ಶಿವಮೊಗ್ಗ : ಸುಧಾ (28) ಕುಂಸಿ ಗ್ರಾಮ ಇವರು ತನ್ನ ಮಗ 07 ವರ್ಷದ ನಿತಿನ್‍ನನ್ನು ಕರೆದುಕೊಂಡು ಮನೆಯಿಂದ ನಾಪತ್ತೆಯಾಗಿರುತ್ತಾಳೆ.
ಸುಧಾ ಸಾಧಾರಣ ಮೈಕಟ್ಟು ಕೋಲುಮುಖ, ಎಣ್ಣೆಗಪ್ಪು ಬಣ್ಣ, 5 ಅಡಿ ಎತ್ತರ ಇದ್ದು ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ವೇಳೆ ಗೋಲ್ಡ್ ಕಲರ್ ಟಾಪ್,ವೈಟ್ ಕಲರ್ ಪ್ಯಾಂಟ್ ಧರಿಸಿರುತ್ತಾಳೆ. ಮಗ ನಿತಿನ್ 3.5 ಅಡಿ ಎತ್ತರ, ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತೆಲುಗು ಮಾತನಾಡುತ್ತಾನೆ. ಕಾಣೆಯಾದ ವೇಳೆ ಕೆಂಪು ಟೀಶರ್ಟ್, ನೀಲಿ ಚಡ್ಡಿ ಧರಿಸಿರುತ್ತಾನೆ.
ಇವರ ಸುಳಿವು ಯಾರಿಗಾದರೂ ಸಿಕ್ಕಲ್ಲಿ ಶಿವಮೊಗ್ಗ ಕಂಟ್ರೋಲ್ ರೂಂ ಸಂಖ್ಯೆ : 08182-261400, ಕುಂಸಿ ಪೊಲೀಸ್ ಠಾಣೆ ಪಿಐ ಸಂಖ್ಯೆ 9480803351 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.