ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಸುದ್ದಿಗಳು ಇಲ್ಲಿವೆ

0 37

ದಸರಾ ಕ್ರೀಡಾಕೂಟ :
ಚಿಕ್ಕಮಗಳೂರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2023-24ನೇ ಸಾಲಿನ ಚಿಕ್ಕಮಗಳೂರು ಬ್ಲ್ಯಾಕ್ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 08 ಮತ್ತು 09 ರಂದು ಬೆ. 10:00 ಗಂಟೆಗೆ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನ (ಗುಂಪು ಸ್ಪರ್ಧೆಗಳು) ಮತ್ತು ಡಿ.ಎ.ಆರ್. ಆಟದ ಮೈದಾನ, ರಾಮನಹಳ್ಳಿ (ಅಥ್ಲೆಟಿಕ್ಸ್) ಯಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸೆಪ್ಟೆಂಬರ್ 06 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.


ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.  

ರಿಯಾಯಿತಿ ಮಾರಾಟ
ಚಿಕ್ಕಮಗಳೂರು : ಲಿಡ್ಕರ್ ಮಾರಾಟ ಮಳಿಗೆಯಲ್ಲಿ ಸೆಪ್ಟೆಂಬರ್ 06 ರಿಂದ 20 ರವರೆಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಿಯಾಯಿತಿ ಮಾರಾಟ ಮಾಡಲು ಕೇಂದ್ರ ಕಛೇರಿಯಿಂದ ಆದೇಶ ಬಂದಿದ್ದು, ನಮ್ಮ ಮಾರಾಟ ಮಳಿಗೆಯಲ್ಲಿರುವ ಚರ್ಮದ ಶೂಗಳು, ಚಪ್ಪಲಿಗಳು, ಚರ್ಮದ ವ್ಯಾನಿಟಿ ಬ್ಯಾಗ್‌ಗಳು, ಪರ್ಸ್‌ಗಳು, ಲೆದರ್ ಬೆಲ್ಟ್‌ಗಳು, ಇವುಗಳನ್ನು ಶೇ 20% ರ ರಿಯಾಯಿತಿಯಂತೆ ಮಾರಾಟ ಮಾಡಲಾಗುತ್ತದೆ.


ಮಾರಾಟ ಮಳಿಗೆ ಭಾನುವಾರವೂ ಸಹ ತೆರೆದಿರುತ್ತದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಮಾರಾಟ ಮಳಿಗೆಯ ಮತ್ತು ನಿಗಮದ ಜಿಲ್ಲಾ ಸಂಯೋಜಕರು / ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿ ಪರಿಶೀಲನಾ ಸಭೆ

ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀ ರಾಜೇಂದರ್ ಕುಮಾರ್ ಕಟಾರಿಯ ಅವರು ಇಂದು ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪತ್ರಿಕಾಗೋಷ್ಠಿ

ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀ ರಾಜೇಂದರ್ ಕುಮಾರ್ ಕಟಾರಿಯ ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹಾಜರಿದ್ದರು.

ಚಿಕ್ಕಮಗಳೂರು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಚಿಕ್ಕಮಗಳೂರು. ಕಛೇರಿಯಲ್ಲಿ ಖಾಸಗಿ ಕಂಪನಿಯಾದ ರೆಸಾರ್ಟ್‌ಗಳಲ್ಲಿ ಚಿಕ್ಕಮಗಳೂರಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನವನ್ನು ಸೆಪ್ಟೆಂಬರ್ 07 ರಂದು ಬೆಳಿಗ್ಗೆ 10:30 ಗಂಟೆಗೆ ಏರ್ಪಡಿಸಲಾಗಿದೆ. 18 ರಿಂದ 22 ವರ್ಷದ ಎಲ್ಲಾ ಎಸ್.ಎಸ್.ಎಲ್.ಸಿ., ಪಿಯುಸಿ, ಐ.ಟಿ.ಐ., ಡಿಪ್ಲೋಮಾ, ಮತ್ತು ಪದವಿ ಅರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು ಹಾಗೂ ಉಚಿತ ಪ್ರವೇಶವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದೂರವಾಣಿ: 9945198500, 0826-2295538 ಗೆ ಸಂಪರ್ಕಿಸಿ ಪಡೆಯ ಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕ್ಕಮಗಳೂರು : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2023-24ನೇ ಸಾಲಿಗೆ ಡಿ.ಬಿ.ಟಿ. ಮೂಲಕ ಸೌಲಭ್ಯ ಪಡೆಯಲು ಸೇವಾಸಿಂಧು ಪೋಟರ್ಲ್ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ https://sevasindhu.karnataka.gov.in ಆನ್‌ಲೈನ್ ಮೂಲಕ ಅರ್ಜಿಯನ್ನು ಸೆಪ್ಟೆಂಬರ್ 30 ರಂದು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: 08262 228171, ಚಿಕ್ಕಮಗಳೂರು ಎಂ.ಆರ್.ಡಬ್ಲ್ಯೂ ಮೋಹನ್‌ಗೌಡ ಕೆ.ಎಸ್. (ಮೊ.ಸಂ. 9148446757), ಕಡೂರು ಎಂ.ಆರ್.ಡಬ್ಲ್ಯೂ ಶಾನ್‌ವಾಜ್ (ಮೊ.ಸಂ. 9036946273), ಮೂಡಿಗೆರೆ ಎಂ.ಆರ್.ಡಬ್ಲ್ಯೂ ಚಂಪಾ ಕೆ.ಬಿ (ಮೊ.ಸಂ. 9482740466), ಕೊಪ್ಪ ಎಂ.ಆರ್.ಡಬ್ಲ್ಯೂ ಮೋಹನ್ ಡಿ.ಆರ್. (ಮೊ.ಸಂ. 9448223239), ತರೀಕೆರೆ ಎಂ.ಆರ್.ಡಬ್ಲ್ಯೂ ಅಕ್ರಂಬಾಷ (ಮೊ.ಸಂ. 9632503867), ಶೃಂಗೇರಿ ಎಂ.ಆರ್.ಡಬ್ಲ್ಯೂ ಸಾಮ್ರಾಟ್ ಜಿ.ಎಲ್ (ಮೊ.ಸಂ. 7975132606), ನರಸಿಂಹರಾಜಪುರ ಎಂ.ಆರ್.ಡಬ್ಲ್ಯೂ ಜೆಸ್ಮಿನ್ ಫ್ರಾನ್ಸಿಸ್ (ಮೊ.ಸಂ. 9482853223) ಇವರನ್ನು ಸಂಪರ್ಕಿಸಬಹುದೆಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಚಿಕ್ಕಮಗಳೂರು : ತೋಟಗಾರಿಕೆ ಇಲಾಖೆಯಿಂದ 2023-24 ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೃಷಿ ಯಾಂತ್ರೀಕರಣ ಉಪ ಅಭಿಯಾನ (SMAM) ಯೋಜನೆಯಡಿ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.


ಕಾರ್ಬನ್ ಫೈಬರ್ ದೋಟಿ, ಅಡಿಕೆ ಸುಲಿಯುವ ಯಂತ್ರ, ಟ್ರ‍್ಯಾಕ್ಟರ್, ಸ್ಪ್ರೇಯರ್ ಮುಂತಾದ ಯಂತ್ರಗಳನ್ನು ಖರೀದಿಸುವ ರೈತರಿಗೆ ಇಲಾಖೆ ವತಿಯಿಂದ ಸಹಾಯಧನ ಲಭ್ಯವಿದೆ. ಈ ಯೋಜನೆಯಡಿ ಸಹಾಯಧನ ಪಡೆಯಲು ರೈತರು ಸೆಪ್ಟೆಂಬರ್ 7 ರಿಂದ 15 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯಿತಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.

Leave A Reply

Your email address will not be published.

error: Content is protected !!