ಶವ ಸಂಸ್ಕಾರಕ್ಕಾಗಿ ನೀಡುತ್ತಿದ್ದ ₹ 5 ಸಾವಿರ ಸಹಾಯಧನ ಯೋಜನೆ ಮರು ಜಾರಿಗೆ ಒತ್ತಾಯ

0 113

ಶಿವಮೊಗ್ಗ: ಬಡ ಕುಟುಂಬದ ಸದಸ್ಯರು ಮರಣ ಹೊಂದಿದಾಗ ಶವ ಸಂಸ್ಕಾರಕ್ಕಾಗಿ ನೀಡುತ್ತಿದ್ದ 5ಸಾವಿರ ಸಹಾಯ ಧನ ಯೋಜನೆ ಸ್ಥಗಿತಗೊಂಡಿದ್ದು, ಸರ್ಕಾರ ಇದನ್ನು ಮರು ಜಾರಿಗೊಳಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟಿನ ಅಧ್ಯಕ್ಷ ಕಲ್ಲೂರು ಮೇಘರಾಜ್ ಹೇಳಿದರು.


ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2021-22ರಿಂದ ಈ ಯೋಜನೆ ಸ್ಥಗಿತಗೊಂಡಿದೆ. 2006ರಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು. ಆಗ ಸಾವಿರ ರೂಗಳನ್ನು ನೀಡಲಾಗುತ್ತಿತ್ತು. ನಂತರ 2015ರಲ್ಲಿ 5ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಇದರಿಂದ ಬಡ ಹಾಗೂ ದುಃಖತಪ್ತ ಕುಟುಂಬಗಳಿಗೆ ಒಂದು ರೀತಿಯ ಸಂಜೀವಿನಿಯಾಗುತ್ತಿತ್ತು. ಆದರೆ 2021ರಲ್ಲಿ ಬಸವರಾಜ ಬೊಮ್ಮಾಯಿಯವರ ಸರ್ಕಾರ 2021ರ ಆಸ್ಟ್ ಅಂತ್ಯಕ್ಕೆ ಅನ್ವಯವಾಗುವಂತೆ ಸ್ಥಗಿತಗೊಳಿಸಿತ್ತು ಎಂದರು.


ಇದರಿಂದ ಬಡವರಿಗೆ ಕಷ್ಟವಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಬಡಜನರು ಅಂತ್ಯ ಸಂಸ್ಕಾರ, ತಿಥಿ ಕಾರ್ಯಗಳಿಗೆ ಸಾಲ ಪಡೆಯುವಂತಾಗಿದ್ದು, ಈಗಲೂ ಈ ಸ್ಥಿತಿ ಇದೆ ಎಂದು ಆದ್ದರಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಪುನರಾರಂಭಿಸುವುದರ ಜೊತೆಗೆ ಈ ಹಿಂದೆ ನೀಡುತ್ತಿದ್ದ 5ಸಾವಿರದ ಜೊತೆಗೆ ಮತ್ತೆ 5 ಸಾವಿರ ಸೇರಿಸಿ 10 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ. ಟಿ.ಬಿ. ಸೋಮಶೇಖರಯ್ಯ, ನರಸಿಂಹಮೂರ್ತಿ, ಜಿ.ಬಿ. ಮಂಜುಳಾ, ಚಿಕ್ಕಮಟ್ಟಿ ಗೋವಿಂದಸ್ವಾಮಿ, ಶಂಕ್ರಾ ನಾಯ್ಕ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!