ಲೋಕಕಲ್ಯಾಣಾರ್ಥ ಸಾಮೂಹಿಕ ಸತ್ಯನಾರಾಯಣ ಪೂಜೆ, ರಕ್ಷಾ ಸುದರ್ಶನ ಹೋಮ

0 270

ರಿಪ್ಪನ್‌ಪೇಟೆ: ಉತ್ತರಾಯಣ ಪುಣ್ಯಕಾಲದಲ್ಲಿ ಸೂರ್ಯ ತನ್ನ ಪಥವನ್ನು ಬದಲಿಸುವ ಮೂಲಕ ನಮ್ಮಲ್ಲಿರುವ ಕತ್ತಲನ್ನು ದೂರ ಮಾಡಿ ಬೆಳಕಿನೆಡೆಗೆ ಸಾಗಿಸುವ ಇಂತಹ ಪುಣ್ಯ ಕಾಲದ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥ ರಕ್ಷಾಸುದರ್ಶನ ಹೋಮ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆಯಿಂದ ಭಕ್ತರಲ್ಲಿ ಪುಣ್ಯ ಪ್ರಾಪ್ತಿಯಾಗುವುದೆಂದು ಗಂಗೊಳ್ಳಿಯ ವೇದ ವಿದ್ವಾನ ಜಗದೀಶ್‌ಭಟ್ ಹೇಳಿದರು.

ರಿಪ್ಪನ್‌ಪೇಟೆಯ ಜಿ.ಎಸ್.ಬಿ.ಸಮಾಜದವರು ಮಕರ ಸಂಕ್ರಾಂತಿಯ ಅಂಗವಾಗಿ ಆಯೋಜಿಸಲಾದ “ರಕ್ಷಾ ಸುದರ್ಶನ ಹೋಮ ಸಾಮೂಹಿಕ ಸತ್ಯನಾರಾಯಣ ಪೂಜೆ’’ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಸಮಾಜದ ಸಂಘಟನೆಗೆ ಇಂತಹ ಧಾರ್ಮಿಕ ಆಚರಣೆಗಳು ಸಹಕಾರಿಯಾಗುವುದರೊಂದಿಗೆ ಸಮಜದ ಏಳಿಗೆ ಸಾಮರಸ್ಯವನ್ನು ಬೆಳೆಸಿಕೊಳ್ಳಲು ಪೂರಕವಾಗುವುದೆಂದರು.

ಸಮಾಜದ ಹಿರಿಯರನ್ನು ಸನ್ಮಾನಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಸನ್ನಭಟ್, ಜಿ.ಎಸ್.ಬಿ.ಸಮಾಜದ ಅಧ್ಯಕ್ಷ ಗಣೇಶ್ ಎನ್.ಕಾಮತ್, ಮಹಿಳಾ ಮಂಡಳಿಯ ಆಧ್ಯಕ್ಷೆ ರಾಧಿಕಾ ರಾಮದಾಸ್‌ನಾಯಕ್, ಜೆ.ರಾಧಾಕೃಷ್ಣ, ಆರ್.ಉಮೇಶ್, ಡಿ.ನರಸಿಂಹಕಾಮತ್, ಹರೀಶ್ ಶಂಕರ ಶರಾಫ್, ಹರೀಶ್‌ಪ್ರಭು, ಸತೀಶ್‌ಕಿಣಿ ಇನ್ನಿತರ ಸಮಾಜದ ಪ್ರಮುಖರು ಪಾಲ್ಗೊಂಡಿದರು.

ರಾಜಸ್ಥಾನಿಗಳಿಂದ ದೇಗುಲದ ಆವರಣ ಸ್ವಚ್ಚತಾ ಸೇವೆ


ರಿಪ್ಪನ್‌ಪೇಟೆ: ಇಲ್ಲಿನ ಶಿವಮೊಗ್ಗ–ಕುಂದಾಪುರ ಮಾರ್ಗದ ಬೈರಾಪುರ ಕಂತೆ ಸಿದ್ದೇಶ್ವರ ದೇವಸ್ಥಾನದ ಮುಂಭಾಗದ ಅವರಣ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ರಾಜಸ್ತಾನಿ ಸಮಾಜದವರು ಭಾನುವಾರ ಮುಂಜಾನೆ ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು.


ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಾವು ದೇವಸ್ಥಾನವನ್ನು ಸ್ವಚ್ಚಗೊಲಿಸುವ ಮೂಲಕ ಕರೆ ನೀಡಿದಂತೆ ರಾಷ್ಟ್ರ ವ್ಯಾಪಿ ದೇಗುಲ ಸ್ವಚ್ಚತಾ ಅಭಿಯಾನ ಹಿನ್ನಲೆ ಇಲ್ಲಿನ ಬೈರಾಪುರದಲ್ಲಿ ರಾಜಸ್ಥಾನಿ ಸಮಾಜದವರು ಸ್ವಪ್ರೇರಣೆಯಿಂದ ಸ್ವಚ್ಚಗೊಳಿಸುವ ಮೂಲಕ ಗಮನಸೆಳೆದರು.

Leave A Reply

Your email address will not be published.

error: Content is protected !!