ಗಿಡ, ಮರಗಳನ್ನು ಬೆಳೆಸುವುದರಿಂದ ಜೀವವೈವಿಧ್ಯತೆಯನ್ನು ರಕ್ಷಿಸಲು ಸಾಧ್ಯ

0 312

ರಿಪ್ಪನ್‌ಪೇಟೆ: ಕೃಷಿ ಅರಣ್ಯವು ಒಂದು ಭೂ ಬಳಕೆ ಪದ್ದತಿಯಾಗಿದೆ. ಕೃಷಿ ಅರಣ್ಯ ಪದ್ದತಿಯನ್ನು ಪಾಲಿಸುವುದರಿಂದ ಆಹಾರ ಮತ್ತು ಪೌಷ್ಟಿಕಾಂಶದ ನಿರ್ವಹಣೆಯಾಗುತ್ತದೆ. ಹಾಗೂ ಕಟ್ಟಿಗೆ ಇಳುವರಿ ಮೇವಿನ ಇಳುವರಿ ಮತ್ತು ಹಣ್ಣಿನ ಇಳುವರಿಯ ಮೂಲಕ ಬೆಳೆ ಹಾನಿ ಸಮಯದಲ್ಲಿ ನೆರವಾಗುತ್ತದೆ ಮತ್ತು ಮುಖ್ಯವಾಗಿ ಕೃಷಿಯೊಂದಿಗೆ ಅರಣ್ಯ ಗಿಡ, ಮರಗಳನ್ನು ಬೆಳೆಸುವುದರಿಂದ ಜೀವವೈವಿಧ್ಯತೆಯನ್ನು ಕಾಪಾಡಿದಂತಾಗುತ್ತದೆ ಎಂದು ಕೃಷಿ ವಿದ್ಯಾರ್ಥಿನಿ ಕು|| ಶ್ರೀಲಕ್ಷ್ಮಿ ರೈತರಿಗೆ ಕರೆ ನೀಡಿದರು.

ರಿಪ್ಪನ್‌ಪೇಟೆ ಸಮೀಪದ ಗವಟೂರು ಶ್ರೀರಾಮೆಶ್ವರ ದೇವಸ್ಥಾನದ ಆವರಣದಲ್ಲಿ ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ಚಿಗುರು ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಭಾಗವಹಿಸಿ ರೈತರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀಗಂಧದ ಮರ ಗಾಳಿ ಮರ, ಬಾಗೆಮರ, ನೆಲ್ಲಿ ಮರದ ಜೊತೆ ಶ್ರೀಗಂಧವನ್ನು ಬೆಳೆಸಬೇಕು ಅದರ ರಕ್ಷಣೆಗಾಗಿ ನಾಯಿ ಸಾಕಾಣಿಕೆಯೊಂದಿಗೆ ಬೇಲಿ ಮಾಡುವುದರೊಂದಿಗೆ ಮೈಕ್ರೋಚಿಪ್ ಅಳವಡಿಕೆ ಮಾಡುವುದರಿಂದ ಬೆಳೆಯ ರಕ್ಷಣೆ ಮಾಡಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು.

Leave A Reply

Your email address will not be published.

error: Content is protected !!