ಸನಾತನ ಧರ್ಮ ಸಂಸ್ಕೃತಿ ಸಾರುವ ವಿಶಿಷ್ಟ ದೇಶ ಭಾರತ ; ನಿಟ್ಟೂರು ಶ್ರೀಗಳು

0 169

ರಿಪ್ಪನ್‌ಪೇಟೆ: ಸನಾನತ ಧರ್ಮ ಸಂಸ್ಕೃತಿ ಸಾರುವ ವಿಶಿಷ್ಟ ದೇಶ ಭಾರತವಾಗಿದೆ.ವಿಶ್ವಕ್ಕೆ ಶಾಂತಿ ನೆಮ್ಮದಿಯನ್ನು ಸಾರುವ ಧರ್ಮ ಹಿಂದು ಧರ್ಮದಾಗಿದೆ ಎಂದು ನಿಟ್ಟೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾಸ್ವಾಮೀಜಿ ಹೇಳಿದರು.

ರಿಪ್ಪನ್‌ಪೇಟೆಯಲ್ಲಿ ಇಂದು ಆಯೋಧ್ಯೆ ಶ್ರೀರಾಮ ಮಂದಿರ ಮಂತ್ರಾಕ್ಷತೆ ಅಭಿಯಾನ ಮನೆಮನೆ ಸಂಪರ್ಕ ಅಭಿಯಾನ ಸಮಿತಿಯವರು ಆಯೋಜಿಸಲಾದ ಬೃಹತ್ ಆಭಿಯಾನ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಭಾರತ ಪುಣ್ಯ ಪುರುಷರ ಸಂತರ ಶರಣರ ಪುಣ್ಯ ಭೂಮಿ ಮನುಕುಲದ ಉದ್ದಾರಕ್ಕಾಗಿ ಮಾನವೀಯ ಗುಣ ಕೊಟ್ಟ ಮಾರ್ಯಾಧಪುರುಷೋತ್ತಮ ಜನ್ಮ ಭೂಮಿಯ ಶಾಂತಿ ನೆಮ್ಮದಿಯ ಕರುಣಿಸಿದ ಈ ದೇಶ ಭಾರತದಲ್ಲಿ ನಮ್ಮಗಳ ಜೀವಿತಾವಧಿಯಲ್ಲಿ ಇಂತಹ ಒಂದು ಹಿಂದು ದೇವಸ್ಥಾನವನ್ನು ಹೋರಾಟದ ಮೂಲಕ ನಿರ್ಮಿಸುತ್ತಿರುವುದು ಇತಿಹಾಸ ವಾಗಿದೆ ಎಂದರು.ಇದನ್ನು ಜನವರಿ 1 ರಿಂದ 15 ರವರಗೆ ಮನೆಮನೆಗಳಿಗೆ ಪ್ರಚಾರ ಪಡಿಸಿ ರಾಮನ ಅದರ್ಶತತ್ವಗಳನ್ನು ಇಂದಿನ ಯುವಜನಾಂಗದಲ್ಲಿ ಬೆಳಸುವಂತಾಗಬೇಕು ಎಂದರು.

ಸಂಘ ಪ್ರಾಂತ್ಯ ವ್ಯವಸ್ಥಾಪಕ ಯಾದವಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ತಾಲ್ಲೂಕ್ ಆರ್.ಎಸ್.ಎಸ್. ಕಾರ್ಯನಿರ್ವಾಹಕ ಶ್ಯಾಮಸುಂದರ್ ಕಗ್ಗಲಿ, ಮಾಜಿ ಸಚಿವ ಹರತಾಳು ಹಾಲಪ್ಪ, ತಾಲ್ಲೂಕ್ ಬಿಜೆಪಿ ಆಧ್ಯಕ್ಷ ಬೆಳಗೋಡು ಗಣಪತಿ, ಹನಿಯ ರವಿ ಇನ್ನಿತರರು ಹಾಜರಿದ್ದರು.

ಪ್ರಾರಂಭದಲ್ಲಿ ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ಎನ್.ಸತೀಶ್ ಸ್ವಾಗತಿಸಿದರು. ಲೀಲಾ ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿದರು.

ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ: ರಿಪ್ಪನ್‌ಪೇಟೆಯಲ್ಲಿ ಇಂದು ಆಯೋಧ್ಯೆ ಶ್ರೀರಾಮ ಮಂದಿರ ಮಂತ್ರಾಕ್ಷತೆ ಅಭಿಯಾನ ಮನೆಮನೆ ಸಂಪರ್ಕ ಅಭಿಯಾನ ಸಮಿತಿಯವರು ಆಯೋಜಿಸಲಾದ ಬೃಹತ್ ಅಭಿಯಾನ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮಕ್ಕೆ ಆಗಮಿಸಿದ ನಿಟ್ಟೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾಸ್ವಾಮೀಜಿಯವರನ್ನು ಮುತ್ತೈದೆಯರು ಪೂರ್ಣಕುಂಭ ಸ್ವಾಗತದೊಂದಿಗೆ ವಿನಾಯಕ ವೃತ್ತದಿಂದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನಕ್ಕೆ ಮೆರವಣಿಗೆ ಮೂಲಕ ಸ್ವಾಗತಿಸುವುದರೊಂದಿಗೆ ಭರಮಾಡಿಕೊಂಡರು.

Leave A Reply

Your email address will not be published.

error: Content is protected !!