ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ ; ಬೇಡಿಕೆ ಈಡೇರಿಸಲು ಆಗ್ರಹ

0 728

ಹೊಸನಗರ : ಕೇಂದ್ರ ಸರಕಾರ ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿ ತಾಲೂಕು ಗ್ರಾಮೀಣ ಅಂಚೆ ನೌಕರರು ಇಲ್ಲಿನ ಅಂಚೆ ಕಛೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ಅಂಚೆ ನೌಕರರಿಗೆ ಸೇವಾ ಭದ್ರತೆಯಿಲ್ಲ. ಸೂಕ್ತ ಸಂಬಳ, ಭತ್ತೆ, ಪಿಂಚಣಿ ಸೌಲಭ್ಯಗಳಿಲ್ಲ. ಹತ್ತಾರು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ದಿನಕ್ಕೆ 4 ಗಂಟೆ ಕೆಲಸ ಎಂದು ತಿಳಿಸಿ ದಿನವಿಡೀ ಕೇಲಸ ಮಾಡಬೇಕಾದ ಪರಿಸ್ಥಿತಿಯಿದೆ ಎಂದು ಆಕ್ರೋಶ ವ್ಕಕ್ತಪಡಿಸಿದರು.

2016ರಲ್ಲಿ ಕಮಲೇಶಚಂದ್ರ ಆಯೋಗದ ವರದಿಯ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು. ದಿನಕ್ಕೆ 8 ಗಂಟೆಗಳ ಕಾಲ ಕೆಲಸ ನೀಡುವುದು ಹಾಗೂ ಪಿಂಚಣಿ ಸೇರಿದಂಥೆ ಎಲ್ಲ ಭ್ತತ್ಯೆಗಳನ್ನು ಒದಗಿಸುವುದು. ಸೇವಾ ಹಿರಿತನದ ಆಧಾರದ ಮೇರೆಗೆ ವಿಶೇಷ ವೇತನ ಹೆಚ್ಚಳ ಮಾಡುವುದು, ಗುಂಪು ವಿಮಾ ವ್ಯಾಫ್ತಿಗೆ ಸೇರಿಸುವುದು, ಐದು ಲಕ್ಷ ರೂ. ಗ್ರಾಚುಟಿ ನೀಡುವುದು, ರಜಾ ಉಳಿಕೆ ಸೌಲಭ್ಯವನ್ನು 180 ದಿನಗಳಿಗೆ ಹೆಚ್ಚಿಸುವುದು, ನೌಕರರ ಕುಟುಂಬ ವರ್ಗದವರಿಗೆ ವೈದ್ಯಕೀಯ ಸೇವೆ ಸಿಗುವಂತೆ ವ್ಯವಸ್ಥೆ ಕಲ್ಪಿಸುವುದು ಮೊದಲಾದ ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.

ಪ್ರಮುಖರಾದ ಎಚ್.ವಿ.ಸಚಿನ್, ಲಕ್ಷ್ಮಿನಾರಾಯಣ, ಬಿ.ಕೆ.ವಿಶ್ವನಾಥ, ಕೇಶವ, ವಿನುತ, ರಮೇಶ, ಈಶ್ವರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!