ತೀರ್ಥಹಳ್ಳಿ: ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಸಾಕಷ್ಟು ದೊಡ್ಡ ಗಾತ್ರದ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯ ಪ್ರಸೂತಿ ತಜ್ಞ ವೈದ್ಯಾಧಿಕಾರಿ ಡಾ. ಅರವಿಂದ್ ಯಶಸ್ವಿಯಾಗಿದ್ದಾರೆ.
ತೀರ್ಥಹಳ್ಳಿ ಗ್ರಾಮೀಣ ಭಾಗದ ಗರ್ಭಿಣಿಯೊಬ್ಬರು ತಪಾಸಣೆಗೆ ಬಂದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದನ್ನು ತಿಳಿದು ಕೇವಲ ಬಹಳ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ನಿರ್ವಹಿಸುವ ಇಂತಹ ಶಸ್ತ್ರಚಿಕಿತ್ಸೆಯನ್ನು ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲೇ ನಿರ್ವಹಿಸುವುದಾಗಿ ತಿಳಿಸಿ ಮಹಿಳೆಯ ಕುಟುಂಬದವರಿಗೆ ಧೈರ್ಯ ತುಂಬಿದ ಡಾ. ಅರವಿಂದ್ ಇದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸಹಜ ಹೆರಿಗೆಗಳನ್ನು ಅತೀ ಹೆಚ್ಚು ಸಂಖ್ಯೆಯಲ್ಲಿ ಮಾಡಿಸುವ ಮೂಲಕ ಡಾ.ಅರವಿಂದ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು ಕ್ಲಿಷ್ಟಕರವೆಂದು ಗುರುತಿಸಲ್ಪಡುವ ಶಸ್ತ್ರಚಿಕಿತ್ಸೆಯನ್ನು ಇಲ್ಲೇ ಮಾಡುವುದಾಗಿ ತಿಳಿಸಿ ಧೈರ್ಯ ತುಂಬಿ ಯಶಸ್ವಿಯಾಗಿ ನಿರ್ವಹಿಸಿದ ಡಾ.ಅರವಿಂದ್ ರವರ ತಂಡಕ್ಕೆ ಮಹಿಳೆಯ ಕುಟುಂಬದವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಇಂತಹ ವಿಶೇಷ ಸಾಧನೆ ಮಾಡಿದ ಡಾ.ಅರವಿಂದ್ ಡಾ.ಗಣೇಶ್ ಭಟ್, ಶುಶ್ರೂಷಣಾಧಿಕಾರಿ ಗೀತಾ ಮತ್ತಿತರರ ತಂಡಕ್ಕೆ ತೀರ್ಥಹಳ್ಳಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಆಧ್ಯಕ್ಷ ಸತೀಶ ಟಿ ವಿ ಕಾರ್ಯದರ್ಶಿ ಈಶ್ವರಪ್ಪ, ಖಜಾಂಚಿ ರಾಘವೇಂದ್ರ ಸೇರಿದಂತೆ ಸಂಘದ ಪದಾಧಿಕಾರಿಗಳು ಸದಸ್ಯರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ : ರಶ್ಮಿ ಶ್ರೀಕಾಂತ್ ನಾಯಕ್