ಹೋಗಿ ಭವಿಷ್ಯದಲ್ಲಿ ಕಾಡಿನಲ್ಲಿ ಮರಗಳನ್ನು ಕಡಿಯುವುದನ್ನು ಮತ್ತು ವನ್ಯಜೀವಿಗಳನ್ನು ಬೇಟೆಯಾಡುವುದನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದರು ಎಂದು ಅರಣ್ಯ ಹುತಾತ್ಮರು ದಿನ ಮಹತ್ವ ತಿಳಿಸಿದರು.


ಇದೆ ಸಂದರ್ಭದಲ್ಲಿ ನಗರ ಸರ್ಕಾರಿ ಫ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶೂ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಎಂ, ಹೊಸನಗರ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ನಗರ ವಲಯ ಅರಣ್ಯಧಿಕಾರಿ ಸಂಜಯ್, ಅರಣ್ಯ ಇಲಾಖೆಯ ಹೊಸನಗರ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದು ಹೂ ಗುಚ್ಚ ಸಮರ್ಪಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ರಾಘವೇಂದ್ರ ಕೆ ಗೌಡ ಸ್ವಾಗತಿಸಿ, ಸತೀಶ್ ನಾಯ್ಕ್ ನಿರೂಪಿಸಿ, ಬಾಲರಾಜ್ ವಂದಿಸಿದರು.

Leave A Reply

Your email address will not be published.

error: Content is protected !!