ಲೋಕಕಲ್ಯಾಣಾರ್ಥ ಕೋಣಂದೂರು ಶ್ರೀಗಳಿಂದ ಏಕಪಾದ ಶಿವಜಪಾನುಷ್ಠಾನ | ಹರತಾಳು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

0 52


ರಿಪ್ಪನ್‌ಪೇಟೆ: ಕೋಣಂದೂರು ಶ್ರೀ ಶಿವಲಿಂಗೇಶ್ವರ ಬೃಹನ್ಮಠದ ಪಟ್ಟಾಧ್ಯಕ್ಷರಾದ ಶ್ರೀಪತಿ ಪಂಡಿತರಾಧ್ಯ ಶಿವಚಾರ್ಯ ಮಹಾಸ್ವಾಮಿಗಳು ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಗ್ರಾಮದ ಶ್ರೀ ಸಕ್ರಿಸಿದ್ದೇಶ್ವರ ದೇವಸ್ಥಾನದಲ್ಲಿ ಸಕ್ರಿ ಸಿದ್ದೇಶ್ವರ ಕರ್ತೃ ಗದ್ದುಗೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಸಧ್ಬಕ್ತರ ಶ್ರಯೋಭಿವೃದ್ದಿಗಾಗಿ ಅಗಸ್ಟ್ 5 ರಿಂದ 13 ರವರೆಗೆ ಏಕಪಾದ ಶಿವಪೂಜಾ ಮೌನ ಶಿವಜಪಾನುಷ್ಠಾನ ಧಾರ್ಮಿಕ ಕೈಂಕರ್ಯವನ್ನು ಕೈಗೊಂಡಿದ್ದಾರೆ.


ಏಕಪಾದ ಶಿವಜಪಾನುಷ್ಠಾನ ಮಂಗಲ ಸಮಾರಂಭದಲ್ಲಿ ತರೀಕರೆ ನಗರ ಹಿರೇಮಠದ ಪಟ್ಟಾಧ್ಯಕ್ಷರಾದ ಜಗದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಸಕ್ರಿ ಸಿದ್ದೇಶ್ವರ ಸ್ವಾಮಿಗೆ ವಿಶೇಷ ರುದ್ರಾಭಿಷೇಕ ಹಾಗೂ ರುದ್ರಹೋಮದೊಂದಿಗೆ ಕೋಣಂದೂರು ಬೃಹನ್ಮಠದ ಶ್ರೀಗಳಿಗೆ `ಕರಣಪ್ರಸಾದ’ ನೀಡಿ ಶಿವಜಪಾನುಷ್ಠಾನ ಕಾರ್ಯವನ್ನು ಮಂಗಲಗೊಳಿಸುವರು.
ನಂತರ ಧರ್ಮ ಸಮಾರಂಭ ಕಾರ್ಯಕ್ರಮದ ವೀರಾಪುರ ಹಿರೇಮಠದ ಮರಳಸಿದ್ದೇಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು.


ಸಾಲೂರು ಹಿರೇಮಠದ ಗುರುಲಿಂಗ ಜಂಗಮ ಶಿವಾಚಾರ್ಯ ಮಹಾಸ್ವಾಮಿಜಿ,ಕಡೇನಂದಿಹಳ್ಳಿ ಹೋಳಿನ ಹಂಪೇಶ್ವರ ಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮನಹಾಸ್ವಾಮೀಜಿ ಸಮ್ಮುಖ ವಹಿಸಿ ನುಡಿ ಸೇವೆ ಸಲ್ಲಿಸುವರು.


ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರೆಂದು ಶ್ರೀಸಕ್ರಿಸಿದ್ದೇಶ್ವರ ದೇವಸ್ಥಾನ ಸಮಿತಿಯ ಪ್ರಕಟಣೆ ತಿಳಿಸಿದೆ.

ಹರತಾಳು ಗ್ರಾ.ಪಂ. ಅಧ್ಯಕ್ಷರಾಗಿ ನಾಗರತ್ನ, ಉಪಾಧ್ಯಕ್ಷರಾಗಿ ನಾರಾಯಣಪ್ಪ ಆಯ್ಕೆ

ರಿಪ್ಪನ್‌ಪೇಟೆ: ಮಾಜಿ ಶಾಸಕ ಹರತಾಳು ಹಾಲಪ್ಪನವರ ಸ್ವಕ್ಷೇತ್ರದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.


8 ಸದಸ್ಯ ಬಲದ ಹರತಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ನಾಗರತ್ನ ವಾಸುದೇವ್ ಹಾಗೂ ಉಪಾಧ್ಯಕ್ಷರಾಗಿ ನಾರಾಯಣಪ್ಪ ಕಣಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಪ್ರಕಟಿಸಿದರು.

Leave A Reply

Your email address will not be published.

error: Content is protected !!