ಬಿರುಗಾಳಿ ಸಹಿತ ಭಾರಿ ಮಳೆಗೆ ಹಾರಿಹೋದ ಅನೇಕ ಮನೆಯ ಮೇಲ್ಛಾವಣಿ ; ಲಕ್ಷಾಂತರ ರೂ. ಬೆಳೆ ನಷ್ಟ

0 43

ರಿಪ್ಪನ್‌ಪೇಟೆ : ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಭಾರಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ನಾಗೇಂದ್ರ ಎಂಬುವವರ ಕೊಟ್ಟಿಗೆ ಹಾನಿಯಾಗಿರುವುದು.

ಸಂಜೆ 6 ಗಂಟೆ ಸುಮಾರಿಗೆ ಗುಡುಗು, ಸಿಡಿಲಬ್ಬರದ ಮಳೆ ಸುರಿದಿದ್ದು ಈ ವೇಳೆ ಬೀಸಿದ ಭಾರಿ ಪ್ರಮಾಣದ ಬಿರುಗಾಳಿಗೆ ಗ್ರಾಮದ ಅನೇಕ ಮನೆ, ಕೊಟ್ಟಿಗೆಯ ಮೇಲ್ಚಾವಣಿಯ ಹೆಂಚುಗಳು, ಸಿಮೆಂಟ್ ಶೀಟ್ ಗಳು ಹಾರಿ ಹೋಗಿದ್ದು ನೂರಾರು ಅಡಿಕೆ, ಬಾಳೆ ಮರಗಳು ಧರಾಶಾಹಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.


ಇನ್ನೂ ಅಕೇಶಿಯ ಸೇರಿದಂತೆ ಇನ್ನಿತರ ಮರಗಳು ಬಿದ್ದ ಪರಿಣಾಮ 27 ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು.

ಗೃಹ ಸಚಿವರು, ತಹಶಿಲ್ದಾರ್ ಭೇಟಿ
ವಿಷಯ ತಿಳಿದು ಘಟನಾ ಸ್ಥಳಕ್ಕೆ ಇಂದು ಬೆಳಗ್ಗೆ 11:00 ಗಂಟೆಗೆ ಗೃಹ ಸಚಿವ‌ ಆರಗ ಜ್ಞಾನೇಂದ್ರ ಹಾಗೂ ಹೊಸನಗರ ತಹಶಿಲ್ದಾರ್ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಅರುಣ್ ಕುಮಾರ್ ರವರಿಗೆ ಸೇರಿದ ಕೊಟ್ಟಿಗೆ ಪೌಂಡೇಶನ್ ಗೆ ಹಾನಿ.
ಸೋಮಶೇಖರ್ ಎಂಬುವವರ ಮನೆ ಹೆಂಚು ಹಾರಿ ಹೋಗಿರುವುದು.
ಆನಂದ್ ರವರ ಶೌಚಾಲಯದ ಶೀಟ್ ಹಾರಿ ಹೋಗಿ ಮರದ ಮೇಲೆ ಕುಳಿತಿರುವುದು.
Leave A Reply

Your email address will not be published.

error: Content is protected !!