ಅಪ್ರಾಪ್ತ ಮಗನಿಗೆ ಸ್ಕೂಟರ್ ಚಾಲನೆ ಮಾಡಲು ಕೊಟ್ಟ ತಾಯಿಗೆ ₹ 30 ಸಾವಿರ ದಂಡ

0 717

ಶಿವಮೊಗ್ಗ : ಕೋಟೆ ಆಂಜನೇಯ ದೇವಾಲಯದ ಹತ್ತಿರ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅಪ್ರಾಪ್ತ ಬಾಲಕನೊಬ್ಬನು ಸ್ಕೂಟರ್ ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ನ್ಯಾಯಾಲಯವು ವಾಹನದ ವಾರಸುದಾರರಾದ ಆತನ ತಾಯಿಗೆ 30 ಸಾವಿರ ರೂ. ದಂಡ ವಿಧಿಸಿದೆ.


ಜನವರಿ 30 ರಂದು ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಎಸ್‌ಐ ನವೀನ್‌ಕುಮಾರ್ ಮಠಪತಿ ಅವರು ಇದನ್ನು ಪತ್ತೆ ಮಾಡಿದ್ದರು. ಅಪ್ರಾಪ್ತ ಬಾಲಕನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಬಾಲಕನ ತಾಯಿಯ ವಿರುದ್ಧ ಲಘು ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಿದ್ದರು. 3ನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರು ಮೊಪೆಡ್ ವಾಹನದ ಮಾಲೀಕರಿಗೆ 30 ಸಾವಿರ ರೂ. ದಂಡ ವಿಧಿಸಿದ್ದಾರೆ.

Leave A Reply

Your email address will not be published.

error: Content is protected !!