HOSANAGARA ; ಸಂಘ ಆರಂಭಗೊಂಡು ಮೂರು ವರ್ಷವಾಗಿದ್ದು ನಿಧಾನಗತಿಯಲ್ಲಿ ಆರ್ಥಿಕ ಪ್ರಗತಿಯತ್ತ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಜಿ.ಸತ್ಯನಾರಾಯಣ ತಿಳಿಸಿದರು.
ಪಟ್ಟಣದ ಈಡಿಗರ ಸಭಾ ಭವನದಲ್ಲಿ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
220 ಸದಸ್ಯ ಬಲದೊಂದಿಗೆ ಆರಂಭಗೊಂಡ ಸಂಘವು ಪ್ರಸಕ್ತ ಸಾಲಿನಲ್ಲಿ 526 ಸದಸ್ಯರನ್ನು ಹೊಂದಿದೆ. ಕಳೆದ ಸಾಲಿನಲ್ಲಿ ಇದ್ದ 75 ಸಾವಿರ ರೂ. ಮೊತ್ತದ ಠೇವಣಿ ಸಂಗ್ರಹದ ಮೊತ್ತ ಇಂದು 24,26,975 ರೂ. ಆಗಿ ಏರಿಕೆ ಕಂಡಿದೆ. ಹಿಂದಿನ ಆರ್ಥಿಕ ಸಾಲಿಗೆ ಹೋಲಿಸಿದಲ್ಲಿ ಸಂಘವು ಒಟ್ಟಾರೆ ಪ್ರಗತಿ ಕಂಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ವಾರಂಬಳ್ಳಿ ಜಿ. ಹಾಲಪ್ಪ, ಹಿರಿಯ ಲೆಕ್ಕ ಪರಿಶೋಧಕ ರಘುನಾಥ್ ಭಟ್, ಉಪಾಧ್ಯಕ್ಷೆ ಪೂರ್ಣಿಮಾ ಮೂರ್ತಿರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಮಂತ್, ನಿರ್ದೇಶಕರಾದ ಧನಂಜಯ ಮಂಡಾನಿ, ತೊಗರೆ ದಿನೇಶ್, ಗಂಗಾ ದೇವರಾಜ್, ನಾಗೇಶ್ ಹೆಚ್.ಎನ್, ಎಸ್.ಕೆ.ನಾಗಪ್ಪ, ಎನ್.ಪಿ.ರಮೇಶ್, ಟಿ.ಎನ್.ಶ್ರೀಪತಿ, ಪಿ.ತಿಮ್ಮಪ್ಪ, ಕೆ.ಈ. ಯೋಗೇಂದ್ರ, ಸಲಹ ಸಮಿತಿ ನಿರ್ದೇಶಕ ಲೋಕೇಶ್ವರ ಮಂಡಾನಿ, ಮಧುಸೂದನ್, ದಿವಾಕರ್, ನಿತ್ಯಾನಂದ, ಟೀಕಪ್ಪ ಸೇರಿದಂತೆ ಷೇರುದಾರರು ಸಭೆಯಲ್ಲಿ ಭಾಗವಹಿಸಿದ್ದರು.