ವೀರಶೈವ ಲಿಂಗಾಯತ ಅತ್ಯಂತ ಪವಿತ್ರವಾದ ಧರ್ಮ ; ರಾಜೇಶ್ವರಿ ನಾಗರಾಜ್

0 35


ಮೂಡಿಗೆರೆ : ವೀರಶೈವ ಲಿಂಗಾಯತ ಅತ್ಯಂತ ಪವಿತ್ರವಾದ ಧರ್ಮವಾಗಿದ್ದು ಹೆಚ್ಚಿನ ಮಹತ್ವ ನೀಡುವ ಮೂಲಕ ಇಂದಿನ ಯುವಪೀಳಿಗೆ ಸಂಘಟಿಸುವಲ್ಲಿ ಮುಂದಾಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್ ಹೇಳಿದರು.


ಪಟ್ಟಣದ ಮಹಾಂತಿನ ಸಮುದಾಯಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಿ ಮಹಿಳಾ ಮತ್ತು ಯುವ ಘಟಕ ಹಾಗೂ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ) ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಧಾರ್ಮಿಕ ದುಂಧುಬಿ ಹಾಗೂ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.


ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋದಾಗ ಮಾತ್ರ ವೀರಶೈವ ಮಹಾಸಭಾಕ್ಕೆ ಹೆಚ್ಚಿನ ಶಕ್ತಿ ಬರಲಿದೆ ಇದರೊಂದಿಗೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸುವ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಬಹಳಷ್ಟು ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಆಧುನಿಕ ವಚನ ರಚನಕಾರ ರುದ್ರಮುರ್ತಿ ಎಲೆರಾಂಪುರ 6ನೇ ಶತಮಾನದಲ್ಲಿ ಬಸವಣ್ಣ ಮತ್ತು ಅಲ್ಲಮಪ್ರಭು. ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಕಾರರು ವಚನಗಳನ್ನು ರಚಿಸಿ ವಚನ ಕ್ರಾಂತಿ ಮಾಡಿದರು ಸುಮಾರು 800ವರ್ಷಗಳ ಇತಿಹಾಸವನ್ನು ವಚನ ಸಾಹಿತ್ಯ ಹೊಂದಿದೆ ಎಂದರು.


ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಮಾತನಾಡಿ, ವಿಶ್ವಕ್ಕೆ ಸಮಾನತೆ ದಾರಿ ತೋರಿದ ಧರ್ಮ ವೀರಶೈವ ಲಿಂಗಾಯತ ಧರ್ಮ. ಎದೆಯ ಮೇಲೆ ಲಿಂಗ ಕಟ್ಟಿ ಕೊಂಡು ವಿಭೂತಿ ಹಚ್ಚಿಕೊಂಡರೆ ಮುಖದ ಲಕ್ಷಣ ಹೆಚ್ಚಿ ಚರ್ಮದ ರಕ್ಷಣೆಯಾಗುವುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಿ.ಎಸ್.ಒಂಕಾರ್ ವಹಿಸಿ ಮಾತನಾಡಿದರು. ವೇ. ಜಿ.ಎಸ್.ಮಹೇಶ್ವರಯ್ಯ ಶಾಸ್ತ್ರಿ ಪ್ರಾಸ್ತಾವಿಕವಾಗಿ ಹಾಗೂ ಮಹಿಳಾ ಘಟಕ ಅಧ್ಯಕ್ಷೆ ರಾಜಲಕ್ಸ್ಮಿ, ಉಪಾಧ್ಯಕ್ಷೆ ಶಾಲಿನಿ ಅನಿಲ್ ಕುಮಾರ್, ಗೌರವದ್ಯಾಕ್ಷ ಬಸವರಾಜ್ ಮಾತನಾಡಿದರು.


ಇದೇ ವೇಳೆ ರಾಜೇಶ್ವರಿ ನಾಗರಾಜ್ ರವರಿಗೆ ಪುಷ್ಪಗಿರಿ ಸಮಾಜಸೇವಾ ರತ್ನ, ರುದ್ರಮೂರ್ತಿ ಎಲೆರಾಂಪುರ ರವರಿಗೆ ಪುಷ್ಪಗಿರಿ ಜ್ಞಾನ ಕೌಶಲ್ಯರತ್ನ ಹಾಗೂ ವೇ.ಜಿ.ಎಸ್.ಮಹೇಶ್ವರಯ್ಯ ಶಾಸ್ತ್ರಿ ಅವರಿಗೆ ಪುಷ್ಪಗಿರಿ ಧಾರ್ಮಿಕ ಜ್ಞಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಪುಷ್ಪಗಿರಿ ಪ್ರತಿಷ್ಠಾನದ ಅಧ್ಯಕ್ಷೆ ಉಮಾ ಮೋಹನ್, ಯುವ ಘಟಕ ಅಧ್ಯಕ್ಷ ಎಂ.ಸಿ.ಆದರ್ಶ, ಜಿಲ್ಲಾ ನಿರ್ದೇಶಕಿ ಸುಶೀಲ ಶೇಖರ್, ಟ್ರಸ್ಟಿ ಸಿ.ಸಿ.ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು. ಶಕುಂತಲಾಪಾಟೀಲ್ ಮತ್ತು ಮಲ್ಲಿಕಾ ರಾಜೇಶ್ ಇವರು ನಿರೂಪಿಸಿದರು. ರವಿ ಪಾಟೀಲ್ ವಂದಿಸಿದರು.

Leave A Reply

Your email address will not be published.

error: Content is protected !!