ಎಲೆಚುಕ್ಕೆ ರೋಗಕ್ಕೆ ವಿಜ್ಞಾನಿಗಳನ್ನು ಕಳುಹಿಸಿ ಸಂಶೋಧನೆ ಮಾಡಿಸಲಾಗುವುದು ; ಮಧು ಬಂಗಾರಪ್ಪ

0 372

ತೀರ್ಥಹಳ್ಳಿ : ಅಡಿಕೆ (Arecanut) ಬೆಳೆಗೆ ನೀರಿನ ತೊಂದರೆ ಆಗುತ್ತಿದೆ. ಅಂತರ್ಜಲ ಕುಸಿತ ಕಂಡಿದ್ದು 6% ಇದ್ದದ್ದು 15% ಡೌನ್ ಆಗಿದೆ. ಎಲೆಚುಕ್ಕೆ ರೋಗ ಬಂದಿದ್ದರಿಂದ ರೈತರಿಗೆ ಸಮಸ್ಯೆ ಆಗಿದೆ. ಅಡಿಕೆ ಬೆಳೆಗೆ ತಗುಲಿರುವ ಎಲೆಚುಕ್ಕೆ ರೋಗಕ್ಕೆ ವಿಜ್ಞಾನಿಗಳನ್ನು ಕಳುಹಿಸಿ ಸಂಶೋಧನೆ ಮಾಡಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದರು.

ತೀರ್ಥಹಳ್ಳಿ (Thirthahalli) ತಾಲೂಕುಗಳ ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿರುವ ಕುಡಿಯುವ ನೀರಿನಲ್ಲಿ ಸಮಸ್ಯೆಗೆ 46 ಗ್ರಾಮಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 28 ಬೋರ್ವೆಲ್ ಅವಶ್ಯಕತೆ ಇರುವುದರಿಂದ ಪ್ರತಿ ತಾಲೂಕಿಗೆ 50 ಲಕ್ಷ ಮಿಸಲಿಟ್ಟಿದ್ದಾರೆ ಅದನ್ನು ಉಪಯೋಗಿಸಿಕೊಳ್ಳಿ ಎಂದರು.

ಫ್ಲೋರೇಡ್ ಕಂಟೆಂಟ್ ನೀರು ಇರುವ ಗ್ರಾಮಗಳಿಗೆ ಪ್ರಧಾನ್ಯತೆ ನೀಡಬೇಕು ಎಂದು ಶಾಸಕರಾದ ಆರಗ ಜ್ಞಾನೇಂದ್ರ ಹೇಳಿದಕ್ಕೆ ಆ ವಿಷಯಕ್ಕೆ ಪೂರಕವಾಗಿ ಪರಿಹಾರ ಈಗಲೇ ಮಾಡಿ ಇಟ್ಟುಕೊಳ್ಳಿ. ಪ್ಲಾನ್ ಎ ಪ್ಲಾನ್ ಬಿ ಅಂತ ರೆಡಿ ಮಾಡಿ ಇಟ್ಟು ಕೊಳ್ಳಬೇಕಾಗುತ್ತದೆ. ಈಗಾಗಲೇ 2 ಗ್ರಾಮಗಳಲ್ಲಿ ನಲ್ಲಿ ಫ್ಲೋರೇಡ್ ಇದೆ ಎಂದು ತಿಳಿದು ಬಂದಿರುವುದರಿಂದ ಪ್ರತಿಯೊಂದು ಗ್ರಾಮಗಳಲ್ಲಿ ಪರೀಕ್ಷೆ ನೆಡೆಸಿ ಎಂದು ತಿಳಿಸಿದರು.

ಅರಣ್ಯ ಇಲಾಖೆಗೆ ಸಂಬಂಧಪಟ್ಟ ಜಾಗದಲ್ಲಿ ನೀರಿನ ಟ್ಯಾಂಕ್ ಹಾಕಲು ಬಿಡುವುದಿಲ್ಲ ಎಂದು ಪಿಡಿಓ ತಿಳಿಸಿದ್ದಕ್ಕೆ ಫಾರೆಸ್ಟ್ ಅಧಿಕಾರಿಗಳು ಮಾತನಾಡಿ ಎಫ್ ಸಿ ಗೆ ಅಪ್ಲೈ ಮಾಡಿದರೆ ಕ್ಲಿಯರ್ ಮಾಡಿಕೊಡುತ್ತೇವೆ ಎಂದರು ಆಗ ಸಚಿವರು ಮಾತನಾಡಿ ನನ್ನ ಪ್ರಕಾರ ಎಲ್ಲದಕ್ಕೂ ಪರ್ಮಿಷನ್ ತಗೊಂಡೆ ಮಾಡಲಾಗುವುದಿಲ್ಲ ಕೆಲವು ಮಾನವೀಯತೆ ದೃಷ್ಟಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು.

ಇನ್ನು ಜೆಜೆಎಮ್ ವಿಷಯದಲ್ಲಿ ಸ್ವಲ್ಪ ಬೇಜವಾಬ್ದಾರಿತನ ಕಾಣಿಸುತ್ತಿದೆ. ಜೆಜೆಎಂ ಸಮಸ್ಯೆ ನನಗೆ ಗೊತ್ತಿದೆ ಸಂಬಂಧಪಟ್ಟ ಅಧಿಕಾರಿಗಳು ರಿಪೋರ್ಟ್ ಕಳುಹಿಸಿಕೊಡಿ ಎಂದಿದ್ದಕ್ಕೆ ಈ ವಿಷಯದ ಬಗ್ಗೆ ಮಾತನಾಡಿದ ಶಾಸಕರು 20 ಮನೆಗಳಿಗಿಂತ ಕಡಿಮೆ ಇರುವ ಊರುಗಳಿಗೆ ಜೆಜೆಎಂ ಅಡಿಯಲ್ಲಿ ಕನೆಕ್ಷನ್ ಕೊಡಲು ಬರುವುದಿಲ್ಲ ಎಂಬ ಕಾನೂನಿದೆ. ಮೋರಿಕಟ್ಟಲು ಶಕ್ತಿ ಇಲ್ಲದವರು ಕೂಡ ಇಲ್ಲಿ ಬಂದು ಜೆಜೆಎಂ ಅಡಿಯಲ್ಲಿ ಕಂಟ್ರಾಕ್ಟರ್ ಆಗಿ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರು ಬಂದು ಇಲ್ಲಿಯ ಜನರಿಗೆ ನಿಬಂಧನೆಯನ್ನು ಹೇಳುತ್ತಾರೆ ಅದನ್ನು ಸಡಿಲಗೊಳಿಸಬೇಕು. ಲೋಕಲ್ ಕಂಟ್ರಾಕ್ಟ್ ಗರುಗಳಿಗೆ ಅವಕಾಶ ಕೊಡಬೇಕು ಅದು ಯಾರೇ ಆಗಿರಲಿ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡದಿದ್ದರೆ ತೊಂದರೆ ಆಗುತ್ತದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಬರುವ ಮಾರ್ಚ್ ನಲ್ಲಿ ಕೆಲಸ ಶುರುಮಾಡದೇ ಹೋದರೆ ಈ ಸ್ಕೀಮ್ ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ.

ಕುಡಿಯುವ ನೀರಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಎಲೆ ಚುಕ್ಕಿ ರೋಗಕ್ಕೆ ಪರಿಹಾರ ಕೂಡ ನೀಡಬೇಕು ಎಂದು ಮನವಿ ಮಾಡಿದರು. ತಕ್ಷಣವೇ ಮಂತ್ರಿಗಳು ಇದಕ್ಕೆ ಶಾಶ್ವತ ಪರಿಹಾರ ನೀಡುವುದಾಗಿ ಸೈಂಟಿಸ್ಟ್ ಗಳು ಹೇಳಿದ್ದಾರೆ ಫಾಲೋ ಅಪ್ ಮಾಡುತ್ತೇನೆ ಎಂದರು.

ಪಟ್ಟಣ ಪಂಚಾಯತಿ ಸದಸ್ಯರಾದ ಗಣಪತಿಯವರು ಗುರುವಾರ ದಿವಸ ಕನಕದಾಸ ಜಯಂತಿಯನ್ನು ತಾಲೂಕು ಆಡಳಿತದ ವತಿಯಿಂದ ಕಾಟಚಾರಕ್ಕೆ ಮಾಡಿದ್ದಾರೆ ಎಂದು ಮಂತ್ರಿಗಳ ಮುಂದೆ ತಿಳಿಸಿದಾಗ ಇಲ್ಲಿ ಜಾತಿಯಾಧರಿತ ಆಚರಣೆಗಿಂತ ಎಲ್ಲರೂ ಒಟ್ಟು ಸೇರಿ ಮಹಾತ್ಮರ ಜಯಂತಿಯನ್ನು ಮಾಡಬೇಕಿದೆ.

ನಾನು ಈ ಹಿಂದೆ ಮುಖ್ಯಮಂತ್ರಿಗಳಿಗೆ ಯಾವುದೇ ಜಯಂತಿಗಳಿಗೆ ದಯಮಾಡಿ ರಜೆಯನ್ನು ಕೊಡಬೇಡಿ ಹೇಳಿದ್ದೆ. ಇನ್ನು ಮುಂದೆಯಾದರೂ ಎಲ್ಲರನ್ನು ಒಗ್ಗೂಡಿಸಿ ಆಚರಣೆ ಮಾಡಿ ಎಂದು ತಿಳಿಸಿದರು.

Leave A Reply

Your email address will not be published.

error: Content is protected !!