ವಿದ್ಯುತ್ ಬಿಲ್‌ಗೆ ಕಂಗಲಾದ ಗ್ರಾಹಕರು ; ಹಗಲು ದರೋಡೆಗಿಳಿದ ರಾಜ್ಯ ಸರ್ಕಾರ – ಆರೋಪ

0 39

ರಿಪ್ಪನ್‌ಪೇಟೆ: ಈ ಹಿಂದಿನ ಸರ್ಕಾರ ಚುನಾವಣೆ ಮುಗಿಯುತ್ತಿದ್ದಂತೆ ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ ಮಾಡುವ ಪ್ರಸ್ತಾವನೆ ಘೋಷಿಸಿ ಮೇ 1 ರಿಂದ ಜಾರಿಯಾಗುತ್ತದೆಂದು ಹೇಳಲಾಗಿದ್ದು ನಂತರದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಯೂನಿಟ್‌ಗೆ 70 ಪೈಸೆ ಹೆಚ್ಚಳದೊಂದಿಗೆ ಏಕಾಏಕಿ ಮಾಸಿಕ ಶುಲ್ಕ 110 ರೂ. ನಿಂದ 200 ರೂ.ಗೆ ಏರಿಸಿ ಗ್ರಾಹಕರನ್ನು ಹಗಲು ದರೋಡೆ ಮಾಡುತ್ತಿದೆ ಎಂದು ಇಲ್ಲಿನ ಗ್ರಾಹಕರಾದ ಜಿ.ಕೆ.ಅನಂತಶಾಸ್ತ್ರಿ ಆರೋಪಿಸಿದ್ದಾರೆ.

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಐದು ಪ್ರಣಾಳಿಕೆಯನ್ನು ಪ್ರಕಟಿಸಿದ್ದು ಈ ಪ್ರಣಾಳಿಕೆಯ ಅನುಷ್ಟಾನಕ್ಕಾಗಿ ಉಚಿತ ವಿದ್ಯುತ್ 200 ಯೂನಿಟ್ ನೀಡುವ ಉದ್ದೇಶದಿಂದಾಗಿ ಮೆಸ್ಕಾಂ ಕಮರ್ಷಿಯಲ್ ಗ್ರಾಹಕರಿಗೆ ಹಾಗೂ ಗೃಹ ಬಳಕೆ ಗ್ರಾಹಕರಿಗೆ ಏಕಾಏಕಿ ಯೂನಿಟ್‌ಗೆ 70 ಪೈಸೆ ಹೆಚ್ಚಳ ಹಾಗೂ ಮಾಸಿಕ ಶುಲ್ಕ 110 ಬದಲು 220 ರೂ. ಹೆಚ್ಚಳಗೊಳಿಸಿ ಹಗಲು ದರೋಡೆ ಮಾಡುತ್ತಿದ್ದೆ ಎಂದು ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಮಹಿಳೆಯರಿಗೆ ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರಿ ಬಸ್ ಸಂಚಾರ ಉಚಿತ, 200 ಯೂನಿಟ್ ವಿದ್ಯುತ್ ಉಚಿತ ಹೀಗೆ ಅಶ್ವಾಸನೆ ನೀಡಿ ಈಗ ಎಲ್ಲರ ಜೇಬಿಗೆ ಹಗಲೇ ಕನ್ನ
ಹಾಕುವ ಹುನ್ನಾರ ನಡೆಸಿದ್ದಂತಾಗಿದೆ ಎಂದು ಆರೋಪಿಸಿದರು.

Leave A Reply

Your email address will not be published.

error: Content is protected !!