ರೈತರು ಹೈನುಗಾರಿಕೆಗೆ ಮುಂದಾಗಬೇಕಿದೆ‌ ; ಕಾರಣಗಿರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಂ.ಪಿ. ರಮಾನಂದ

0 195


ಹೊಸನಗರ : ತಾಲೂಕಿನ ಕೆಲವೇ ಲಾಭದಾಯಕ ಹಾಲು ಉತ್ಪಾದಕರ ಸಂಘಗಳಲ್ಲಿ ನಮ್ಮ ಸಂಘವು ಒಂದಾಗಿದೆ ಎಂದು ಇಲ್ಲಿನ ಕಾರಣಗಿರಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಪಿ.ರಮಾನಂದ ತಿಳಿಸಿದರು.


2023-23ನೇ ಸಾಲಿನ ಸಂಘದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡದ ಅವರು, 2024ಕ್ಕೆ ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಕೊನೆಗೊಳ್ಳಲಿದ್ದು, ತಮ್ಮ ಅಧ್ಯಕ್ಷಾವಧಿಯಲ್ಲಿ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಪ್ರಸಕ್ತ ಸಾಲಿನಲ್ಲಿ ಸಂಘವು ರೂ 28 ಸಾವಿರ ಗಳಿಸಿದ್ದು, ಹೈನುಗಾರಿಕೆಗೆ ರೈತರು ಮುಂದಾಗದಿರುವುದು ಮುಂಬರುವ ದಿನಗಳಲ್ಲಿ ಶೋಚನೀಯ ಸಂಗತಿ ಆಗಲಿದೆ ಎಂದರು.


ಇದೇ ಸಂದರ್ಭದಲ್ಲಿ ಸಂಘದಲ್ಲಿ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಸ್ವಯಂಪ್ರೇರಿತರಾಗಿ ಇತ್ತೀಚೆಗೆ ನಿವೃತ್ತಿ ಹೊಂದಿದ ಸಿಬ್ಬಂದಿಗಳಾದ ಸಂಪೆಮನೆ ಗಿರೀಶ್, ಕೆರೆಹೊಂಡ ಚಂದ್ರಶೇಖರ ಅವರನ್ನು ಸಂಘ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟಿತು.


ಸಭೆಯಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹೆಚ್.ಎನ್. ವಿದ್ಯಾಧರ ಹಾಗೂ ವಿಸ್ತರಣಾಧಿಕಾರಿ ಶಿವಮೂತಿ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಉಪಾಧ್ಯಕ್ಷ ಉಮೇಶ್ ಉಡುಪ, ನಿರ್ದೇಶಕರಾದ ವಿ.ಆತ್ಮಾರಾಮ್, ನಾರಾಯಣ ಅಡಿಗ, ಬಾಲಕೃಷ್ಣ ಐತಾಳ್, ವೆಂಕಟರಮಣ, ಸಿಬ್ಬಂದಿಗಳಾದ ಕಾರ್ಯದರ್ಶಿ ಉಮಾ, ಹಾಲು ಪರೀಕ್ಷಕಿ ರೇಷ್ಮಾ, ಕೃತಕ ಗರ್ಭದಾರಣಾ ಕಾರ್ಯಕರ್ತ ವಾಸಪ್ಪಗೌಡ, ಸಹಾಯಕ ಕೃಷ್ಣಪ್ಪ ಸೇರಿದಂತೆ ಹಲವು ಷೇರುದಾರರು ಸಭೆಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!