ಕೋಡೂರಿನಲ್ಲಿ ನಾಳೆ ಸಿರಿಧಾನ್ಯ ಜಾಗೃತಿ ಮತ್ತು ಮಹತ್ವ ಕುರಿತು ಕಾರ್ಯಕ್ರಮ

0 571

ಹೊಸನಗರ : ಆನಂದಪುರ ಸಮೀಪದ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹೈದರಾಬಾದ್‌‌ನ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ, ಕೃಷಿ ಇಲಾಖೆ ಹಾಗೂ ಕೋಡೂರು ಗ್ರಾಮ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ಡಿ.26ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಕೋಡೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಸಿರಿಧಾನ್ಯ ಜಾಗೃತಿ ಮತ್ತು ಮಹತ್ವ ಕುರಿತಾದ ರೈತಪರ ಕಾರ್ಯಕ್ರಮ ನಡೆಯಲಿದೆ.

ಕೃಷಿ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಉದ್ಘಾಟಿಸುವ ಈ ಕಾರ್ಯಕ್ರಮದಲ್ಲಿ, ಗ್ರಾ.ಪಂ. ಅಧ್ಯಕ್ಷ ಕೆ.ಎಸ್. ಉಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೃಷಿ ವಿವಿ ಶಿಕ್ಷಣ ನಿರ್ದೇಶಕ ಡಾ. ಬಿ. ಹೇಮ್ಲಾ ನಾಯಕ್, ಕುಲಸಚಿವ ಮತ್ತು ವಿಶೇಷಾಧಿಕಾರಿ ಡಾ. ಕೆ.ಸಿ.ಶಶಿಧರ್, ಸಂಶೋಧನಾ ನಿರ್ದೇಶಕ ಡಾ. ಬಿ.ಎಂ. ದುಶ್ಯಂತ್ ಕುಮಾರ್, ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಡೀನ್ (ಸ್ನಾತಕೋತ್ತರ) ಡಾ. ದಿನೇಶ್ ಕುಮಾರ್, ನಿರ್ದೇಶಕ (ವಿದ್ಯಾರ್ಥಿ ಕಲ್ಯಾಣ) ಡಾ. ಶಿವಕುಮಾರ್, ಸಹ ವಿಸ್ತರಣಾ ನಿರ್ದೇಶಕ ಡಾ. ಬಿ.ಸಿ. ಹನುಮಂತಸ್ವಾಮಿ, ಕೆ.ವಿ.ಕೆ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಗಿರಿಜೇಶ್, ಹೈದರಾಬಾದ್ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಂಗಪ್ಪ ಹಾಗೂ ಹೊಸನಗರ ಕೃಷಿ ಇಲಾಖೆ ಸಹಾಕಯ ನಿರ್ದೇಶಕ ಡಾ. ಸಚಿನ್ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ರೈತಾಪಿ ವರ್ಗವೂ ಸೇರಿದಂತೆ ಕೃಷಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ವಿವಿ ಕೋರಿದೆ.

Leave A Reply

Your email address will not be published.

error: Content is protected !!