ಗ್ರಾಮಾಡಳಿತದ ನಿರ್ಲಕ್ಷ್ಯ ; ಬೀದಿ ನಾಯಿಗಳಿಂದ ರಿಪ್ಪನ್‌ಪೇಟೆಯಲ್ಲಿ ವಾಹನ ಸವಾರರಿಗೆ ಕಿರಿಕಿರಿ

0 39

ರಿಪ್ಪನ್‌ಪೇಟೆ: ಕಳೆದ ವರ್ಷದಲ್ಲಿ ಶಾಲೆಗೆ ಹೋಗುವ ಮಗು ಸೇರಿದಂತೆ ನಡೆದುಕೊಂಡು ಹೋಗುವ ವ್ಯಕ್ತಿಯನ್ನು ನಾಯಿ ಅಟ್ಟಿಸಿಕೊಂಡು ಬಂದು ಕಚ್ಚಿರುವುದು ಹಾಗೂ ವಿನಾಯಕ ವೃತ್ತದಲ್ಲಿ ನಾಯಿಗಳ ಹಾವಳಿಯಿಂದಾಗಿ ವಾಹನ ಸವಾರರು ಜೀವಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ರಿಪ್ಪನ್‌ಪೇಟೆ ವಿನಾಯಕ ವೃತ್ತ ಸಾಗರ – ಶಿವಮೊಗ್ಗ – ಹೊಸನಗರ – ತೀರ್ಥಹಳ್ಳಿ ಸಂಪರ್ಕದ ಹೃದಯ ಭಾಗವಾಗಿರುವ ಇಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ ಅಲ್ಲದೆ ದ್ವಿಚಕ್ರ ಸೇರಿದಂತೆ ಇತರೆ ವಾಹನಗಳ ಸವಾರರು ಜೀವವನ್ನು ಎಡಗೈಯಲ್ಲಿ ಹಿಡಿದುಕೊಂಡು ಹೋಗಿ ಬರುವಂತಾಗಿದೆ.

ಇನ್ನೂ ಶಾಲಾ ಕಾಲೇಜ್ ಮಕ್ಕಳು ವಿದ್ಯಾರ್ಥಿಗಳ ಶಾಲೆಗೆ ಹೋಗಿ ಮನೆಗೆ ಬರುವವರೆಗೂ ಪೋಷಕ ವರ್ಗ ಆತಂಕದಲ್ಲಿ ಮುಳುಗುವಂತಾಗಿದೆ.

ಒಟ್ಟಾರೆಯಾಗಿ ಈ ನಾಯಿಗಳ ಹಾವಳಿಯಿಂದಾಗಿ ದ್ವಿಚಕ್ರ ವಾಹನ ಚಾಲಕರು ಪತ್ರಿಕೆ ವಿತರಣೆ ಮಾಡುವವರು ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಶ್ವಾನಗಳಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತಕ್ಕೆ ಒಳಗಾಗುವಂತಾಗಿ ಕೈಕಾಲು ಮುರಿದುಕೊಂಡು ಮನೆ ಸೇರುವಂತಾಗಿದೆ.

ಇಲ್ಲಿನ ವಿನಾಯಕ ವೃತ್ತದಲ್ಲಿ ಮತ್ತು ಶಾಲೆಯ ಬಳಿಯ ಬಿಸಿಯೂಟದ ಕೊಠಡಿ ಮಟನ್ ಚಿಕನ್ ಸ್ಟಾಲ್ ಹೀಗೆ ಎಲ್ಲೆಡೆಯಲ್ಲಿ ಹಿಂಡು ನಾಯಿಗಳಿಂದಾಗಿ ಬರುವೆ ಗ್ರಾಮದ ಡೈರಿ ಬಳಿ ವಿನಾಯಕ ವೃತ್ತದಲ್ಲಿ ಸರ್ಕಾರಿ ಪ್ರೌಢಶಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆಸ್ಪತ್ರೆಯ ಹತ್ತಿರ ಹೀಗೆ ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಗುಂಪು ಗುಂಪು ನಾಯಿಗಳ ಹಿಂಡಿನಿಂದಾಗಿ ಸಾರ್ವಜನಿಕರು ಮಕ್ಕಳು ವಾಹನ ಸವಾರರು ಜೀವಭಯದಲ್ಲಿ ತಿರುಗಾಡುವಂತಾಗಿದ್ದು ಈ ಕೂಡಲೇ ಸಂಬಂಧಿಸಿದ ಗ್ರಾಮಾಡಳಿತ ಶ್ವಾನಗಳ ನಿಯಂತ್ರಣಕ್ಕೆ ಮುಂದಾಗುವರೇ ಕಾದು ನೋಡಬೇಕಾಗಿದೆ.

Leave A Reply

Your email address will not be published.

error: Content is protected !!