ಸನ್ಮಾನಿಸುವುದರಲ್ಲಿ ಸಂತೋಷವಿದೆ ; ಸಿಪಿಐ ಗುರಣ್ಣ ಎಸ್ ಹೆಬ್ಬಾಳ್

0 421

ಹೊಸನಗರ: ಸರ್ಕಾರಿ ಕೆಲಸವೆಂದರೆ ದೇವರು ನಮಗೆ ನೀಡಿರುವ ವರ. ಅದೇ ಸರ್ಕಾರಿ ಕೆಲಸದಲ್ಲಿ ಬಡ್ತಿ ಹೊಂದಿ ಮೇಲ್ದರ್ಜೆಗೆ ಹೋಗುವುದೆಂದರೆ ಇನ್ನೂ ಸಂತೋಷ. ಅವರನ್ನು ಅಭಿನಂದಿಸಿ ಕಳುಹಿಸಿದರೆ ಇನ್ನೂ ಆನಂದವೆಂದು ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರು ಹೇಳಿದರು.


ಇಲ್ಲಿನ ಸರ್ಕಲ್ ಇನ್ಸ್‌ಪೆಕ್ಟರ್ ಕಛೇರಿಯ ಆವರಣದಲ್ಲಿ ಹೊಸನಗರ ನ್ಯಾಯಾಲಯದಲ್ಲಿ ಸುಮಾರು 09 ವರ್ಷಗಳ ಕಾಲ ಎಪಿಪಿ ಆಗಿ ಸೇವೆ ಸಲ್ಲಿಸಿ ಈಗ ಎಡಿಪಿ ಆಗಿ ಪದೋನ್ನತಿ ಹೊಂದಿ ಬೆಂಗಳೂರಿಗೆ ವರ್ಗಾವಣೆ ಆಗಿರುವ ಗೋಪಾಲ್ ನಾಯ್ಕ್ ರವರನ್ನು ಹಾಗೂ ನೂತನವಾಗಿ ನ್ಯಾಯಾಲಯಕ್ಕೆ ಎಪಿಪಿಯಾಗಿ ಅಗಮಿಸಿದ ರವಿಕುಮಾರ್‌ರವರನ್ನು ಅಭಿನಂದಿಸಿ ಮಾತನಾಡಿದರು.


ಯಾವುದೋ ಜನ್ಮದ ಪುಣ್ಯದ ಫಲ ಹಾಗೂ ಗುರು ಹಿರಿಯರ ಆಶೀರ್ವಾದದಿಂದ ನಮಗೆ ಜನರ ಸೇವೆ ಮಾಡುವ ಉದ್ದೇಶದಿಂದ ಸರ್ಕಾರಿ ಕೆಲಸ ಸಿಕ್ಕಿದೆ. ಸಿಕ್ಕಿರುವ ಕೆಲಸದಿಂದ ಜನರ ಸೇವೆ ಮಾಡುವ ಭಾಗ್ಯ ನಮಗೆ ಸಿಕ್ಕಿದ್ದು ಅದನ್ನು ದುರುಪಯೋಗ ಪಡಿಸಿಕೊಳ್ಳದೇ ಸದ್ಗುಣಗಳಿಂದ ಸೇವೆ ಸಲ್ಲಿಸಿದರೆ ನಮಗೆ ಪುಣ್ಯ ಸಿಗುವುದು. ತಡವಾದರೂ ನಮ್ಮ ಮಕ್ಕಳಿಗಾದರೂ ಸಿಗುತ್ತದೆ ಎಂಬ ಆಶಾ ಭಾವನೆಯೊಂದಿಗೆ ನಾವು ಮಾಡುವ ಕೆಲಸದಿಂದ ತೃಪ್ತಿ ಪಟ್ಟಿಕೊಳ್ಳಬೇಕು. ಅದರಲ್ಲಿಯೂ ಇರುವ ಕೆಲಸದಿಂದ ಬಡ್ತಿ ಹೊಂದಿ ಮೇಲ್ದರ್ಜೆಗೆ ಹೋದರೆ ಇನ್ನೂ ಜವಾಬ್ದಾರಿಯ ಜೊತೆಗೆ ಆತ್ಮತೃಪ್ತಿಯು ಸಿಗುತ್ತದೆ ಎಂದರು.


ಈ ಅಭಿನಂದನೆ ಸಮಾರಂಭದಲ್ಲಿ ಪೊಲೀಸ್ ಇಲಾಖೆಯ ಎ.ಎಸ್.ಐ ಶಿವಪುತ್ರ, ಸಿಬ್ಬಂದಿಗಳಾದ ಗಿರೀಶ್, ಗಂಗಪ್ಪ, ಸಂತೋಷ್, ಆಶಾ, ಯಶೋಧಮ್ಮ, ಶರತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!