ದರೋಡೆಗೆ ಸಂಚು ಹಾಕುತ್ತಿದ್ದ ಗ್ಯಾಂಗ್‌ ಅಂದರ್

0 470

ಶಿವಮೊಗ್ಗ : ದರೋಡೆಗೆ ಸಂಚು ಹಾಕುತ್ತಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಎಸ್.ಆರ್.ಟಿ.ಸಿ ಡಿಪೋ ಬಳಿ ಮಂಜುನಾಥ ಬಡಾವಣೆಗೆ ಹೋಗುವ ದಾರಿಯಲ್ಲಿ ದರೋಡೆಗೆ ಸಂಚು ಹಾಕುತ್ತಿದ್ದ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಡಿಪೋ ಪಕ್ಕದ ಎಕ್ಸಿಬಿಷನ್ ಜಾಗದಲ್ಲಿ ಮಂಜುನಾಥ ಬಡಾವಣೆಗೆ ಹೋಗಲು ಇರುವ 80 ಅಡಿ ರಸ್ತೆಯಲ್ಲಿ ಓಡಾಡುವ ಜನರಿಗೆ ಖಾರದ ಪುಡಿ ಎರಚಿ ಆಯುಧ ತೋರಿ ಚಿನ್ನಾಭರಣವನ್ನು ದೋಚಲು ಒಂದು ಗ್ಯಾಂಗ್ ಸಿದ್ದವಾಗಿತ್ತು. ಈ ಗ್ಯಾಂಗ್ ಪಕ್ಕಾ ದರೋಡೆಗೆ ಇಳಿದಿದೆ ಎಂಬ ಮಾಹಿತಿ ಪಡೆದ ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಬಂದು ದರೋಡೆಗೆ ಸಂಚು ಹಾಕುತ್ತಿರುವವರನ್ನು ಬಂಧಿಸಿದ್ದಾರೆ.

ಇವರೆಲ್ಲಾ ಪೊಲೀಸರ ಬಳಿ ಹಣದ ಅವಶ್ಯಕತೆ ಇದ್ದುದ್ದರಿಂದ ಜನರ ಬಳಿ ನಗದು ಮತ್ತು ಚಿನ್ನಾಭರಣವನ್ನು ದೋಚಲು ಸಂಚು ಮಾಡುತ್ತಿರುವುದಾಗಿ ಬಾಯಿ ಬಿಟ್ಟಿದ್ದಾರೆ.

ಅಕ್ರಿಖಾನ್, ಮುಸ್ತಾಕ್ ಅಹಮದ್, ಆದಿಲ್ ಪಾಶ, ಮಾಜ್ ಬೇಗ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಬಳಿಯಿದ್ದ
ಆಯುಧಗಳು, ಖಾರದ ಪುಡಿ ಮತ್ತು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಓರ್ವ ಪರಾರಿಯಾಗಿದ್ದಾನೆ.

ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!