ಗೃಹಸಚಿವರ ವಿರುದ್ಧ ಹರಿಹಾಯ್ದ ತೀರ್ಥಹಳ್ಳಿ ಕಾಂಗ್ರೆಸ್ ಜೋಡೆತ್ತುಗಳು ! ಏನೆಲ್ಲ ಆರೋಪ ಮಾಡಿದ್ರು ಗೊತ್ತಾ ?

ತೀರ್ಥಹಳ್ಳಿ : ಆರಗ ಜ್ಞಾನೇಂದ್ರ ಕಲ್ಲು ಹೊಡೆಸಿದ ರೀತಿಯಲ್ಲಿ ಇದು ಕೆಟ್ಟದ್ದಲ್ಲ. ಅತ್ಯಂತ ಶಾಂತಿಯುತವಾಗಿ ಪ್ರತಿಭಟನೆಯನ್ನು ಮಾಡುತ್ತೇವೆ‌ ಇಲ್ಲಿಯವರೆಗೆ ನಾವು ಕಲ್ಲು ಹೊಡೆದು ಯಾವುದೇ ರೀತಿಯ ಪ್ರತಿಭಟನೆ ಮಾಡಿಲ್ಲ. ಈ ಹಿಂದೆ ತೀರ್ಥಹಳ್ಳಿಯಲ್ಲಿ ಏನೆಲ್ಲಾ ಕೋಮು ಗಲಭೆ ಆಗಿದೆ ಅದರಲ್ಲದರ ನೇತೃತ್ವವನ್ನು ಜ್ಞಾನೇಂದ್ರ ಅವರು ವಹಿಸಿದ್ದಾರೆ. ಎಲ್ಲಾ ಸಂದರ್ಭದಲ್ಲಿ ಅವರು ಕಲ್ಲು ಹೊಡೆಸಿದ್ದಾರೆ. ಬಲಪ್ರಯೋಗವನ್ನು ಮಾಡಿ 700 ರಿಂದ 800 ಜನರ ಮೇಲೆ ಕೇಸ್ ಮಾಡಿ ಕೋರ್ಟ್‌ಗೆ ಅಲೆದಾಡುವ ಸ್ಥಿತಿ ಜ್ಞಾನೇಂದ್ರರವರು ಮಾಡಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಕಿಮ್ಮನೆ ರತ್ನಾಕರ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಆರಗ ಜ್ಞಾನೇಂದ್ರ ಮತ್ತು ಲೋಕಾಯುಕ್ತ ಪೊಲೀಸರಿಗೆ ಪದ್ಮಶ್ರೀ ಪ್ರಶಸ್ತಿ ಕೊಡುವುದು ಒಳ್ಳೆಯದು. ಮಾಡಾಳು ವಿರೂಪಾಕ್ಷಪ್ಪನ ಕಂಪ್ಲೇಂಟ್ ಅಲ್ಲಿ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಿದ್ದಾರೆ ಆದರೆ ಅವರ ಮೇಲೆ ಆಪಾದನೆಯೇ ಇಲ್ಲ. ಮಾಡಾಳ್ ವಿರೂಪಾಕ್ಷಪ್ಪ ನವರ ಮೇಲೆ ನೇರವಾಗಿ ಆಪಾದನೆ ಮಾಡಿಲ್ಲ. ಹಾಗೇನಾದರೂ ಆಗಿದ್ದರೆ ನ್ಯಾಯಾಧೀಶರ ಮೇಲೆಯೇ ಅನುಮಾನ ಬರುವಂತೆ ಆಗುತ್ತಿತ್ತು ಎಂದರು.

ನ್ಯಾಯಾಧೀಶರು ತಮ್ಮ ಟೇಬಲ್ ಮೇಲೆ ಇರುವ ದಾಖಲೆಗಳ ಆಧಾರದ ಮೇಲೆ ಅವರು ಆದೇಶ ಮಾಡಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ನೇರವಾಗಿ ಮಾಡಾಳ್ ವಿರೂಪಾಕ್ಷಪ್ಪನವರ ಮೇಲೆ ಆಪಾದನೆ ಮಾಡಿಲ್ಲ. ಆರೋಪಿಯನ್ನಾಗಿ ಮಾಡಿ ಅವರನ್ನು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ತಪ್ಪಿಸುವ ಪ್ರಯತ್ನ ನಡೆದಿದೆ. ಈ ಕಂಪ್ಲೇಂಟ್ ಅನ್ನು ಕೊಟ್ಟಿರುವವರು ಯಾರು? ಲೋಕಾಯುಕ್ತ ಪೊಲೀಸರು ಹಾಗಾಗಿ ಕಂಪ್ಲೇಂಟ್ ಬರೆಯುವರಿಗೆ ಮಾಡಾಳ್ ವಿರೂಪಾಕ್ಷಪ್ಪನವರನ್ನು ರಿಲೀಸ್ ಮಾಡುತ್ತಾರೆ ಎಂದು 100 ಪರ್ಸೆಂಟ್ ಗೊತ್ತಿತ್ತು. ಇದರಲ್ಲಿ ಪೊಲೀಸರ ಕೈವಾಡ ಕೂಡ ಇದೆ ಎಂದರು.

ಮಂಗಳವಾರ ಮಾಡಾಳ್ ವಿರೂಪಾಕ್ಷಪ್ಪನವರು ಆ ಹಣ ನಂದೇ ಎಂದು ನೇರವಾಗಿ ಹೇಳಿದ್ದಾರೆ.‌ ಆದರೆ ಅವರ ಮಗ ಮತ್ತು ಪೊಲೀಸರು ಈ ವಿಷಯವನ್ನು ಯಾಕೆ ಹೇಳಿಲ್ಲ. ಈ ಹಣ ಮಾಡಲು ವಿರೂಪಾಕ್ಷಪ್ಪನವರದ್ದೇ ಎಂದು ಕಂಪ್ಲೇಂಟ್ ನಲ್ಲಿ ಲೋಕಾಯುಕ್ತ ಪೊಲೀಸರು ಬರೆದಿದ್ದರೆ ಇವತ್ತು ಅವರು ಹೊರಗಡೆ ಬರುತ್ತಾನೆ ಇರಲಿಲ್ಲ. ಇದು ಲೋಕಾಯುಕ್ತದ ಫೇಲ್ಯೂರ್ ಅಲ್ಲ ಉದ್ದೇಶ ಪೂರ್ವಕವಾಗಿ ಮಾಡಿರುವುದು. ಈ ಪ್ರಕರಣದಲ್ಲಿ ಪೊಲೀಸರು ನ್ಯಾಯಯುತವಾಗಿ ನಡೆದುಕೊಂಡಿಲ್ಲ ಎಂದರು.

ಲೋಕಾಯುಕ್ತ ಗೃಹ ಇಲಾಖೆಯ ಅಡಿಯಲ್ಲಿ ಬರುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಈ ರಾಜ್ಯದಲ್ಲಿರುವಂತಹ ಪ್ರತಿಯೊಬ್ಬ ಪೊಲೀಸ್ ಕೂಡ ಗೃಹ ಇಲಾಖೆಯ ಅಡಿಯಲ್ಲಿ ಬರುತ್ತಾರೆ. ಸರ್ಕಾರ ಜ್ಞಾನೇಂದ್ರರವರ ರಕ್ಷಣೆಗೆ ಇದೆ ಜ್ಞಾನೇಂದ್ರ ವಿರೂಪಾಕ್ಷಪ್ಪನವರ ರಕ್ಷಣೆಗೆ ಇದ್ದಾರೆ. ಸರ್ಕಾರ ಆರಗ ರಕ್ಷಣೆಗೆ ಇಲ್ಲದಿದ್ದರೆ ಸ್ಯಾಂಟ್ರೋ ರವಿ, ಆರ್ ಡಿ ಪಾಟೀಲ್ ಪ್ರಕರಣದಲ್ಲಿ ಜ್ಞಾನೇಂದ್ರ ರಾಜೀನಾಮೆ ಕೊಟ್ಟು ಎಷ್ಟೋ ದಿನಗಳು ಆಗಿರುತ್ತಿತ್ತು ಎಂದರು.

ಮಾಡಾಳ್ ವಿರೂಪಾಕ್ಷಪ್ಪನವರ ಪ್ರಕರಣ ನನಗೆ ತಿಳಿದಿದ್ದೆ ಮಾಧ್ಯಮದವರಿಂದ ಎಂಬ ಆರಗ ಜ್ಞಾನೇಂದ್ರರವರ ಹೇಳಿಕೆಯ ಬಗ್ಗೆ ಮಾಧ್ಯಮದವರು ಕೇಳಿದಾಗ ಆರಗ ಜ್ಞಾನೇಂದ್ರ ಒಬ್ಬ ಅಸಮರ್ಥರು ಎಂಬುದು ಈಗಾಗಲೇ ತಿಳಿದಿದೆ. ಮಾಡಾಳ್ ವಿರೂಪಾಕ್ಷಪ್ಪ ತಮಗೆ ಬೇಲ್ ಸಿಕ್ಕಿ ಅರ್ಧಗಂಟೆಯಲ್ಲಿ ಅವರು ಹೊರಗಡೆ ಬರುತ್ತಾರೆ ಎಂದರೆ ಪೊಲೀಸರಿಗೆ ಇದು ಗೊತ್ತಿರಲಿಲ್ಲವೇ, ಪೊಲೀಸ್ ಇಲಾಖೆಯನ್ನೇ ಇಲ್ಲಿ ಸಸ್ಪೆಕ್ಟ್ ಮಾಡಬೇಕು. ಇವರು 15 ತಂಡಗಳನ್ನು ಮಾಡಿ ಆರು ದಿನಗಳಿಂದ ಹುಡುಕಿದ್ದು ಎಲ್ಲಿ ? ಲೋಕಾಯುಕ್ತ ಜಡ್ಜ್ ರವರು ಅವರ ಕೆಲಸ ಏನು ಇದೆ ಅದನ್ನು ಮಾಡಿದ್ದಾರೆ. ಆದರೆ ಪೊಲೀಸರು ತಮ್ಮ ಆಟವನ್ನು ಆಡಿದ್ದಾರೆ ಎಂದರು.

ಆರಗ ಜ್ಞಾನೇಂದ್ರ ಅವರು ತಾವು ಮಾಡಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ. ಕಳೆದ ನಾಲ್ಕು ವರ್ಷಗಳಿಂದ ಏನು ಮಣ್ಣು ತಿನ್ನುತ್ತಾ ಇದ್ರ. ಕಾಂಗ್ರೆಸ್ ನಲ್ಲಿ ಭ್ರಷ್ಟಾಚಾರ ಇದ್ರೆ ತನಿಖೆ ಮಾಡಿ ಹೊರ ತರಲಿ. ನಂದಿತಾ ಪ್ರಕರಣದಲ್ಲಿ ನಮಗೆ ಅಧಿಕಾರ ಬಂದು ಮೂರು ತಿಂಗಳ ಒಳಗೆ ಅವರನ್ನು ಸೆರೆ ಬಡಿಯುತ್ತೇವೆ ಎಂದಿದ್ದರು. ಜ್ಞಾನೇಂದ್ರ ಮತ್ತು ಅವರ ಅಣ್ಣ ಅಮಿತ್ ಶಾ ಏನು ಮಾಡಿದರು? ನನ್ನ ಪ್ರಕಾರ ನಂದಿತಾ ಪ್ರಕರಣದಲ್ಲಿ ಜ್ಞಾನೇಂದ್ರರವರೇ ಆರೋಪಿ ಎಂದರು.

ನಂದಿತಾ ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಭಟನೆ ಮಾಡಿ ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿ ಬಂದ್ ಮಾಡಿಸಿದ್ದರು. ಅಷ್ಟೇ ಅಲ್ಲದೆ ಕಲ್ಲು ಹೊಡೆಸಿದ್ದರು. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ ಜನರಿಗೆ ತೊಂದರೆ ಕೊಟ್ಟಿದ್ದರು. ಹಾಗಿದ್ದರೆ ಅದೆಲ್ಲ ಒಳ್ಳೆಯದ, ನಮ್ಮ ಆಡಳಿತ ಇದ್ದಾಗ ಬಿಜೆಪಿಯವರು ಪ್ರತಿಭಟನೆ ಮಾಡಿದ್ದರಲ್ಲ ಯಾವ ಕಾರಣಕ್ಕೆ ಪ್ರತಿಭಟನೆ ಮಾಡಿದ್ದರು ? ಎಂದು ಪ್ರಶ್ನೆಸಿದರು.

ಆರ್‌. ಎಂ ಮಂಜುನಾಥಗೌಡರು ಮಾತನಾಡಿ,‌ ಎಸಿಬಿಯನ್ನು ನಾವು ರದ್ದು ಮಾಡಿದ್ದು ಎಂದು ಬಿಜೆಪಿಯವರು ಹೇಳುತ್ತಾರೆ ಆದರೆ ಎಸಿಬಿಯನ್ನು ರದ್ದು ಮಾಡಿದ್ದು ಹೈಕೋರ್ಟ್, ಲೋಕಾಯುಕ್ತಕ್ಕೆ ನಾವು ಅಧಿಕಾರ ಕೊಟ್ಟೇವು ಎಂದು ಹೇಳುತ್ತಾರೆ ಲೋಕಾಯುಕ್ತದ ಅಧಿಕಾರವನ್ನು ಸಿದ್ದರಾಮಯ್ಯನವರು ಕಸಿದುಕೊಳ್ಳಲೇ ಇಲ್ಲ ಲೋಕಾಯುಕ್ತ ಹೇಗೆ ಇತ್ತೋ ಹಾಗೆ ಇತ್ತು. ಅದರ ಜೊತೆ ಎಸಿಬಿಯನ್ನು ರಚನೆ ಮಾಡಿದ್ದೆವು. ಲೋಕಾಯುಕ್ತದಲ್ಲಿ ಇರುವ ಪೊಲೀಸರೆಲ್ಲರೂ ಅಪಾಯಿಂಟ್ ಆಗುವುದು ಗೃಹ ಸಚಿವರ ಕೆಳಗೆ, ಎಲ್ಲೇ ರೈಡ್ ಆದರೂ ಪೊಲೀಸರನ್ನು ಕಳಿಸುವುದೇ ಗೃಹ ಸಚಿವರು ಎಂದರು.

ಮಾಡಾಳ್ ವಿರುಪಾಕ್ಷಪ್ಪನವರು ಅಷ್ಟು ದುಡ್ಡು ನಂದೇ ಎಂದು ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಅವರಿಗೆ ಸಿಕ್ಕ ಬೇಲ್ ಕ್ಯಾನ್ಸಲ್ ಆಗಬೇಕಿತ್ತು ಇದು ಕೇಂದ್ರ ಸರ್ಕಾರದ ಮೋದಿಯವರ ಕಾರ್ಯಕ್ರಮಕ್ಕೆ ವಿರುದ್ಧವಾಗಿದೆ. ಯಾಕೆಂದರೆ ಮೋದಿಯವರು ಕ್ಯಾಶ್ ಲೆಸ್ ಮಾಡಿದ್ದಾರೆ. ಎಲ್ಲಾ ವ್ಯವಹಾರವನ್ನು ಬ್ಯಾಂಕ್ ಮೂಲಕವೇ ಕ್ಯಾಶ್ ಲೆಸ್ ಆಗಿ ಮಾಡಬೇಕು. ಕೇವಲ 20 ಲಕ್ಷ ಹಣ ಡಿಕೆ ಶಿವಕುಮಾರ್ ರವರ ಬಳಿ ಸಿಕ್ಕಾಗ ಮೂರುವರೆ ತಿಂಗಳು ಜೈಲಿಗೆ ಹಾಕಿದ್ದರು ಮಾಡಾಳ್ ವಿರುಪಾಕ್ಷಪ್ಪನವರು ಎಂಟು ಕೋಟಿ ದುಡ್ಡು ನನ್ನದೇ ಎಂದು ಒಪ್ಪಿಕೊಂಡಿದ್ದಾರೆ.
ಇವರನ್ನು ಎಷ್ಟು ದಿವಸ ಜೈಲಿಗೆ ಕಳಿಸುತ್ತೀರಾ ? ಯಾವಾಗ ಕಳಿಸುತ್ತೀರಾ ? ಎಂದು ಪ್ರಶ್ನಿಸಿದರು.

ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನನ್ನು ರಕ್ಷಿಸುವುದನ್ನು ನೋಡಿದರೆ ಇಡೀ ಸರ್ಕಾರವೇ ಇದರಲ್ಲಿ ಶಾಮೀಲಾಗಿದೆ. ಎಂಟೂವರೆ ಕೋಟಿ ಹಣ ಇಡೀ ದೇಶದಲ್ಲಿ ಎಲ್ಲಿಯೂ ಸಿಕ್ಕಿಲ್ಲ. ಜಡ್ಜ್ ಆದೇಶ ಕೊಟ್ಟು ಅರ್ಧ ಗಂಟೆಯ ಒಳಗೆ ಇವರು ಹೊರಗಡೆ ಬರುತ್ತಾರೆ ಎಂದಾದರೆ ನಾವು ಅತ್ಯಂತ ಪ್ರಬಲರು ದೇಶ ರಕ್ಷಣೆ ಮಾಡುತ್ತೇವೆ ಎನ್ನುವವರು ನಿಮ್ಮ ಇಲಾಖೆ ಜೀವಂತ ಇದೆಯಾ ಎಂದು ಗೃಹಸಚಿವರಿಗೆ ಟಾಂಗ್ ನೀಡಿದರು.

ಲೋಕಾಯುಕ್ತವನ್ನು ವೀಕ್ ಮಾಡಿದ್ದು ಕಾಂಗ್ರೆಸ್ ಅಲ್ಲ ಸಿದ್ದರಾಮಯ್ಯನವರು ಅಲ್ಲ. ನಿನ್ನೆ ಮೊನ್ನೆಯಿಂದ ಲೋಕಾಯುಕ್ತವನ್ನು ನೀವು ವೀಕ್ ಮಾಡಿದ್ದೀರಾ. ಲೋಕಾಯುಕ್ತದ ನ್ಯಾಯಾಧೀಶರು ಸರಿ ಇದ್ದಾರೆ, ಕೆಳಹಂತದ ಸಿಬ್ಬಂದಿಗಳು ಸರಿ ಇಲ್ಲ ಅವರನ್ನು ಸನ್ಮಾನಿಸಬೇಕು. ತೀರ್ಥಹಳ್ಳಿಯ ಗೃಹ ಸಚಿವರು ತೀರ್ಥಹಳ್ಳಿಯಲ್ಲಿಯೇ ಇದಕ್ಕೆ ಉತ್ತರಿಸಬೇಕು ಎಂದರು.

ಗೃಹ ಸಚಿವರು ತೀರ್ಥಹಳ್ಳಿಯ ಗೃಹ ಸಚಿವರ ಅಥವಾ ಕರ್ನಾಟಕಕ್ಕೆ ಗೃಹ ಸಚಿವರ ಎಂಬ ಮಾಧ್ಯಮದವರು ಪ್ರಶ್ನೆಗೆ ಗೃಹ ಸಚಿವರು ಗುಡ್ಡೆಕೊಪ್ಪಕ್ಕೆ ಗೃಹ ಸಚಿವರಾಗಿದ್ದಾರೆ. ಕರ್ನಾಟಕಕ್ಕೆ ಅಲ್ಲ. ಚನ್ನಗಿರಿ ನಮ್ಮ ಜಿಲ್ಲೆಯಲ್ಲಿ ಇದೆ. ನಮ್ಮ ಜಿಲ್ಲೆಯಲ್ಲಿಯೇ ಹಿಡಿಯಲಿಕ್ಕೆ ಆಗದವರು ಬೀದರ್ ಬಿಜಾಪುರದಲ್ಲಿ ಹಿಡಿಯುತ್ತಾರಾ ಎಂದರು.

ಬಂದ್ ಕ್ಯಾನ್ಸಲ್ :

ಮಾ.9 ರಂದು ಎರಡು ಗಂಟೆಗಳ ಕಾಲ ರಾಜ್ಯಾದ್ಯಂತ ಬಂದ್ ಮಾಡಲು ಕಾಂಗ್ರೆಸ್ ಕರೆ ನೀಡಿತ್ತು. ಈ ಕಾರಣಕ್ಕೆ ತೀರ್ಥಹಳ್ಳಿಯಲ್ಲಿಯೂ ಕೂಡ ಬಂದ್ ಮಾಡುವ ಉದ್ದೇಶವಾಗಿತ್ತು ಆದರೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಮಯದಲ್ಲಿ ರಾಜ್ಯ ನಾಯಕರಿಂದ ಕರೆ ಬಂದ ಕಾರಣ ಪ್ರತಿಭಟನೆಯನ್ನು ವಿದ್ಯಾರ್ಥಿಗಳ ಪರೀಕ್ಷೆಯ ಹಿತದೃಷ್ಟಿಯಿಂದ ಕೈ ಬಿಡಲಾಗಿದೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,747FollowersFollow
0SubscribersSubscribe
- Advertisement -spot_img

Latest Articles

error: Content is protected !!