ಹೊಸ ಪೊಲೀಸ್ ವಾಹನದ ಕೀ ಎಎಸ್‌ಪಿಗೆ ಹಸ್ತಾಂತರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು

0 784

ರಿಪ್ಪನ್‌ಪೇಟೆ: ರಿಪ್ಪನ್‌ಪೇಟೆ, ಆನಂದಪುರ ಪೊಲೀಸ್‌ ಠಾಣೆಯ ಎರಡು ವಾಹನಗಳು ಸಂಪೂರ್ಣ ಹಾಳಾಗಿದ್ದು ಗಣ್ಯರ ಬೆಂಗಾವಲಿಗೆ ಹೋಗುವ ಸಂದರ್ಭದಲ್ಲಿ ಎಲ್ಲಿ ಏನಾಗುವುದೋ ಎಂಬ ಜೀವ ಭಯದಲ್ಲಿದ್ದ ಪೊಲೀಸ್ ಇಲಾಖೆಯ ವಾಹನವನ್ನು ಕಂಡ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸರ್ಕಾರದಿಂದ ಎರಡು ಠಾಣೆಗಳಿಗೆ ಸುಸಜ್ಜಿತವಾದ ವಾಹನಗಳನ್ನು ಬಿಡುಗಡೆಗೊಳಿಸಿ ಇಂದು ಇಲಾಖೆ ಉಪಯೋಗಕ್ಕಾಗಿ ಶಿವಮೊಗ್ಗ ಜಿಲ್ಲಾ ಹೆಚ್ಚವರಿ ಎಸ್.ಪಿ.ಭೂಮರೆಡ್ಡಿ ಇವರಿಗೆ ವಾಹನದ ಕೀ ಅನ್ನು ನೀಡಿ ಹಸಿರು ನಿಶಾನೆ ತೋರಿಸಿದರು.

ನಂತರ ಮಾತನಾಡಿದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಠಾಣೆಯ ವ್ಯಾಪ್ತಿ ದೊಡ್ಡದಿದ್ದು ಈ ಬಗ್ಗೆ ನಾನು ರಾಜ್ಯದ ಗೃಹ ಸಚಿವರಲ್ಲಿ ಪ್ರಸ್ತಾವನೆ ಸಲ್ಲಿಸಿದರ ಮೇರೆಗೆ ತಕ್ಷಣ ನನ್ನ ಕ್ಷೇತ್ರ ವ್ಯಾಪ್ತಿಯ ಎರಡು ಠಾಣೆಗಳಿಗೆ ಹೊಸ ಪೊಲೀಸ್ ವಾಹನ ಖರೀದಿಗೆ ಅನುದಾನ ಬಿಡುಗಡೆ ಮಾಡಿ ಸಾರ್ವಜನಿಕರ ಸಮಸ್ಯೆಗೆ ತುರ್ತು ಸ್ಪಂದಿಸಲು ಅವಕಾಶ ಮಾಡಿಕೊಟ್ಟಿದ್ದಾರೆಂದು ಹೇಳಿದರು.

ಹೆಚ್ಚುವರಿ ಎಸ್.ಪಿ.ಯವರು ಮಾತನಾಡಿ, ಅಗತ್ಯವಾಗಿ ಈ ಎರಡು ಠಾಣೆಗಳಿಗೆ ವಾಹನದ ಅವಶ್ಯಕತೆ ಇದ್ದು ಅದನ್ನು ಮನಗಂಡ ಶಾಸಕರು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುದಾನವನ್ನು ಕೊಡಿಸುವುದರೊಂದಿಗೆ ವಾಹನವನ್ನು ಖರೀದಿಸಿ ಠಾಣೆಗೆ ನೀಡಿರುವುದು ಹರ್ಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ತೀರ್ಥಹಳ್ಳಿ ಡಿ.ವೈ.ಎಸ್.ಪಿ.ಗಜಾನನ ವಾಮನಸುತಾರ್, ಸಾಗರ ಡಿವೈಎಸ್.ಪಿ.ಜಗದೀಶ್ ಹಾಗೂ ರಿಪ್ಪನ್‌ಪೇಟೆ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಪ್ರವೀಣ್‌ಕುಮಾರ್ ಎಸ್.ಪಿ., ಆನಂದಪುರ ಠಾಣೆಯ ಪಿಎಸ್‌ಐ, ಹೊಸನಗರ ತಾಲ್ಲೂಕು ತಹಶೀಲ್ದಾರ್ ರಶ್ಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮ ಪಂಚಾಯ್ತಿ ಸದಸ್ಯರು ತಾಲ್ಲೂಕು ಮಟ್ಟದ ಅಧಿಕಾರಿ ವರ್ಗ ಹಾಜರಿದ್ದರು.

Leave A Reply

Your email address will not be published.

error: Content is protected !!