ಕಾಫಿನಾಡಿನಲ್ಲಿ 9ಕ್ಕೇರಿದ KFD ಸೋಂಕಿತರ ಸಂಖ್ಯೆ

0 193

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಮಂಗನ ಕಾಯಿಲೆ ಆತಂಕ ಮತ್ತಷ್ಟು ಹೆಚ್ಚಾಗಿದೆ. ಇಂದು ಜಿಲ್ಲೆಯಲ್ಲಿ ಮತ್ತೆ ಓರ್ವ ಮಹಿಳೆಯಲ್ಲಿ ಕೆ.ಎಫ್.ಡಿ ವೈರಸ್ ಕಾಣಿಸಿಕೊಂಡಿದೆ. 55 ವರ್ಷದ ಮಹಿಳೆಯೋರ್ವರಲ್ಲಿ ಕೆ.ಎಫ್.ಡಿ ದೃಢವಾಗಿದ್ದು, ಇದರೊಂದಿಗೆ ಮಂಗನ ಕಾಯಿಲೆ‌ ಪೀಡಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಸೋಂಕಿತ ಪೈಕಿ ಓರ್ವರು ಮೃತಪಟ್ಟಿದ್ದು, ನಾಲ್ವರು ಗುಣಮುಖರಾಗಿದ್ದಾರೆ. ಉಳಿದಂತೆ ಉಳಿದ ನಾಲ್ವರಿಗೆ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಒಎಲ್‌ವಿ ಎಸ್ಟೇಟ್ ಭಾಗದಲ್ಲಿ ಕೆಎಫ್‌ಡಿ ಪ್ರಕರಣಗಳು ಕಂಡುಬರುತ್ತಿದ್ದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಏಳು ಮಂದಿಗೆ ಕೆಎಫ್​ಡಿ ಸೋಂಕಿನ ಪರೀಕ್ಷೆ ನಡೆಸಿತ್ತು. ಸದ್ಯ ಪರೀಕ್ಷೆಗೊಳಪಟ್ಟಿದ್ದ 7 ಮಂದಿ ಪೈಕಿ ಒಬ್ಬರಲ್ಲಿ ಕೆ.ಎಫ್.ಡಿ ಪತ್ತೆಯಾಗಿದೆ.

Leave A Reply

Your email address will not be published.

error: Content is protected !!