ಶಿವಮೊಗ್ಗ: ಕಾಲೇಜು ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ವೈದ್ಯಕೀಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಭಯ್ ರೆಡ್ಡಿ (22) ಮೃತ ದುರ್ದೈವಿ. ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಅಭಯ್ ರೆಡ್ಡಿ, ಕಾಲೇಜಿನ ವಸತಿ ನಿಲಯದ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಬೆಂಗಳೂರಿನ ಬೊಮ್ಮಸಂದ್ರ ನಿವಾಸಿವಾಗಿರುವ ಅಭಯ್ ವಿದ್ಯಾಭ್ಯಾಸಕ್ಕೆಂದು ಸುಬ್ಬಯ್ಯ ವೈದ್ಯಕೀಯ ಕಾಲೇಜು ಸೇರಿದ್ದ. ಆದರೆ, ಕಾಲೇಜಿನ ಪ್ರಾಂಶುಪಾಲರಿಂದ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಗೋಡೆ ಮೇಲೆ ಡೆತ್ ನೋಟ್‌ವೊಂದನ್ನು ಬರೆದಿದ್ದು, ನಾನು ವೀಕ್ ಮೈಂಡೆಡ್ ಅಲ್ಲ. ನಾನೊಬ್ಬ ಮನೆ ಮಗನಾಗಿದ್ದು, ಸ್ನೇಹಿತನ ಕುಟುಂಬವನ್ನು ಉಳಿಸುವವನು, ನನ್ನ ಸಾವನ್ನು ಕಾಮಿಡಿ ಎಂದು ಪರಿಗಣಿಸದಿರಿ ಎಂದು ಬರೆದಿದ್ದಾನೆ.