ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ; ಕಾಡಾನೆ ಸಾವು !

0 550

ಮೂಡಿಗೆರೆ : ಮೂಡಿಗೆರೆ (Mudigere) ಅರಣ್ಯ ವಲಯದ ವ್ಯಾಪ್ತಿಯಲ್ಲಿರುವ ಊರುಬಗೆ ಗ್ರಾಪಂ ವ್ಯಾಪ್ತಿಯ ಭೈರಾಪುರ ಸಮೀಪದ ಮೇಕನಗದ್ದೆಯಲ್ಲಿ ಅರಣ್ಯ ಇಲಾಖೆ (Forest Department) ನಡೆಸಿದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಡಾನೆ (Elephant) ಮೃತಪಟ್ಟಿರುವ ಆರೋಪ ಕೇಳಿಬಂದಿದೆ.

ಮೂಡಿಗೆರೆ ಅರಣ್ಯ ವಲಯದ ವ್ಯಾಪ್ತಿಯಲ್ಲಿರುವ ಭೈರಾಪುರ ಸಮೀಪದ ಮೇಕನಗದ್ದೆಯಲ್ಲಿ ಅರಣ್ಯ ಇಲಾಖೆ ಶನಿವಾರ ಮಧ್ಯರಾತ್ರಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಿದೆ. ಹೀಗಾಗಿ ಅಧಿಕಾರಿಗಳು ಕಾಡಾನೆಗೆ ಅರವಳಿಕೆ‌ ನೀಡಿದ್ದಾರೆ. ಈ ಅರವಳಿಕೆ ಮಂಪರಿನಲ್ಲಿ ಆನೆ ಗುಡ್ಡದಿಂದ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮೃತಪಟ್ಟಿರುವ ಕಾಡಾನೆ ಕೆಲ ದಿನಗಳ ಹಿಂದೆ ನಡೆದಿದ್ದ ಕಾರ್ಯಾಚರಣೆಯಲ್ಲಿ ಇಟಿಫ್ (ETF) ಸಿಬ್ಬಂದಿ ಕಾರ್ತಿಕ್ ಮೇಲೆ ದಾಳಿ ಮಾಡಿತ್ತು. ಕಾಡಾನೆ ದಾಳಿಗೆ ಕಾರ್ತಿಕ್ ಮೃತಪಟ್ಟಿದ್ದರು. ಹೀಗಾಗಿ ಕಾಡಾನೆ ಸೆರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ ಶನಿವಾರ ನಡೆದ ಕಾರ್ಯಚರಣೆ ಅವಘಡ ಸಂಭವಿಸಿದೆ.

Leave A Reply

Your email address will not be published.

error: Content is protected !!