ಕಳುವಾಗಿದ್ದ 10.5 ಲಕ್ಷ ರೂ. ಮೌಲ್ಯದ 17 ಬೈಕ್‌ಗಳ ಸಮೇತ ಕಾನೂನು ಸಂಘರ್ಷಕ್ಕೊಳಗಾದ ಓರ್ವ ಬಾಲಕ ವಶಕ್ಕೆ

0 367

ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು, ಆತನಿಂದ ದೊಡ್ಡಪೇಟೆ ಪೊಲೀಸ್ ಠಾಣೆಯ 04, ಸಾಗರ ಟೌನ್ ಪೊಲೀಸ್ ಠಾಣೆಯ 01, ಸಕರಾಯಪಟ್ಟಣ ಪೊಲೀಸ್ ಠಾಣೆಯ 01, ರಾಮನಗರ ಟೌನ್ ಪೊಲೀಸ್ ಠಾಣೆಯ 01, ದಾವಣಗೆರೆಯ 04, ಹೊನ್ನಾಳಿಯ 01, ಭದ್ರಾವತಿಯ 01, ಬೈಸೂರಿನ 01, ತಿಪಟೂರಿನ 01, ಹಾಸನದ 01 ಮತ್ತು ಹರಪನಹಳ್ಳಿಯ 01 ಪ್ರಕರಣ ಸೇರಿದಂತೆ ಒಟ್ಟು 17 ಬೈಕ್ ಗಳ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು 10,55,000 ರೂ.ಗಳ ಮೌಲ್ಯದ ಒಟ್ಟು 17 ಬೈಕ್ ಗಳನ್ನು ಅಮಾನತು ಪಡಿಸಿಕೊಳ್ಳಲಾಗಿದೆ.

ಕಳುವಾದ ಬೈಕ್ ಗಳು ಮತ್ತು ಆರೋಪಿಗಳ ಪತ್ತೆಗಾಗಿ ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ, ಪೊಲೀಸ್ ಮತ್ತು ಎಎಸ್‌ಪಿ ಅನಿಲ್ ಕುಮಾರ್ ಭೂಮರೆಡ್ಡಿ ಇವರ ಮಾರ್ಗದರ್ಶನದಲ್ಲಿ, ಬಾಲರಾಜ್ ಬಿ. ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ರವಿ ಕುಮಾರ್ ಪಿ.ಐ ದೊಡ್ಡಪೇಟೆ ಪೊಲೀಸ್ ಠಾಣೆರವರ ನೇತೃತ್ವದಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣೆಯ ಶ್ರೀನಿವಾಸ್ ಪಿಎಸ್ಐ , ತಿಮ್ಮಪ್ಪ ಪಿಎಸ್ಐ, ಹೆಚ್.ಸಿ ಪಾಲಾಕ್ಷ ನಾಯ್ಕ್, ಪಿಸಿ ಚಂದ್ರ ನಾಯ್ಕ್ ಪಿ, ಚಂದ್ರಾನಾಯ್ಕ್ ಎಂ, ಹೇಮಂತ್, ಪುನೀತ್, ಮನೋಹರ್, ನಿತಿನ್ ಮತ್ತು ಸುಮಿತ್ರಾ ಬಾಯಿ ರವರುಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.

ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಶಿವಮೊಗ್ಗ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!