ಹೊಸನಗರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0 274

ಹೊಸನಗರ : ಮಹಿಳೆ ದೇಶದ ಭವಿಷ್ಯವನ್ನು ಕಟ್ಟುವ ಮತ್ತು ರೂಪಿಸುವ ಶಕ್ತಿ ಪುರುಷರಿಗಿಂತ ಪ್ರಬಲವಾದ ಮತ್ತು ಕಠಿಣವಾದ ಹೃದಯ ಹೊಂದಿದ್ದು ಪುರುಷರಿಗೆ ಸ್ಫೂರ್ತಿಯ ನೆಲೆಯಾಗಿದ್ದಾರೆ ಎಂದು ಹೊಸನಗರ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರುಗಳಾದ ಸಂತೋಷ ಹಾಗೂ ರವಿಕುಮಾರ್ ಹೇಳಿದರು.

ತಾಲೂಕು ಕಾನೂನು ಸೇವಾ ಪ್ರಾಧಿಕಾರ ಕೃಷಿ ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿ ರಕ್ಷಣಾ ಇಲಾಖೆ ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಂಚಾಯತ್ ರಾಜ್ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ಸಂಘಗಳವರು ಎಲ್ಲ ಇಲಾಖೆಗಳ ನೆರವನಿಂದ ಏರ್ಪಡಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪೋಷಣ್ ಪಕ್ವಾಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಧೈರ್ಯ ಹಾಗೂ ಆತ್ಮವಿಶ್ವಾಸವೇ ನಿಜವಾದ ಸಾಮರ್ಥ್ಯ ಅದಿಲ್ಲದಿದ್ದರೆ ಬದುಕು ನಶ್ವರ. ಪ್ರಾಚೀನ ವೇದಗಳಲ್ಲೂ ಮಹಿಳೆಯರು ಪುರುಷರಷ್ಟೇ ತಮ್ಮ ಛಾಪನ್ನು ಮೂಡಿಸಿದ ಬಗ್ಗೆ ಐತಿಹ್ಯಗಳಿವೆ. ಪುರುಷರು ಪ್ರಯತ್ನಿಸಿದರೆ ಜಗತ್ತಿನಾಳಬಹುದು ಆದರೆ ಮಹಿಳೆ ಪ್ರಯತ್ನಿಸಿದರೆ ಜಗತ್ತಿನ ಆಳುವ ಪುರುಷನನ್ನು ಹಾಗೂ ಜಗತ್ತನ್ನು ಆಳಬಲ್ಲಳು.

ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳು ಮುಂಚೂಣಿಯಲ್ಲಿದ್ದರು ಅವರಿಗೆ ರಕ್ಷಣೆಯಲ್ಲಿ ಹಾಗೂ ಶಿಕ್ಷಣದ ಅಗತ್ಯವಿದೆ ಲಿಂಗ ಸಮಾನತೆ ಹೋಗಲಾಡಿಸಲು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು ಎಲ್ಲರೂ ಕೈ ಜೋಡಿಸಬೇಕೆಂದರು.

ಹಿರಿಯ ನ್ಯಾಯಾಧೀಶ ಸಂತೋಷ್ ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಪವನ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಅಂಗನವಾಡಿಗಳಲ್ಲಿ ಪೂರಕ ಶಿಕ್ಷಣಕ್ಕೆ ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿ ಆಚರಣೆಗೆ ಒತ್ತು ನೀಡಲಾಗುವುದೆಂದರು.

ವೀಣಾ ಪ್ರಾರ್ಥಿಸಿದರು. ಹಿರಿಯ ಮೇಲ್ವಿಚಾರಕಿ ವೀರಮ್ಮ ಸ್ವಾಗತಿಸಿದರು. ಸುಜಾತ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ವನಮಾಲ ವಂದಿಸಿದರು.

Leave A Reply

Your email address will not be published.

error: Content is protected !!