ಹೊಸನಗರ ; ಪಟ್ಟಣದ ವಿದ್ಯುತ್ ಗುತ್ತಿಗೆದಾರ ಬಾವಿಕಟ್ಟೆ ಸತೀಶ್‌ರವರ ಸಹೋದರಿ ಜಯಲಕ್ಷ್ಮಿ ವಿಜಯಕುಮಾರ್‌ರವರ ಪುತ್ರಿ ವೈಷ್ಣವಿ ವಿಜಯಕುಮಾರ್‌ರವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯಾಗಿ 2024-25ನೇ ಸಾಲಿನ ಪರೀಕ್ಷೆ ಎದುರಿಸಿದ್ದು ಇತ್ತೀಚೆಗೆ ಪ್ರಕಟಗೊಂಡ ಫಲಿತಾಂಶದಲ್ಲಿ 625ಕ್ಕೆ 618 ಅಂಕ ಗಳಿಸಿದ್ದು ಇದರಿಂದ ಅಸಮಾದಾನಗೊಂಡ ವಿದ್ಯಾರ್ಥಿನಿ ವೈಷ್ಣವಿ ಮರು ಮೌಲ್ಯಮಾಪನಕ್ಕೆ ಹಾಕಿದಾಗ 625ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ 3ನೇ ಸ್ಥಾನ ಪಡೆದು ಹೊಸನಗರ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ಪರಿಶ್ರಮದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ: ಕಟ್ಟೆ ಸುರೇಶ್
ಯಾವುದೇ ಕೆಲಸ ಮಾಡಬೇಕಾದರೆ ಯಶಸ್ಸು ಕಾಣಬೇಕಾದರೆ ಅದರ ಹಿಂದೆ ಪರಿಶ್ರಮ ಇದ್ದಾಗ ಮಾತ್ರ ಯಶಸ್ವಿಗೊಳಿಸಲು ಸಾಧ್ಯ. ಅವರ ಜೊತೆಗೆ ಬೆಂಬಲಕ್ಕಾಗಿ ತಾಯಿ ಹಾಗೂ ಹಿರಿಯರ ಬೆಂಬಲ ಬೇಕು ಎಂದು ಸ್ಫೋಟ್ಸ್ ಅಸೋಸಿಯೇಶನ್ ವ್ಯವಸ್ಥಾಪಕ ಕಟ್ಟೆ ಸುರೇಶ್ ಹೇಳಿದರು.
ವೈಷ್ಣವಿ ವಿಜಯಕುಮಾರ್‌ರವರ ಮನೆಗೆ ಕಟ್ಟೆ ಸುರೇಶ್‌ರವರ ನೇತೃತ್ವದ ಹೊಸನಗರದ ಸ್ನೇಹ ಬಳಗದ ತಂಡ ಭೇಟಿ ನೀಡಿ ವೈಷ್ಣವಿಯವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಅವರು ಮಾತನಾಡಿದರು.
ವೈಷ್ಣವಿಯವರು ಹೊಸನಗರ ತಾಲ್ಲೂಕಿಗೆ ಕೀರ್ತಿಪಾತಕೆ ಹಾರಿಸಿದ್ದಾರೆ. ಇವರ ಹಿಂದೆ ಇವರ ತಾಯಿ ಜಯಲಕ್ಷ್ಮಿ ಅಜ್ಜಿ ಸೀತಮ್ಮ ಹಾಗೂ ಮಾವಂದಿರಾದ ವೆಂಕಟೇಶ್ ಅತ್ತೆ ಜಯಲಕ್ಷ್ಮಿ ಬಾವಿಕಟ್ಟೆ ಸತೀಶ್, ರಾಜುರವರ ಕೊಡುಗೆ ಅಪಾರವಾಗಿದ್ದು ಇದರ ಜೊತೆಗೆ ಶಿಕ್ಷಕರ ಪಾತ್ರವೂ ಹೆಚ್ಚಿನ ಪ್ರಮಾಣದಲ್ಲಿದೆ ಮುಂದಿನ ದಿನದಲ್ಲಿ ಇನ್ನೂ ಯಶಸ್ವು ಸಿಗಲಿ ಎಂದು ಸಿಹಿ ತಿನಿಸಿ ತಾಯಿ ವಿಜಯಕುಮಾರಿಯವರನ್ನು ಹಾಗೂ ವೈಷ್ಣವಿಯವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಳೂರು ಸೊಸೈಟಿ ನಿರ್ದೆಶಕರಾದ ಹೆಚ್. ಶ್ರೀನಿವಾಸ್, ಮುರುಳಿಧರ ಹತ್ವಾರ್, ಜಿ.ಟಿ ಈಶ್ವರಪ್ಪ ಗೌಡ, ಮಿಲ್ ಈಶ್ವರಪ್ಪ ಗೌಡ, ಗುತ್ತಿಗೆದಾರ ಹೆಚ್ ಮಹಾಬಲ, ಕೆ.ಜಿ ನಾಗೇಶ್, ಗೌತಮ್ ಕುಮಾರಸ್ವಾಮಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಾಸಂತಿ ರಾಜೇಂದ್ರ ಕೊತ್ವಾಲ್, ಕಟ್ಟೆ ಸುರೇಶ್, ಮೋಹನ್ ಮೋಹನ್ ಶೆಣೈ, ಗುತ್ತಿಗೆದಾರ ದಿವಾಕರ್ ಶೆಟ್ಟಿ, ವೆಂಕಟೇಶ್, ದೈಹಿಕ ಶಿಕ್ಷಕಿ ಅತ್ತೆ ಜಯಲಕ್ಷ್ಮಿ ವೆಂಕಟೇಶ್, ಬಾವಿಕಟ್ಟೆ ಸತೀಶ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.