ತುರ್ತು ಸೇವೆಯ ಆಂಬುಲೆನ್ಸ್‌ಗೆ 108 ಸಮಸ್ಯೆ | ಟಯರ್ ಸವೆದು ನಾಯಿ ನಾಲಿಗೆಯಂತಾಗಿ ಅಪಘಾತವನ್ನು ಆಹ್ವಾನಿಸುತ್ತಿರುವ ಹೊಸನಗರ ಹಾಗೂ ನಗರ ಆಸ್ಪತ್ರೆಯ 108 ಆಂಬುಲೆನ್ಸ್‌ಗಳು

0 559

ಹೊಸನಗರ : ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಮತ್ತು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ರಾಷ್ಟ್ರೀಯ ತುರ್ತು ಸೇವಾ 108 ವಾಹನದ ಟೈಯರ್ ಗಳು ಸವೆದು ತಂತಿಗಳು ಹೊರಬಂದ ಸ್ಥಿತಿಯಲ್ಲಿದ್ದು ನಾಯಿ ನಾಲಿಗೆಯಂತಾಗಿದ್ದರು ಅಪಘಾತಗಳ ಇನ್ನಿತರ ತುರ್ತು ಸೇವಾ ಕಾರ್ಯಕ್ಕೆ ಈ ವಾಹನಗಳನ್ನು ಬಳಸಲಾಗುತ್ತಿದೆ.

ಯಾವ ಕ್ಷಣದಲ್ಲಿ ಈ ವಾಹನಗಳು ಅಪಘಾತಕ್ಕೆ ತುತ್ತಾಗುತ್ತದೋ ಎಂದು ಎದುರು ನೋಡಬೇಕಾದ ಪರಿಸ್ಥಿತಿ ಈ ವಾಹನಗಳಿಗೆ ಉಂಟಾಗಿದ್ದರು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳು ಹಾಗೂ ಆರೋಗ್ಯ ರಕ್ಷಾ ಸಮಿತಿಯವರು ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.

error: Content is protected !!