ಕಡ್ಡಾಯವಾಗಿ ಮತದಾನ ಮಾಡಿ ದೇಶದ ಭವಿಷ್ಯ ರೂಪಿಸಿ ; ನರೇಂದ್ರಕುಮಾರ್

0 240

ಹೊಸನಗರ: ಭಾರತ ದೇಶದ ಪ್ರಜೆಗಳಾದ ನಾವು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡುವ ಮೂಲಕ ಈ ದೇಶದ ಭವಿಷ್ಯವನ್ನು ರೂಪಿಸಿಬೇಕು ಎಂದು ಹೊಸನಗರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್‌ ಹೇಳಿದರು.

ಹೊಸನಗರ ತಾಲ್ಲೂಕು ಪಂಚಾಯಿತ್ ಸ್ವೀಪ್ ಸಮಿತಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ವತಿಯಿಂದ ಮತದಾನ ಜಾಗೃತಿಗಾಗಿ ತಾಲ್ಲೂಕು ಪಂಚಾಯತಿಯಿಂದ ಪ್ರಮುಖ ಬೀದಿಗಳಲ್ಲಿ ಮತದಾರರಿಗೆ ಜಾಗೃತಿ ಮಾಡಿಸಿ ಮಾತನಾಡಿದರು.

ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವವನು ಗಟ್ಟಿಗೊಳಿಸಬೇಕಾಗಿದೆ ಮತದಾನ ಮಾಡುವುದು ನಿಮ್ಮ ಮೂಲಭೂತ ಹಕ್ಕು ಮತ್ತು ಕರ್ತವ್ಯವಾಗಿದೆ. ಮತದಾರ ಜಾಗೃತರಾಗಿ ಮತದಾನ ಮಾಡಿದರೇ ಸದೃಢ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬಹುದು ನೀವು ಮಾಡುವ ಮತದಾನ ಗೌಪ್ಯವಾಗಿರಲಿ ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಪರಾಧ ಮತ್ತು ಶಿಕ್ಷಾರ್ಹ, ಪ್ರತಿಯೊಬ್ಬರು ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಸಿದ್ದರಾಗಿ ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೇ ನಿರ್ಭಿತಿಯಿಂದ ಮತದಾನ ಮಾಡಬೇಕು ನೀವು ಮಾಡುವ ಮತದಾನದ ಅಭ್ಯರ್ಥಿಯ ಹೆಸರು ಖಚಿತವಾಗಿ ಇದೆಯೇ ಎಂದು ಗುರುತಿಸಿಕೊಂಡು ಮತದಾನ ಮಾಡಿ ವಿಶ್ವಾಸವುಳ್ಳ ಬಾರತದ ಪೌರರಾದ ನಾವು ದೇಶದ ಪ್ರಜಾಸತ್ತಾತ್ಮಕ ಮುಕ್ತ ನ್ಯಾಯಸಮ್ಮತ, ಶಾಂತಿಯುತ ಚುನಾವಣೆಯನ್ನು ಎತ್ತಿ ಚುನಾವಣೆಯಲ್ಲಿ ನಿರ್ಭಿತರಾಗಿ ಧರ್ಮ, ಜನಾಂಗ, ಜಾತಿ, ಮತ, ಭಾಷೆ ಯಾವುದೇ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸಿಬೇಕೆಂದು ಕೇಳಿಕೊಂಡರು.

ಈ ಜಾಗೃತಿ ಜಾಥಾದಲ್ಲಿ ತಾಲ್ಲೂಕು ಪಂಚಾಯತಿ ವ್ಯವಸ್ಥಾಪಕರಾದ ಕೆ.ಜಿ. ಶಿವಕುಮಾರ್, ಎಸ್.ಆರ್.ಡ್ಲ್ಯೂ ರವಿ, ಅಂಗವಿಕಲ ಕಲ್ಯಾಣಧಿಕಾರಿ ಶಶಿರೇಖಾ, ರಾಜೇಂದ್ರಕುಮಾರ್, ಮಿಥುನ್, ಮಂಜಪ್ಪ, ಐಶ್ಚರ್ಯ, ಅರ್ಪಿತಾ, ನವೀನ್, ಜ್ಯೋತಿ ಇನ್ನೂ ಮುಂತಾದವರು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!