ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ತಕ್ಷಣ ನಿಲ್ಲಿಸಿ ; ಹೊಂಬುಜ ಶ್ರೀಗಳು

Written by Mahesha Hindlemane

Published on:

ಹೊಂಬುಜ ; ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಶ್ರೀ ಕ್ಷೇತ್ರ ಹೊಂಬುಜ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಶ್ರೀಗಳು, ಗೇರುಸೊಪ್ಪ, ರಾಣಿ ಚನ್ನಭೈರವದೇವಿಯ ಐತಿಹಾಸಿಕ ರಾಜಧಾನಿ. ಇಂದಿಗೂ ಅನೇಕ ಜೈನ ದೇವಾಲಯಗಳು, ಸಾಂಸ್ಕೃತಿಕ ಸ್ಮಾರಕಗಳು ಹಾಗೂ ಅರಣ್ಯ ಸೌಂದರ್ಯವನ್ನು ಹೊತ್ತುಕೊಂಡಿರುವ ಈ ಪ್ರದೇಶವು ನಮ್ಮ ಪರಂಪರೆಯ ಹೆಮ್ಮೆ.

ಪ್ರಸ್ತಾಪವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಗೇರುಸೊಪ್ಪ ಪ್ರದೇಶದ ಐತಿಹಾಸಿಕ ಸ್ಮಾರಕಗಳನ್ನು ನಾಶಮಾಡುವುದರ ಜೊತೆಗೆ, ಅರಣ್ಯಗಳನ್ನು ಮುಳುಗಿಸುವ ಮೂಲಕ ಅನೇಕ ಜೀವಜಲ, ಪಕ್ಷಿ-ಪ್ರಾಣಿ, ಮತ್ತು ಸಸ್ಯಗಳನ್ನು ಅಪಾಯಕ್ಕೊಳಪಡಿಸುತ್ತದೆ.

ಈ ಯೋಜನೆ ಅನುಷ್ಠಾನಗೊಂಡರೆ :

ಐತಿಹಾಸಿಕ ನಾಶ: ರಾಣಿ ಚನ್ನಭೈರವದೇವಿಯ ಕಾಲದ ಸ್ಮಾರಕಗಳು ಅಳಿದು ಹೋಗುತ್ತವೆ.

ಪರಿಸರ ಹಾನಿ: ದಟ್ಟ ಅರಣ್ಯಗಳು ಮುಳುಗಿ ಜೀವವೈವಿಧ್ಯ ನಾಶವಾಗುತ್ತದೆ.

ಸಮುದಾಯ ಹಾನಿ: ಸ್ಥಳೀಯ ಜನರ ಬದುಕು, ಸಂಸ್ಕೃತಿ, ಆಸ್ಥೆ ಅಪಾಯಕ್ಕೊಳಗಾಗುತ್ತದೆ.

ಅದಕ್ಕಾಗಿ ಸರ್ಕಾರ ಮತ್ತು ಆಡಳಿತವು ಈ ಯೋಜನೆಯನ್ನು ತಕ್ಷಣ ನಿಲ್ಲಿಸಿ, ಗೇರುಸೊಪ್ಪವನ್ನು ಐತಿಹಾಸಿಕ ಹಾಗೂ ಪರಿಸರ ಸಂವೇದನಾಶೀಲ ಕ್ಷೇತ್ರವೆಂದು ಘೋಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Leave a Comment