ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ | 55ನೇ ಬಾರಿ ರಕ್ತದಾನ ಮಾಡಿದ ಬಿ.ಎಸ್ ಸುರೇಶ್

0 336

ಹೊಸನಗರ: ರಕ್ತದಾನ ಶಿಬಿರ ಮತ್ತು ರಕ್ತಗುಂಪುಗಳ ಪರಿಶೀಲನ ಶಿಬಿರವನ್ನು ಏರ್ಪಡಿಸಲಾಗಿದ್ದು ವಿವಿಧ ಸಂಘ-ಸಂಸ್ಥೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಸ್ಪಂದನ ಪ್ರಿಂಟರ್ಸ್ ಮಾಲೀಕ ಬಿ.ಎಸ್. ಸುರೇಶ್‌ 55ನೇ ವರ್ಷಕ್ಕೆ 55 ಬಾರಿ ರಕ್ತ ನೀಡಿ ಹೊಸನಗರಕ್ಕೆ ಹೊಸ ದಾಖಲೆ ಬರೆದಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಜೇಸಿಐ ಹೊಸನಗರ ಕೊಡಚಾದ್ರಿ, ವರ್ತಕರ ಸಂಘ, ಸಾರ್ವಜನಿಕ ಆಸ್ಪತ್ರೆ ಹಾಗೂ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹೊಸನಗರ ಇವರು ಸಂಯುಕ್ತ ಆಶ್ರಯದಲ್ಲಿ 14 ವರ್ಷಗಳಿಂದ ಸ್ವರ್ಯಪ್ರೇರಿತ ರಕ್ತದಾನ ಶಿಬಿರ ಹಾಗೂ ರಕ್ತಗುಂಪುಗಳ ಪರಿಶೀಲನ ಶಿಬಿರವನ್ನು ಏರ್ಪಡಿಸಿಕೊಳ್ಳುತ್ತಾ ಬರುತ್ತಿದ್ದು ಈ ವರ್ಷವು ಕಾರ್ಯಕ್ರಮ ನಡೆಸಿದರು.

ಈ ಕಾರ್ಯಕ್ರಮದಲ್ಲಿ ಹೊಸನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲಿಂಗರಾಜ್, ಡಾ.ಹೇಮಾಂತ್, ಡಾ ಗುರುಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ, ಖಜಾಂಚಿ ಪ್ರಭಾಕರ್, ರಾಧಕೃಷ್ಣ, ಬಿ.ಎಸ್ ಸುರೇಶ್, ಕೆ.ಆರ್ ಪ್ರದೀಪ್, ಕೇಶವ, ಶೈಲ, ಸುಶೀಲ, ಮಣಿ ಆರ್ಯನ್, ಹೊಸನಗರ ಆಸ್ಪತ್ರೆಯ ಗಜೇಂದ್ರ, ಜೇಸಿಐ ಅಧ್ಯಕ್ಷ ವಿನಯ್ ಕುಮಾರ್, ಪೂರ್ಣೇಶ್, ರಾಧಕೃಷ್ಣ, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಹರೀಶ್, ಯೋಗರಾಜ್, ಜ್ಯೋತಿ ಪೂರ್ಣೇಶ್ ಇನ್ನೂ ಮುಂತಾದವರು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು.

ಸುಮಾರು 50 ಯೂನಿಟ್ ರಕ್ತವನ್ನು ಯುವಕರು ಸಯಂಪ್ರೇರಿತವಾಗಿ ರಕ್ತದಾನ ಮಾಡಿದರು.

Leave A Reply

Your email address will not be published.

error: Content is protected !!