ವಿಕಲ ಚೇತನರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ; ಡಾ. ಶಾಂತರಾಜ್

0 38


ಹೊಸನಗರ: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಶೇಷ ವಿಕಲ ಚೇತನರಿಗೆ ಆನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಅದನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಹೊಸನಗರದ ಆಡಳಿತ ವೈದ್ಯಾಧಿಕಾರಿ ಡಾ. ಶಾಂತರಾಜ್ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನೇಟರ್ ವೆಲ್‌ಫೇರ್ ಸೊಸೈಟಿಯಿಂದ ವಿಶೇಷ ಚೇತನ ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿ, ವಿಶೇಷ ಚೇತನರು ಆರೋಗ್ಯದಲ್ಲಿ ಏರುಪೇರು ಆದಾಗ ತಕ್ಷಣ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ವಿಕಲ ಚೇತನ ಮಕ್ಕಳಿಗೆ ನೀಡುತ್ತಾ ಬಂದಿದ್ದು ಆದರೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಒಳ್ಳೆಯದು ಎಂದರು.


ವಿಶೇಷ ಚೇತನ ಮಕ್ಕಳು ಓದಿನಲ್ಲಿ ಮುಂದು:


ಇಂದಿನ ಯುವ ಪೀಳಿಗೆಯಲ್ಲಿ ವಿಶೇಷ ಚೇತನ ಮಕ್ಕಳು ಎಲ್ಲ ಕ್ಷೇತ್ರದಲ್ಲಿಯು ಮುಂದಿದ್ದು ಅದರಲ್ಲಿಯೂ ಓದಿನ ವಿಷಯದಲ್ಲಿ ಇತರೆ ಮಕ್ಕಳಿಗಿಂತ ಮುಂದಿರುವುದು ಕಂಡು ಬರುತ್ತಿದೆ ಎಂದು ಹೊಸನಗರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುರೇಶ್‌ರವರು ಈ ಸಂದರ್ಭದಲ್ಲಿ ಹೇಳಿದ್ದು ಇವರನ್ನು ಯಾವುದೇ ಕಾರಣಕ್ಕೂ ವಿಕಲಚೇತನರನ್ನಾಗಿ ಗುರುತಿಸದೇ ನಮ್ಮ ನಿಮ್ಮ ಹಾಗೇ ಸಾಮಾನ್ಯ ಮಕ್ಕಳಂತೆ ಕಾಣಬೇಕೆಂದರು.


ಈ ಕಿಟ್ ವಿತರಿಸುವ ಸಂದರ್ಭದಲ್ಲಿ ನೇಟರ್ ವೆಲ್‌ಫೆರ್ ಸೊಸೈಟಿಯ ಸಂಚಾಲಕರಾದ ಪ್ರೇಮನಾಥ್, ಆಪ್ತ ಸಮಾಲೋಚಕರಾದ ಸುಷ್ಮಾ ಶ್ರೀನಿವಾಸ್, ಅಭಯಧಾಮ ಕಾರ್ಯಕರ್ತರಾದ ಹಾಲಪ್ಪ ಇನ್ನೂ ಮುಂತದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!