ಹರತಾಳು, ರಿಪ್ಪನ್‌ಪೇಟೆಯಲ್ಲಿ ಶ್ರದ್ಧಾಭಕ್ತಿಯಿಂದ ರಾಮನವಮಿ ಆಚರಣೆ

0 133

ರಿಪ್ಪನ್‌ಪೇಟೆ: ಹರತಾಳು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಮತ್ತು ರಿಪ್ಪನ್‌ಪೇಟೆಯ ಬ್ರಾಹ್ಮಣ ಸಮಾಜದ ಶ್ರೀರಾಮಮಂದಿರದಲ್ಲಿ ಜಿ.ಎಸ್.ಬಿ.ಕಲ್ಯಾಣಮಂದಿರದಲ್ಲಿ  ರಾಮನವಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಹರತಾಳು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಮನ ಸ್ಮರಣೆ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯಗಳು ಅದ್ಧೂರಿಯಾಗಿ ಜರುಗಿದವು. ರಿಪ್ಪನ್‌ಪೇಟೆ ಬ್ರಾಹ್ಮಣ ಸಮಾಜ ಸಂಘದಲ್ಲಿ ಶ್ರೀರಾಮಮಂದಿರಲ್ಲಿ “ಶ್ರೀರಾಮ ವಸಂತ ನವರಾತ್ರಿ’’ ಈ ಕಾರ್ಯಕ್ರಮದ ಅಂಗವಾಗಿ ಶ್ರೀರಾಮದೇವರ ಸನ್ನಿಧಿಯಲ್ಲಿ ಶ್ರೀಸತ್ಯನಾರಾಯಣವ್ರತ  ವಿಶೇಷ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆಯೊಂದಿಗೆ ಭಕ್ತರಿಗೆ ಪಾನಕ ನಂತರ ಅನ್ನಸಂತರ್ಪಣೆ ಜರುಗಿತು. ಗೌರಸಾರಸ್ವತ ಕಲ್ಯಾಣ ಮಂದಿರದಲ್ಲಿ ಶ್ರೀರಾಮ ದೇವರಿಗೆ ಅಭಿಷೇಕ ಪೂಜೆ ಶ್ರೀರಾಮ ಭಜನೆ ಕೋಸಂಬರಿ ಪಾನಕ ತೀರ್ಥ ಪ್ರಸಾದ ವಿತರಣೆ ನಡೆಯಿತು.

ಶಿಲಾಮಯ ನೂತನ ಕಟ್ಟಡದಲ್ಲಿ ಚೌಡೇಶ್ವರಿ ದೇವಿಯ ಪುನರ್ ಪ್ರತಿಷ್ಟಾಪನಾ ಮಹೋತ್ಸವ

ರಿಪ್ಪನ್‌ಪೇಟೆ: ಇಲ್ಲಿನ ಬರುವೆ ಗ್ರಾಮದಲ್ಲಿನ ಶ್ರೀಚೌಡೇಶ್ವರಿ ದೇವಸ್ಥಾನ ಶಿಲಾಮಯ ದೇವಸ್ಥಾನವಾಗಿ ಜೀರ್ಣೋದ್ದಾರಗೊಳಿಸಲಾಗಿದ್ದು  ಜೀರ್ಣೋದ್ದಾರ ಅಷ್ಟಬಂಧ ಸಹಿತ ಪುನರ್ ಸಪರಿಹಾರ ಸಹಿತ ಚೌಡೇಶ್ವರಿ ದೇವಿಯ ಮತ್ತು ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮವು ಶಿವಮೊಗ್ಗದ ಶ್ರೀವಸಂತಭಟ್ಟರು ಮತ್ತು ಸಂಗಡಿಗರ ಪೌರೋಹಿತದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯ ಜರುಗಿತು. 

ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ದೇವನಂದಿ ಋತ್ವಗ್ವರ್ಣನೆ, ಬಿಂಬಶುದ್ದಿ, ಬಿಂಬ ಜಲಾಧಿವಾಸ ಪೂಜೆ, ಸಂಜೆ 6 ಗಂಟೆಯಿಂದ ಪ್ರಸಾದ ಶುದ್ದಿ,ವಾಸ್ತು ರಾಕ್ಷೋಘ್ನ ಹೋಮ ಪೂಜಾಬಲಿ, ಬಿಂಬ ಜಲೋದ್ದಾರ, ಬಿಂಬ ಶುದ್ಧಿ ಸ್ನಪನ, ಶಯ್ಯಾಧಿವಾಸ ತತ್ವ ಹೋಮ, ಪ್ರತಿಷ್ಠಂಗ ಹೋಮಾದಿಗಳು. ಪರಿವಾರ ದೇವತಾ ಸಹಿತ ಚೌಡೇಶ್ವರಿ ಪ್ರತಿಷ್ಟೆ ಮತ್ತು ಶಿಖರ ಪ್ರತಿಷ್ಠೆ ಪೂಜಾದಿಗಳು 108 ಪರಿಕಲಶದ ಸಹಿತ ಬ್ರಹ್ಮ ಕಲಶ ಸ್ಥಾಪನೆ ಪೂಜಾದಿಗಳು ನಾಗನ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಪೂಜೆ ಜರುಗಿತು.

ಚೌಡೇಶ್ವರಿ ದೇವಿಯ ಮತ್ತು ಪ್ರತಿಷ್ಟಾಪನೆ ಪೂಜೆ ಮತ್ತು ವಿಶೇಷ ಅಲಂಕಾರ ಪೂಜೆಯೊಂದಿಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಸಹಸ್ರ ಸಂಖ್ಯೆಯಲ್ಲಿ ಭಕ್ತ ಸಮೂಹ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಚೌಡೇಶ್ವರಿ ದೇವಿಯ ದರ್ಶನಾಶೀರ್ವಾದ ಪಡೆದರು.

Leave A Reply

Your email address will not be published.

error: Content is protected !!