ಸ್ನೇಹಿತರೊಂದಿಗೆ ಈಜಲು ಹೋದ ಇಂಜಿನಿಯರ್ ಪದವೀಧರ ನೀರು ಪಾಲು !

0 17

ಶಿವಮೊಗ್ಗ : ಈಜಲು ಹೋದ ಯುವಕ, ಇಂಜಿನಿಯರ್ ಪದವೀಧರ ನೀರು ಪಾಲಾಗಿರುವ ಘಟನೆ ನಿನ್ನೆ ಸಂಜೆ ಸಮೀಪದ ಹೊಸೂಡಿಯ ಹೊನ್ನವಿಲೆ ಗ್ರಾಮದಲ್ಲಿ ನಡೆದಿದೆ.

ಹೊನ್ನವಿಲೆ ಗ್ರಾಮದ ಭದ್ರಾ ಚಾನೆಲ್ ಗೆ ಈಜಲು ಹೋಗಿದ್ದ ಸೂರ್ಯ (26) ಎಂಬ ಯುವಕ ನೀರು ಪಾಲಾಗಿದ್ದಾರೆ. ಮೂವರು ಸ್ನೇಹಿತರೊಂದಿಗೆ ಸೋಮವಾರ ಮಧ್ಯಾಹ್ನ ಸ್ನಾನಕ್ಕೆಂದು ಭದ್ರಾ ಚಾನೆಲ್‌ಗೆ ಸೂರ್ಯ ತೆರಳಿದ್ದರು.
ಈಜು ಹೊಡೆಯುತ್ತಲೆ ಚಾನೆಲ್ ನೀರಿನಲ್ಲಿ ಮುಂದೆ ಸಾಗಿದ ಅವರು ನೀರಿನಲ್ಲಿ ಮುಳುಗಿದ್ದಾರೆ.‌ ಮುಳುಗಿದವರು ಮೇಲೇಳಲಿಲ್ಲ. ಸ್ನೇಹಿತರಿಗೆ ಗಾಬರಿಯಾಗಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಹುಡುಕಾಟ ಆರಂಭಿಸಿದ್ದಾರೆ. ನಂತರ ಸೂರ್ಯ ಶವವಾಗಿ ಪತ್ತೆಯಾಗಿದ್ದಾರೆ.

ನಗರದ ಪಿಂಗಾರ ಬಾರ್ ಎದುರುಗಡೆಗಿದ್ದ ರವಿ ವೈನ್ ಶಾಪ್ ಈಗ ಬಟ್ಟೆ ಅಂಗಡಿಯಾಗಿದ್ದು, ಇದರ ಮಾಲೀಕ ಸೋಮಶೇಖರ್ ಎಂಬುವರ ಮಗ ಸೂರ್ಯ ಬೆಂಗಳೂರಿನಲ್ಲಿ ಇಂಜಿನಿಯರ್ ಮುಗಿಸಿ ಕೆಲಸಕ್ಕೆ ಸೇರಿಕೊಂಡಿದ್ದರು. ಬೆಂಗಳೂರಿನಿಂದ ರಜೆಯ ಮೇಲೆ ಬಂದಿದ್ದ ಸೂರ್ಯ ವಿಧಿಯ ಆಟಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.


ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ಮೃತ ದೇಹವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿರಿಸಲಾಗಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸೂರ್ಯ ಸ್ನೇಹಿತರೊಂದಿಗೆ ಈಜಲು ಹೋಗಿದ್ದರು. ಸಂಜೆ 4 ಗಂಟೆಗೆ ಈ ಅವಘಡ ಸಂಭವಿಸಿದೆ.

Leave A Reply

Your email address will not be published.

error: Content is protected !!