ಪಂಚನದಿಗಳ ಉಗಮಸ್ಥಾನ ಶ್ರೀ ಕುಮದ್ವತಿ ತೀರ್ಥದ
5ನೇ ವರ್ಷದ ದೀಪೋತ್ಸವ | ಪ್ರಕೃತಿ ಸಂರಕ್ಷಣೆ, ಸ್ಥಾನೀಯ ಇತಿಹಾಸ ಸ್ಮರಣೆ ; ಹೊಂಬುಜ ಶ್ರೀಗಳು

0 398

ರಿಪ್ಪನ್‌ಪೇಟೆ : “ಪ್ರಾಚೀನ ತೀರ್ಥಕ್ಷೇತ್ರಗಳು ಪ್ರಕೃತಿ-ಪರಿಸರ ರಕ್ಷಣೆಯ ಸಂದೇಶ ಸಾರುವ ಐಹಿತ್ಯ ಹೊಂದಿವೆ. ನದಿಗಳ ಮೂಲವಾಗಿರುವ ಕುಮದ್ವತಿ ತೀರ್ಥವು ಪ್ರಕೃತಿಯ ಒಡಲಿನಿಂದ ಜಲಧಾರೆಯನ್ನು ಮಾನವ ಕುಲಕ್ಕೆ ಮತ್ತು ಪ್ರಾಣಿ ಪಕ್ಷಿಗಳಿಗೆ ನೀಡುವ ಅಪೂರ್ವ ತಾಣವಾಗಿದೆ” ಎಂದು ಹೊಂಬುಜ (Hombuja) ಅತಿಶಯ ಶ್ರೀಕ್ಷೇತ್ರ ಹೊಂಬುಜದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ತಿಳಿಸಿದರು.

ಅವರು ಶ್ರೀಕ್ಷೇತ್ರದಲ್ಲಿ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಬಳಿಕ ಭೂಮಿಗೆ ಅಮೂಲ್ಯ ಜಲನಿಧಿಯಾಗಿ ಆರಾಧಿಸಲ್ಪಡುವ ಕುಮುದ್ವತಿ ತೀರ್ಥದಲ್ಲಿ ಕಾರ್ತೀಕ ಲಕ್ಷದೀಪೋತ್ಸವ ನಿಮಿತ್ತ ಸೋಮವಾರದಂದು ನಡೆದ ಧಾರ್ಮಿಕ ಪ್ರವಚನದಲ್ಲಿ “ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ಜೀವನ ನಿರ್ವಹಣೆ ಸುಲಲಿತ. ಆದರೆ ನಮ್ಮ ಪೂರ್ವಜರು ಆರಾಧಿಸುವ ಪುಣ್ಯಪವಿತ್ರ ಸಾನಿಧ್ಯದ ಇತಿಹಾಸ ಅರಿತು, ಪರಂಪರೆ ಉಳಿಸುವ ಮೂಲಕ ಆಧ್ಯಾತ್ಮಿಕ ಸ್ಪರ್ಶದಿಂದ ಶಾರೀರಿಕ-ಮಾನಸಿಕ ಆರೋಗ್ಯ ವರ್ಧಿಸುತ್ತದೆ. ಧಾರ್ಮಿಕ ಪ್ರಜ್ಞೆ ಬೆಳೆದು ಪ್ರೀತಿ ವಾತ್ಸಲ್ಯದ ಅನ್ಯೋನ್ಯ ಸಂಬಂಧಗಳು ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುವಂತೆ ಪ್ರೇರಣೆ ನೀಡುತ್ತದೆ ಎಂದು ವಿವರಿಸುತ್ತಾ ಕಾರ್ತೀಕ ಮಾಸದಲ್ಲಿ ದೀಪಾರಾಧನೆಯ ಸಂಸ್ಕೃತಿಯು ಸ್ಥಾನಿಕ ಅಭಿವೃದ್ಧಿ, ರಕ್ಷಣೆಗಾಗಿ ಸಂದೇಶ ನೀಡುತ್ತಿದ್ದು, ಪ್ರತಿಯೋರ್ವರ ಸದ್ಭಾವನೆಯ ಜೀವನ ಯಶಸ್ವಿಯಾಗಲಿ” ಎಂದು ಆಶೀರ್ವಚನ ನೀಡಿದರು.

ಊರ ಸಮಸ್ತರು, ಪರವೂರ ಭಕ್ತರು ವೈಶಿಷ್ಟಪೂರ್ಣ ದೀಪಾರಾಧನೆಯ ವರ್ಣರಂಜಿತ ದೃಶ್ಯಗಳಿಂದ ಮಂತ್ರಮುಗ್ಧರಾದರು. ಶ್ರೀಮಠದ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಹುಂಚ-ಬಿಲ್ಲೇಶ್ವರ ಗ್ರಾಮದ ನಾಗರೀಕರು ಲಕ್ಷದೀಪೋತ್ಸವದ ದೃಶ್ಯಾವಳಿಯಿಂದ ಪುನೀತರಾದರು.

Leave A Reply

Your email address will not be published.

error: Content is protected !!