ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಸ್ತಿತ್ವಕ್ಕೆ ಬಂದ ಪೋಷಕರ ನೂತನ ಕಾರ್ಯಕಾರಿ ಸಮಿತಿ

0 411

ಹೊಸನಗರ : ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮದ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಪೋಷಕರ ಸಭೆಯಲ್ಲಿ ಪ್ರಾಂಶುಪಾಲ ಕೆ. ಉಮೇಶ್ ಮಾತಮಾಡಿ, ಪ್ರಾಧ್ಯಾಪಕರ ಜೊತೆಯಲ್ಲಿ ಪೋಷಕರು ಕೈ ಜೋಡಿಸಿದಲ್ಲಿ ಮಾತ್ರವೇ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಳೆದ ಮೂರೂವರೆ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಈ ಕಾಲೇಜು ಶಿಕ್ಷಣ ದಾರಿದೀಪವಾಗಿದೆ ಎಂದರು.

ಪೋಷಕರ ಸಂಘದ ಸಂಚಾಲಕ ಡಾ. ಕೆ. ಶ್ರೀಪತಿ ಹಳಗುಂದ ಮಾತನಾಡಿ, ತಮ್ಮ ಮಕ್ಕಳು ಶಿಕ್ಷಣ ನಿರತ ವಿದ್ಯಾ ಸಂಸ್ಥೆಯೊಂದಿಗೆ ಪೋಷಕರ ಸದಾ ನಿಕಟ ಸಂಪರ್ಕ ಹೊಂದುವ ಮೂಲಕ ಅಗತ್ಯ ಸಲಹೆ, ಸೂಚನೆ ನೀಡಬೇಕೆಂದರು.

ಸಭೆಯಲ್ಲಿ ಪ್ರೊ. ರವಿ, ಪ್ರೊ. ದೊಡ್ಡಯ್ಯ, ಪ್ರೊ. ಲೋಕೇಶಪ್ಪ ಉಪಸ್ಥಿತರಿದ್ದರು.

ಪೋಷಕರ ನೂತನ ಕಾರ್ಯಕಾರಿ ಸಮಿತಿ ರಚನೆ
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂತೆ ಪೋಷಕರ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ಮೇಲಿನಬೆಸಿಗೆ ಧರ್ಮರಾವ್ (ಅಧ್ಯಕ್ಷ), ಪ್ರಮೀಳಾ (ಉಪಾಧ್ಯಕ್ಷೆ), ಸಂತೋಷ ಆಚಾರ್ (ಪ್ರಧಾನ ಕಾರ್ಯದರ್ಶಿ), ವಾಣಿ ಶುಭಕರ್ ಪೂಜಾರಿ ಮತ್ತು ವಿಶ್ವನಾಥ್ (ಕಾರ್ಯದರ್ಶಿ) ಸಾವಿತ್ರಿ ಹಾಗೂ ಬಸವರಾಜ್ (ಸಹ ಕಾರ್ಯದರ್ಶಿ) ಸುವರ್ಣ(ಖಜಾಂಚಿ) ಆಯ್ಕೆಯಾದರು.

ಕು|| ವಿಭಾ ಪ್ರಾರ್ಥಿಸಿ, ಪ್ರೊ. ಪ್ರತಿಮಾ ವಂದಿಸಿದರು.

Leave A Reply

Your email address will not be published.

error: Content is protected !!