ಈ ಬಾರಿಯು ವಿಧಾನಸಭೆ ಚುನಾವಣೆ EVM ಯಂತ್ರದ ಮೂಲಕ ನಡೆಯಲಿದೆ ; ತಹಶೀಲ್ದಾರ್ ವಿ‌.ಎಸ್ ರಾಜೀವ್

0 32


ಹೊಸನಗರ: 2023-24ನೇ ಸಾಲಿನಲ್ಲಿ ಕರ್ನಾಟಕದ ವಿಧಾನಸಭೆಯ ಚುನಾವಣೆಯು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದ್ದು ಮತದಾರರು ಈ ಬಾರೀಯ ಚುನಾವಣೆಯು ಇ.ವಿ.ಎಂ ಯಂತ್ರದ ಮೂಲಕ ಚುನಾವಣೆ ನಡೆಸಲಾಗುವುದು ಎಂದು ಚುನಾವಣೆ ಆಯೋಗ ತಿಳಿಸಿದ್ದು ಮತದಾನ ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಮತದಾರರಿಗೆ ಮತ ಹಾಕಿಸುವ ವಿಧಾನದ ಬಗ್ಗೆ ಜಾಗೃತಿಯನ್ನು ಹೊಸನಗರ ತಾಲ್ಲೂಕು ಕಛೇರಿಯ ಆವರಣದಲ್ಲಿ ಸಿದ್ದಪಡಿಸಲಾಗಿದೆ ಎಂದು ತಹಶೀಲ್ದಾರ್ ವಿ.ಎಸ್ ರಾಜೀವ್‌ರವರು ತಿಳಿಸಿದರು.


ಹೊಸನಗರ ತಾಲ್ಲೂಕು ಕಛೇರಿಯ ಆವರಣದಲ್ಲಿ ಇ.ವಿ.ಎಂ ಸಿದ್ದ ಪಡೆಸಿಕೊಂಡು ಮತದಾನ ಮಾಡುವ ವಿಧಾನದ ಬಗ್ಗೆ ಕಾರ್ಯಗಾರ ಕಾರ್ಯಕ್ರಮ ಏರ್ಪಡಿಸಿ ಮತದಾರರಿಗೆ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಮಾತನಾಡಿದರು.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಪ್ರತಿಯೊಬ್ಬ ಮತದಾರರು ಮತ ಚಲಾಯಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆರಂಭಿಸಲಾಗಿದ್ದು ಮತದಾರರು ಮತಗಟ್ಟೆಗೆ ಹೋಗಿ ಮತ ಚಲಾಯಿಸುವಾಗ ಗಾಬರಿಯಾಗುವುದು ಬೇಡ ಎಂಬ ಉದ್ದೇಶದಿಂದ ಪ್ರತಿಯೊಬ್ಬ ಮತದಾರರಿಗೂ ಈ ಮೂಲಕ ತರಬೇತಿ ನೀಡುತ್ತಿದ್ದೇವೆ ತಾವು ಮತಗಟ್ಟೆಯ ಒಳಗೆ ಹೋದಾಗ ಚುನಾವಣೆ ಹಾಕುವ ಯಂತ್ರದಲ್ಲಿ ಕೆಂಪು ಬೆಳಕು ಬಂದಿದೇಯೇ ಎಂಬುದನ್ನು ಪರೀಕ್ಷಿಕೊಂಡು ನಿಮ್ಮ ಬೆಂಬಲದ ಅಭ್ಯರ್ಥಿಗೆ ಮತ ಹಾಕಬೇಕು ಅದರ ಪಕ್ಕದಲ್ಲಿ ಇನ್ನೊಂದು ಚುನಾವಣೆಯ ಯಂತ್ರದಲ್ಲಿ ನೀವು ನಮೂದಿಸಿದ ಓಟು ಯಾರಿಗೆ ಹಾಕಿದ್ದೀರಿ ಎಂಬುದನ್ನು ಖಚಿತ ಪಡಸಿಕೊಳ್ಳಬಹುದಾಗಿದೆ. ಈ ಎಲ್ಲವೂ 7 ಸೆಕೆಂಡ್‌ಗಳಲ್ಲಿ ಮುಗಿದು ಹೋಗುತ್ತದೆ ಎಲ್ಲರೂ ಇವಿಎಂ ಯಂತ್ರದ ಬಗ್ಗೆ ತಿಳಿದುಕೊಂಡು ಮತದಾನ ಮಾಡಿ ಎಂದರು.


ಈ ಸಂದರ್ಭದಲ್ಲಿ ಹೇಮಾ ಚುನಾವಣೆ ಶಿರಾಸ್ಥೆದಾರ್ ವಿನಯ್ ಎಂ ಆರಾಧ್ಯ, ಭೂಮಿ ಕೇಂದ್ರದ ಗ್ರಾಮ ಲೆಕ್ಕಾಧಿಕಾರಿ ಕುಮಾರಿ ಹೇಮಾ, ಗಣೇಶ್, ಶಿವಪ್ಪ ಇತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!