ಹರಿವು ನಿಲ್ಲಿಸಿದ ಮಲೆನಾಡಿನ ಜೀವ ನದಿ ಕುಮುದ್ವತಿ, ಹನಿ ನೀರಿಗೂ ತತ್ವಾರ ! ಅರಣ್ಯ ನಾಶವೇ ಇದಕ್ಕೆಲ್ಲ ಕಾರಣವಾಯ್ತ?

0 2,455

ರಿಪ್ಪನ್‌ಪೇಟೆ: ಕಳೆದ ಆಗಸ್ಟ್ – ಸೆಪ್ಟೆಂಬರ್ ತಿಂಗಳಿಂದ ನಡುಮಲೆನಾಡಿನಲ್ಲಿ ಮಳೆಯಾಗದೇ ಇರುವ ನೀರು ಸಂಪೂರ್ಣವಾಗಿ ಬತ್ತಿ ಅಂತರ್ಜಲ ಕುಂಠಿತಗೊಂಡು ಹಳ್ಳ-ಕೊಳ್ಳಗಳಲ್ಲಿ ನೀರು ಹರಿಯದೇ ಒಣಗಿ ಹೋಗಿದ್ದು ಕುಮುದ್ವತಿ ನದಿಯಲ್ಲಿ ನೀರಿಲ್ಲದೆ ಪ್ರಾಣಿ-ಪಕ್ಷಿಗಳು ಹಾಹಾಕಾರ ಪಡುವಂತ ಸ್ಥಿತಿ ನಿರ್ಮಾಣವಾಗಿದೆ.

ಮಲೆನಾಡಿನ ಜೀವ ಜಲವಾಗಿರುವ ಕುಮುದ್ವತಿ, ಶರ್ಮಿಣ್ಯಾವತಿ ನದಿಗಳು ನೀರಿಲ್ಲದೆ ಬರಿದಾಗಿದ್ದು ಕಾಡು ಪ್ರಾಣಿಗಳು, ಜಾನುವಾರುಗಳು ನೀರಿಗಾಗಿ ಪರಿತಪಿಸುವ ಸ್ಥಿತಿ ಎದುರಾಗಿದೆ.

ಕೊಳವೆ ಬಾವಿಗಳಲ್ಲಿ ಸಹ ದಿನದಿಂದ ದಿನಕ್ಕೆ ನೀರಿನ ಮಟ್ಟ ಸಹ ಕುಸಿಯುತ್ತಿದ್ದು ರೈತರು ಮುಗಿಲ ಕಡೆ ಮುಖ ಮಾಡುವಂತಾಗಿದ್ದು ಶುಂಠಿ ಮತ್ತು ಅಡಿಕೆ ಬೆಳೆಯನ್ನು ಹಾಕಲು ಇರುವ ಅರಣ್ಯ ಪ್ರದೇಶವನ್ನು ಕಡಿದು ಬರಿದು ಮಾಡಿದರ ಪರಿಣಾಮ ಘೋರ ಪರಿಣಾಮ ಎದುರಿಸುವ ಕಾಲ ಬಂದಿದೆ. ಆಸೆಗೂ ಒಂದು ಇತಿ ಮೀತಿ ಇರಬೇಕು ಆದರೆ ಆಸೆ ದುರಾಸೆಯಾದರೆ ಹೀಗೆ ಆಗುವುದೆಂಬ ಈ ಹಿಂದಿನವರ ಗಾದೆ ಮಾತು ಈಗ ಸತ್ಯವಾಗುತ್ತಿದೆ.

ಕಾಡು ಇದ್ದರೆ ನಾಡು ಎಂಬಂತೆ ಜೂನ್-ಜುಲೈ ತಿಂಗಳು ಬಂತು ಅಂದರೆ ಸಾಕು ಅರಣ್ಯ ಇಲಾಖೆಯವರು ವನಮಹೋತ್ಸವವನ್ನು ಮಾಡುವ ಮೂಲಕ ಶಾಲಾ-ಕಾಲೇಜು ಆಸ್ಪತ್ರೆ ಹೀಗೆ ಹಲವಾರು ಕಡೆಯಲ್ಲಿ ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವುದು ದೊಡ್ಡ ದೊಡ್ಡ ಭಾಷಣ ಮಾಡಿ ಹೋಗುವುದು ನೋಡಿದ ಸಾಕಷ್ಟು ಸಾಕ್ಷ್ಯ ಚಿತ್ರಗಳು ನಮ್ಮ ಕಣ್ಣು ಪಟಲದಲ್ಲಿ ಗೋಚರಿಸುತ್ತಿದ್ದು ಅರಣ್ಯ ಇಲಾಖೆಯವರು ತಮ್ಮ ಅರಣ್ಯ ಜಮೀನಿನಲ್ಲಿ ಕಳೆದ ಹತ್ತು ವರ್ಷದಿಂದ ತಮ್ಮ ಇಲಾಖೆಯ ಜಮೀನಿನಲ್ಲಿ ಅರಣ್ಯ ವಿಸ್ತರಣೆ ಮಾಡಿ ಬೆಳೆಸಲಾದ ಗಿಡಗಳು ಏನಾದವೂ ಎಂಬುದರ ಬಗ್ಗೆ ಮಾತ್ರ ಯಾವುದೇ ಮಾಹಿತಿ ಇಲ್ಲ.

ಹಾಗಾದರೆ ಪ್ರತಿ ವರ್ಷ ವನಮಹೋತ್ಸವ ಸಂದರ್ಭದಲ್ಲಿ ಬೆಳೆಸಲಾದ ಮರಗಳು ಏನಾದವೂ ಹೆಸರಿಗೆ ವನಮಹೋತ್ಸವ ಇಲಾಖೆಯವರು ನಿರ್ವಹಣೆಯಿಲ್ಲದೇ ಈ 10-20 ವರ್ಷದಿಂದ ಬೆಳೆಯಲಾದ ಮರಗಳು ಏನಾದವು? ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ.

ಅರಣ್ಯ ಇಲಾಖೆಯವರಿಗೆ 500 ರೂ 1000 ರೂ. ಕೊಟ್ಟರೆ ಸಾಕು ನೀವು ಮರವನ್ನಾದರೂ ಕಡಿದುಕೊಳ್ಳಿ ಇಲ್ಲವೇ ಅರಣ್ಯ ಜಾಗವನ್ನಾದರೂ ಒತ್ತುವರಿ ಮಾಡಿಕೊಳ್ಳಿ ನಮಗೂ ಏನೂ ಸಂಬಂಧವೇ ಇಲ್ಲವೆಂದು ಮೌನ ವಹಿಸುತ್ತಾರೆ.

ಇಲ್ಲಿನ ಹೊಸನಗರ ವಲಯ ಮೂಗುಡ್ತಿ ವಲಯ ಅರಸಾಳು ವಲಯ ಆರಣ್ಯ ಇಲಾಖೆ ವ್ಯಾಪ್ತಿಯ ಕುಕ್ಕಳಲೇ ಗ್ರಾಮದ ಸರ್ವೇ ನಂಬರ್ ಕಂದಾಯ ಜಮೀನಿದಾದರೂ ಕೂಡಾ ಬೃಹತ್ ಗಾತ್ರದ ಮರಗಳಿರುವ ಕಾರಣ ಅರಣ್ಯ ಜಾಗವೆಂದು ತಿಳಿದು ಹಲವು ರೈತಾಪಿ ವರ್ಗ ಬಗರ್ ಹುಕ್ಕುಂ ಒತ್ತುವರಿ ಮಾಡಿಕೊಳ್ಳಲು ಹಿಂದೇಟು ಹಾಕುವ ಕಾಲವೊಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎರಡು ಇಲಾಖೆಯವರ ಬೇಜವಾಬ್ದಾರಿಯಿಂದಾಗಿ ನಮಗೆ ಸೇರಿರುವ ಜಾಗ ಅಲ್ಲ ಕಂದಾಯ ಇಲಾಖೆಯೆಂದು ಹೇಳಿಕೊಂಡು ಕೈಚೆಲ್ಲಿ ಕುಳಿತರೆ ಅಲ್ಲಿನ ಲಕ್ಷಾಂತರ ರೂ.ಮೌಲ್ಯದ ಬೆಲೆ ಬಾಳುವ ಮರಗಳ ಮಾರಣಹೋಮ ಅವ್ಯಾಹತವಾಗಿ ನಡೆಯುತ್ತಿದ್ದರೂ ಕೂಡಾ ಕಂದಾಯ, ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳುವುದರಲ್ಲಿ ಸಂಪೂರ್ಣ ವಿಫಲರಾಗುವ ಮೂಲಕ ಹುಚ್ಚು ಮುಂ…. ಮದುವೆಯಲ್ಲಿ ಉಂಡವನ್ನೇ ಜಾಣ ಎಂಬಂತೆ ಹಣ ತೋಳ್ಬಲ ಇದ್ದವನು ಏನೂ ಬೇಕಾದರು ಮಾಡಬಹುದು ಎನ್ನುವಂತಾಗಿದೆ.

ಅದೇ ಯಾರಾದರೂ ಪಾಪಿ ಪರದೇಶಿ ರೈತರು ಉರುವಲು ಮತ್ತು ಮದುವೆ ಶುಭ ಸಮಾರಂಭಗಳಿಗೆ ಕಟ್ಟಿಗೆ, ಕಂಬಕ್ಕಾಗಿ ಕಡಿದು ತಂದರೆ ಅಂತಹ ರೈತನಿಗೆ ಇಲ್ಲಸಲ್ಲದ ಕೇಸ್ ದಾಖಲಿಸುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಮ್ಮ ಅರಣ್ಯ ಇಲಾಖೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಇಂತಹ ಪ್ರಕರಣಗಳು ಗಮನಕ್ಕೂ ಬರುತ್ತಿಲ್ಲವಾ ಎಂಬ ಸಂಶಯ ರೈತ ಮುಖಂಡ ಮುಡುಬ ಧರ್ಮಪ್ಪ, ಸೋಮಶೇಖರ, ನಾಗರಾಜ, ವೆಂಕಟೇಶ್ ವ್ಯಕ್ತಪಡಿಸುತ್ತಾ, ಇದಕೊಂದು ಸ್ಟಷ್ಟ ಉತ್ತರಕ್ಕಾಗಿ ಇಲಾಖೆಯ ಮೇಲಾಧಿಕಾರಿಗಳಿಗೆ ಪತ್ರದ ಮೂಲಕ ಗಮನಸೆಳೆಯುವ ಪ್ರಯತ್ನ ನಡೆಸುತ್ತಾ ಇಲಾಖೆಯಲ್ಲಿನ ಭ್ರಷ್ಟಾ ಅಧಿಕಾರಿಗಳನ್ನು ಕೂಡಲೇ ಅಮಾನತುಪಡಿಸಿ ಅಳಿದು ಹೋಗುತ್ತಿರುವ ಅರಣ್ಯ ಸಂರಕ್ಷಣೆ ಮಾಡುವತ್ತಾ ಗಮನಹರಿಸಲು ಉನ್ನತಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Leave A Reply

Your email address will not be published.

error: Content is protected !!