ಕನ್ನಡಿ ಎಷ್ಟೇ ಚೂರಾದರೂ ತನ್ನ ಪ್ರತಿಬಿಂಬಿಸುವ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ ; ಗುರುನಾಗಭೂಷಣ ಸ್ವಾಮೀಜಿ

0 48


ಹೊಸನಗರ: ಕನ್ನಡಿ ಎಷ್ಟೇ ಚುರದರೂ ತನ್ನ ಪ್ರತಿಬಿಂಬಿಸುವ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲವೂ ಮಾನವರು ಸಹ ಹಾಗೇ ಎಷ್ಟೆ ಕಷ್ಟ ಬಂದರೂ ಸತ್ಯದ ಮಾರ್ಗದಲ್ಲಿ ನಡೆಯಬೇಕು ಆಗಾ ಮಾತ್ರ ಈ ಭೂಮಿಯಲ್ಲಿ ಹುಟ್ಟಿರುವುದಕ್ಕೂ ಸಾರ್ಥಕವಾಗುತ್ತದೆ ಎಂದು ಮಳಲಿಮಠದ ಡಾ|| ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.


ಹೊಸನಗರ ತಾಲ್ಲೂಕು ಕಾರಣಗಿರಿ ದೇವಸ್ತಾನದ ಆವರಣದಲ್ಲಿ ಮಾನವ ಹಕ್ಕುಗಳು ಮತ್ತು ಭ್ರಸ್ಠಚಾರ ವಿರೋಧಿ ಸಮಿತಿ, ಅಖಿಲ ಭಾರತ ಶೃಣ ಸಾಹಿತ್ಯ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು-ನೆರವು ಮತ್ತು ದತ್ತಿ ಉಪನ್ಯಾಸ, ಪುಸ್ತಕ ಬಿಡುಗಡೆ ಹಾಗೂ ನಿವೃತ್ತಿ ಪಡೆಯುತ್ತಿರುವ ಶಿಕ್ಷಕ ಗಂಗಾಧರಯ್ಯನವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.


ಪ್ರತಿಯೊಬ್ಬರು ಒಳ್ಳೆಯವರ ಸಹವಾಸ ಮಾಡುವುದರಿಂದ ಬದುಕು ನೆಮ್ಮದಿಯಿಂದ ಕೊಡಿರುತ್ತದೆ ಸುಸಂಸ್ಕೃತ ನಾಗರೀಕನಾಗಿ ನ್ಯಾಯ ನೀತಿ ಧರ್ಮ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕವಾಗುವುದರ ಜೊತೆಗೆ ಬದುಕಿನಲ್ಲಿ ನೆಮ್ಮದಿಯಾಗಿ ಬಾಳಬಹುದು ಆದ್ದರಿಂದ ಪ್ರತಿಯೊಬ್ಬರು ಶಾಂತಿ ಶಿಸ್ತು ಸಂಯಮ ಜೀವನದಲ್ಲಿ ಆಳವಡಿಸಿಕೊಂಡು ಜೀವನ ಸಾಗಿಸಬಹುದೆಂದರು.


ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿದ ಹೊಸನಗರ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ರವಿಕುಮಾರ್ ಕೆ ಮಾತನಾಡಿ, ಅರಿವೂ ಎಂದರೆ ತಿಳುವಳಿಕೆ ಪ್ರತಿಯೊಬ್ಬರಿಗೂ ತಿಳುವಳಿಕೆ ಇದ್ದೆ ಇರುತ್ತದೆ ಆದರೆ ಅದನ್ನು ಸರಿಯಾಗಿ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಅದಲ್ಲದೇ ಗುರು ಹಿರಿಯರಿಗೆ ಗೌರವಿಸುವ ಭಾವನೆ ಹೊಂದಿರಬೇಕು ಬರುವಾಗ ಯಾರು ತಿಳುವಳಿಕೆ ಹೊಂದಿ ಹುಟ್ಟುವುದಿಲ್ಲ ನಂತರ ತಮ್ಮ ಪರಿಸರಕ್ಕೆ ಅನುಗುಣವಾಗಿ ತಿಳುವಳಿಕೆ ಹೊಂದುತ್ತಾರೆ ಈ ಸಮಾಜದಲ್ಲಿ ಇರುವ ತನಕ ಒಳ್ಳೆಯ ಗುಣ ನಡೆತೆ ಹಾಗೂ ದಾನ ಧರ್ಮದ ಗುಣಗಳನ್ನು ಹೊಂದಿ ಸಮಾಜದ ಒಳ್ಳೆಯ ವ್ಯಕ್ತಿಯಾಗಿ ಸಮಾಜಕ್ಕೆ ತನ್ನದೇ ಅದಾ ಕೊಡಿಗೆ ನೀಡಿದರೆ ಅವರ ಹೆಸರು ಕೊನೆಯ ತನಕ ಉಳಿಯುತ್ತದೆ ಎಂದರು.


ಈ ಸಮಾರಂಭದಲ್ಲಿ ಶಿಕ್ಷಕ ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಜೂನ್ 3-ರಂದು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಪಡೆಯುತ್ತಿರುವ ಗಂಗಾಧರಯ್ಯರವರನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಮಾನವ ಹಕ್ಕುಗಳ ಮತ್ತು ಭ್ರಷ್ಠಾಚಾರ ವಿರೋಧಿ ಸಮಿತಿಯ ಅಧ್ಯಕ್ಷರಾದ ದುಮ್ಮ ರೇವಣಪ್ಪ ಗೌಡರವರು ವಹಿಸಿ ಮಾತನಾಡಿದರು.


ಈ ಸಮಾರಂಭದಲ್ಲಿ ಪ್ರಧಾನ ಕಾನೂನು ಅಭಿರಕ್ಷಕರಾದ ಹೆಚ್.ಬಿ.ದೇವೆಂದ್ರಪ್ಪ, ತಹಸಿಲ್ದಾರ್ ಧರ್ಮಾಂತ ಗಂಗಾರಾಮ್ ಕೋರಿ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್ ಕೃಷ್ಣಮೂರ್ತಿ, ವಿಶ್ರಾಂತ ಶಿಕ್ಷಣಾಧಿಕಾರಿ ವೀರಭದ್ರಪ್ಪ, ರಾಮಪ್ಪ ಗೌಡ, ಸಮಾನ್ವಯಾಧಿಕಾರಿ ರಂಗನಾಥ್ ಎಂ, ಅಕ್ಷರ ದಾಸೋಹ ಸಹಾಯ ನಿರ್ದೇಶಕ ನಾಗರಾಜ್ ಎಸ್.ಪಿ, ಜಿಲ್ಲಾಧ್ಯಕ್ಷ ಹೆಚ್.ಎನ್ ಮಹಾರುದ್ರ, ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಸಾಹಿತಿಗಳಾದ ಅಂಬ್ರಯ್ಯಮಠ ಚಂದ್ರಕಲಾ, ಲತಾ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!