ಗೃಹಜ್ಯೋತಿ ಯೋಜನೆ ; ಉಚಿತ ವಿದ್ಯುತ್ ಸೌಲಭ್ಯದ ವಿವರ

0 44


ಶಿವಮೊಗ್ಗ: ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ನೀಡುತ್ತಿದ್ದು, ಮೆಸ್ಕಾಂ ಶಿವಮೊಗ್ಗ ವೃತ್ತ ವ್ಯಾಪ್ತಿಯ ಗ್ರಾಹಕರಿಗೆ ಈ ಕೆಳಕಂಡಂತೆ ಸೌಲಭ್ಯವನ್ನು ನೀಡಲಾಗಿದೆ.

ದಿ: 01-08-2023 ರಿಂದ 13-08-2023 ರವರೆಗೆ ಒಟ್ಟು ಗೃಹಬಳಕೆ ಗ್ರಾಹಕರ ಸಂಖ್ಯೆ 527014 ಆಗಿರುತ್ತದೆ. ಒಟ್ಟು ನೋಂದಾಯಿಸಿದ ಗ್ರಾಹಕರ ಸಂಖ್ಯೆ 404674, ಶೇ.ನೋಂದಾಯಿತ ಗ್ರಾಹಕರ ಸಂಖ್ಯೆ ಶೇ.77. ಗೃಹಜ್ಯೋತಿ ಗ್ರಾಹಕರಿಗೆ ವಿತರಿಸಿದ ಒಟ್ಟು ಬಿಲ್ಲುಗಳು 208785, ಗೃಹಜ್ಯೋತಿ ಗ್ರಾಹಕರಿಗೆ ಶೂನ್ಯ ಬಿಲ್ಲುಗಳನ್ನು ವಿತರಿಸಿರುವುದು 164245 ಗ್ರಾಹಕರಿಗೆ. ಶೂನ್ಯ ಬಿಲ್ ಸಬ್ಸಿಡಿ ಮೊತ್ತ ರೂ.43770432. ನೆಟ್ ಬಿಲ್ ನೀಡಿರುವ ಗ್ರಾಹಕರ ಸಂಖ್ಯೆ 44540, ನೆಟ್‍ಬಿಲ್ ಸಬ್ಸಿಡಿ ಮೊತ್ತ ರೂ. 21657181, ಒಟ್ಟು ಸಬ್ಸಿಡಿ ಮೊತ್ತ ರೂ.65427614 ನೀಡಲಾಗಿರುತ್ತದೆ ಎಂದು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್(ವಿ) ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!