143 ಕೋಟಿ ಭಾರತೀಯರ ಕನಸು ನನಸು ಮಾಡಿದಂತಹ ಇಸ್ರೋ ವಿಜ್ಞಾನಿಗಳಿಗೆ ರಿಪ್ಪನ್‌ಪೇಟೆ ನಾಗರಿಕರಿಂದ ಅಭಿನಂದನೆ

0 53

ರಿಪ್ಪನ್‌ಪೇಟೆ : ದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಇಂದು ಫಲನೀಡಿದೆ ಚಂದ್ರನ ದಕ್ಷಿಣ ಧೃವದಲ್ಲಿ ಚಂದ್ರಯಾನ-3 ರ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಯನ್ನು ಜಗತ್ತು ನೋಡುವಂತೆ ಮಾಡಿದಂತಹ ವಿಜ್ಞಾನಿಗಳಿಗೆ ರಿಪ್ಪನ್‌ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ವೃತ್ತದಲ್ಲಿ ಇಂದು ಸಂಜೆ ಪಟಾಕಿ ಸಿಡಿಸಿ ಸಿಹಿ ಹಂಚಿ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ, ಗವಟೂರು ಗಣಪತಿ, ನಿರೂಪ್ ಹಾಗೂ ವಿವಿಧ ಸಂಘಟನೆ ಹಾಗೂ ಪಕ್ಷಗಳ ಮುಖಂಡರಾದ ವೈ. ಜೆ. ಕೃಷ್ಣ, ಶ್ರೀನಿವಾಸ್ ಆಚಾರಿ, ಭಾಸ್ಕರ ಶೆಟ್ಟಿ, ಕಗ್ಲಿ ಲಿಂಗಪ್ಪ, ಪಿ ಸುಧೀರ್, ದೇವರಾಜ್, ದುಬೈ ಅಶೋಕ್, ಬೆಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೆಳ್ಳೂರು ತಿಮ್ಮಪ್ಪ, ಯೋಗೇಂದ್ರಪ್ಪ ಗೌಡ, ಆಟೋ ಗುರು, ಉಲ್ಲಾಸ್, ಸಂದೇಶ್, ಅರವಿಂದಭಟ್ ಇನ್ನೂ ಹಲವರು ಇದ್ದರು.


ಹೆದ್ದಾರಿಪುರದಲ್ಲೂ ಸಂಭ್ರಮಾಚರಣೆ :

ಭಾರತದ ಚಂದ್ರಯಾನ – 3 ಯಶಸ್ವಿಯಾಗಿದ್ದನ್ನ ಸಂಭ್ರಮಿಸಿ ಹೆದ್ದಾರಪುರ ಗ್ರಾಮ ಪಂಚಾಯ್ತಿಯಲ್ಲಿನ ಗ್ರಾಮದ ಯುವಕರು ಮುಖಂಡರು ಆದ ಗಂಗಾಧರ ಕಲ್ಲೂರು, ನವೀನ್ ಹೆದ್ದಾರಿಪುರ, ನಾಗರಾಜ್, ಕಲ್ಲೂರು ರಾಮಣ್ಣ ಹೆದ್ದಾರಿಪುರ, ಮಂಜುನಾಥ್ ಶೆಟ್ರು ಆದರ್ಶ ಕಲ್ಲೂರು, ಈಶ್ವರ್ ಹೆದ್ದಾರಿಪುರ, ಮಂಜುನಾಥ್ ಮಹೇಶ, ರಾಘು ಇನ್ನಿತರರು ಭಾಗವಹಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು.

Leave A Reply

Your email address will not be published.

error: Content is protected !!